ಮಂಗಳೂರು(ಮಾ. 29)   ಸಿಡಿ ಲೇಡಿಯ ನಡೆ ನೋಡಿ  ಆದ್ರಾ ಜಾರಕಿಹೊಳಿ‌ ಬ್ರದರ್ಸ್ ಶಾಕ್ ಆದ್ರಾ ಎನ್ನುವ  ಪ್ರಶ್ನೆಗಳು ಎದ್ದಿವೆ ಕೋರ್ಟ್ ಗೆ ಸಿಡಿ ಲೇಡಿ ಅರ್ಜಿ ಹಾಕಿದ  ಕಾರಣಕ್ಕೆ ಮತ್ತಷ್ಟು ಮಾಹಿತಿಯನ್ನು ಬಾಲಚಂದ್ರ ಜಾರಕಿಹೊಳಿ ಕಲೆ ಹಾಕುತ್ತಿದ್ದಾರೆ.

ಪ್ರಕರಣ ಕುರಿತು ಹೆಚ್ಚು ಆಸಕ್ತಿ ವಹಿಸಿರುವ ಬಾಲಚಂದ್ರ ಜಾರಕಿಹೊಳಿ ಬೆಳಿಗ್ಗೆಯಿಂದ ರಹಸ್ಯ ಸ್ಥಳದಲ್ಲಿ ಸಮಾಲೋಚನೆ ನಡೆಸುತ್ತಿದ್ದಾರೆ. ವಕೀಲರು ಹಾಗು ಕಾನೂನು ತಜ್ಞರ ಜತೆ ನಿರಂತರ ಸಮಾಲೋಚನೆ ನಡೆಸಿ ಸಲಹೆ ಪಡೆದುಕೊಂಡಿದ್ದಾರೆ.

ಸಿಡಿ ಕೇಸ್; ಡಿಕೆಶಿ ಹಾಕಿದ ದೊಡ್ಡ ಸವಾಲು?

ಕೋರ್ಟ್ ಗೆ ಹೋಗಿರುವುದರಿಂದ ಮುಂದಿನ ಬೆಳವಣಿಗೆ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಸಹೋದರನ ಬಂಧನದ  ಸಾಧ್ಯಾ- ಸಾಧ್ಯತೆ ಎಷ್ಟಿದೆ ಎಂಬ ಬಗ್ಗೆ ಬಾಲಚಂದ್ರ ಜಾರಕಿಹೊಳಿ‌ ವಕೀಲರ ಜತೆ ಚರ್ಚೆ ನಡೆಸಿದ್ದಾರೆ. ಕಾನೂನು ಕ್ರಮಗಳ ಬಗ್ಗೆ ವಕೀಲರ ಸಲಹೆ ಪಡೆದಿರುವ ಬಾಲಚಂದ್ರ ಪಕ್ಷದ ಕೆಲ ನಾಯಕರ ಜೊತೆಗೂ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. 

ಸಿಡಿ ಲೇಡಿ ನ್ಯಾಯಾಲಯದ ಮುಂದೆ ಹಾಜರಾಗುತ್ತಾರೆ, ಅಥವಾ ನ್ಯಾಯಧೀಶರ ಮುಂದೆ ಹಾಜರಾಗುತ್ತಾರೆ ಎಂದು  ಹೇಳಲಾಗಿತ್ತು ಆದೇಶ ಪ್ರತಿ ಈಗಷ್ಟೇ ಕೈಸೇರಿದೆ ಎಂದು ಲೇಡಿ ಪರ ವಕೀಲ ಜಗದೀಶ್ ತಿಳಿಸಿದ್ದಾರೆ.