* ಒಳಉಡುಪು ತೆಗೆಯದೇ ಮಾಡುವ ಲೈಂಗಿಕ ದೌರ್ಜನ್ಯವೂ ‘ಅತ್ಯಾಚಾರ’: ಮೇಘಾಲಯ ಹೈಕೋರ್ಟ್* ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಹತ್ವದ ಅಭಿಪ್ರಾಯ* ಭಾರತೀಯ ದಂಡ ಸಂಹಿತೆಯ 357(ಬಿ) ಸೆಕ್ಷನ್‌  ಉಲ್ಲೇಖ

ಶಿಲ್ಲಾಂಗ್‌ (ಮಾ. 18): ಮಹಿಳೆಯ (Woman) ಒಳ ಉಡುಪು ತೆಗೆಯದಿದ್ದರೂ ಆಕೆಯ ಜನನಾಂಗದ ಮೇಲೆ ಪುರುಷ ಅಂಗವನ್ನು ಉಜ್ಜುವುದು (Rape) ಅತ್ಯಾಚಾರಕ್ಕೆ ಸಮಾನವಾದುದು ಎಂದು ಮೇಘಾಲಯ(Meghalaya) ಹೈಕೋರ್ಟ್‌ ಗುರುವಾರ ಹೇಳಿದೆ. ಹಾಗಾಗಿ ಇಂತಹ ಘಟನೆಗಳಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. 2006ರ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಭಾರತೀಯ ದಂಡ ಸಂಹಿತೆಯ 357(ಬಿ) ಸೆಕ್ಷನ್‌ ಪ್ರಕಾರ ಸ್ತ್ರೀ ಜನನಾಂಗದ ಒಳಗೆ ಯಾವುದೇ ವಸ್ತು ಇರಿಸುವುದು ಅತ್ಯಾಚಾರ ಎಂದು ಪರಿಗಣಿಸಲ್ಪಡುತ್ತದೆ. ಆದರೆ ಆ ರೀತಿಯ ಪ್ರಯತ್ನಗಳು ನಡೆದರೂ ಅದನ್ನು 375(ಬಿ) ಅಡಿಯಲ್ಲಿ ಅತ್ಯಾಚಾರ ಎಂದು ಪರಗಣಿಸಬೇಕು ಎಂದು ಕೋರ್ಟ್‌ ಹೇಳಿದೆ.

ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ ನಡೆಸಿರುವ ವ್ಯಕ್ತಿಗೆ ಕೋರ್ಟ್‌ 10 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿದೆ. ದಂಡ ಪಾವತಿಸಲು ವಿಫನಾದರೆ ಹೆಚ್ಚುವರಿಯಾಗಿ 6 ತಿಂಗಳು ಶಿಕ್ಷೆ ಅನುಭವಿಸಬೇಕು ಎಂದು ಹೇಳಿದೆ. ಈ ಪ್ರಕರಣದಲ್ಲಿ ದೋಷಿಯು ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಕ್ಕೆ ಸ್ಪಷ್ಟಪುರಾವೆಗಳಿರುವುದಾಗಿ ಕೋರ್ಟ್‌ ಹೇಳಿದೆ.

ಮಗು ಜನಿಸಿದರೆ ಪರಿಹಾರ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಡಿಸ್ಕ್ ಜಾಕಿಯ ಜೀವಾವಧಿ ಶಿಕ್ಷೆಯನ್ನು 10 ವರ್ಷಕ್ಕೆ ಇಳಿಸಿ ನ್ಯಾಯಾಲಯ ತೀರ್ಪು ನೀಡಿದೆ. ಇದರೊಂದಿಗೆ ಅತ್ಯಾಚಾರಕ್ಕೆ ಒಳಗಾದ ಗರ್ಭಿಣಿಯರಿಂದ ಹುಟ್ಟುವ ಮಕ್ಕಳಿಗೂ ಅಪರಾಧಕ್ಕೆ ಬಲಿಯಾಗುತ್ತಾರೆ, ಆದ್ದರಿಂದ ಅವರಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಹೇಳಿತ್ತು. 

Sexual Harassment : ಅಣ್ಣನ ಮಕ್ಕಳನ್ನೇ ಕಾಡಿದ ಕಾಮುಕನಿಗೆ ಪತ್ನಿಯದ್ದೂ ಸಾಥ್ ...ಶಿಕ್ಷೆ ಕಡಿಮೆ ಆಯ್ತು!

ಸಂತ್ರಸ್ತೆಯ ಮಗುವಿಗೆ 2 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆರೋಪಿಗೆ ಆದೇಶ ಮಾಡಿತ್ತು. ಅತ್ಯಾಚಾರ ಸಂತ್ರಸ್ತೆಗೆ ಹೆರಿಗೆಯಾದ ಬಳಿಕ ಹುಟ್ಟಿದ ಮಗುವನ್ನು ಬಾಲಕಿಯ ಕುಟುಂಬದವರು ಮಾತ್ರವಲ್ಲದೆ ಅಪರಾಧಿಯೂ ಕೈಬಿಟ್ಟು ಅನಾಥಾಶ್ರಮದಲ್ಲಿ ೆಳೆಯುತ್ತಿರುವುದನ್ನು ಕಂಡು ನ್ಯಾಯಮೂರ್ತಿ ಸಾಧನಾ ಜಾಧವ್ ಮತ್ತು ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್ ಅವರಿದ್ದ ವಿಭಾಗೀಯ ಪೀಠ ಹೇಳಿತ್ತು..

ನ್ಯೂಸ್‌ ಚಾನೆಲ್‌ಗಳ ರೇಟಿಂಗ್‌ ಪ್ರಕಟಣೆ 18 ತಿಂಗಳ ಬಳಿಕ ಶುರು: ಟೀವಿ ಮೇಲ್ವಿಚಾರಣಾ ಸಂಸ್ಥೆ ಬಿಎಆರ್‌ಸಿ (ಬಾರ್ಕ್), ಸುದ್ದಿ ವಾಹಿನಿಗಳ ರೇಟಿಂಗ್‌ ಪ್ರಕಟಿಸುವುದನ್ನು ಸುಮಾರು 18 ತಿಂಗಳ ನಂತರ ಗುರುವಾರ ಮತ್ತೆ ಆರಂಭಿಸಿದೆ.ಹಲವಾರು ಪ್ರಭಾವೀ ಸುದ್ದಿ ವಾಹಿನಿಗಳು ರೇಟಿಂಗ್‌ಗಳಲ್ಲಿ ಹಸ್ತಕ್ಷೇಪ ಮಾಡುತ್ತಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಕ್ಟೋಬರ್‌ 2020ರಲ್ಲಿ ಪ್ರಸಾರ ಶೋತೃ ಸಂಶೋಧನಾ ಸಂಸ್ಥೆ (ಬಿಎಆರ್‌ಸಿ)ಯು ರೇಟಿಂಗ್‌ ಪ್ರಕಟಿಸುವುದರ ಮೇಲೆ ನಿರ್ಬಂಧ ಹೇರಲಾಗಿತ್ತು.

ಜನವರಿ 2022ರಲ್ಲಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ವೀಕ್ಷಕರ ರೇಟಿಂಗ್‌ನ್ನು ಪ್ರಕಟಿಸುವಂತೆ ಬಿಎಆರ್‌ಸಿಗೆ ನಿರ್ದೇಶನ ನೀಡಿತ್ತು. ಇದಾದ 2 ತಿಂಗಳ ನಂತರ ಮತ್ತೆ ರೇಟಿಂಗ್‌ ಪ್ರಕಟಣೆಯ ಕಾರ್ಯವನ್ನು ಆರಂಭಿಸಲಾಗಿದೆ.