ಬೆಂಗಳೂರು(ಮಾ.  30)  ನ್ಯಾಯಾಲಯಕ್ಕೆ ಯುವತಿಯನ್ನು ಕರೆದುಕೊಂಡು ಬರಲಾಗಿದೆ ಎಂದು  ವಕೀಲ ಜಗದೀಶ್ ಹೇಳಿದ್ದರೆ ಅಸಲಿ ಕತೆ ಬೇರೆಯೇ ಇದೆ.  ಬೆಂಗಳೂರಿನ ಗೌಪ್ಯ ಸ್ಥಳವೊಂದರಲ್ಲಿ ಯುವತಿಯಿಂದ ಹೇಳಿಕೆ ಪಡೆದುಕೊಳ್ಳಲಾಗಿದೆ.

ಸಿಆರ್‌ಪಿಸಿ  164   ಅಡಿ ಯುವತಿಯ ಸ್ಟೇಟ್ ಮೆಂಟ್ ರಜಿಸ್ಟರ್  ಮಾಡಿಸಿಕೊಳ್ಳಲಾಗುತ್ತಿದೆ. ಈ ಸ್ಟೇಟ್ ಮೆಂಟ್ ಪಡೆದುಕೊಳ್ಳುವಾಗ ನ್ಯಾಯಾಧೀಶರು, ಸಂತ್ರಸ್ತೆ ಮತ್ತು ಟೈಪಿಸ್ಟ್ ಮಾತ್ರ ಇರುತ್ತಾರೆ.

28  ದಿನಗಳ ಬಳಿಕ ಸಿಡಿ ಲೇಡಿ ಪ್ರತ್ಯಕ್ಷ;  ರಹಸ್ಯವಾಗಿಯೇ ಕರೆದುಕೊಂಡು ಹೋದ್ರು!

ಬಿಗಿ ಪೊಲೀಸ ಭದ್ರತೆಯನ್ನು ಮಾಡಲಾಗಿದ್ದು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಒಟ್ಟಿನಲ್ಲಿ ಮೊದಲಿನಿಂದಲೂ ಗೊಂದಲದ ಗೂಡೇ ಆಗಿದ್ದ ಸಿಡಿ ಪ್ರಕರಣ  ಇದೀಗ ಯುವತಿ ಹೇಳಿಕೆ ಪಡೆದುಕೊಳ್ಳುವಾಗಲೂ ಅಂಥದ್ದೇ ಘಟನೆಗೆ ಸಾಕ್ಷಿಯಾಯಿತು. ವಕೀಲ ಜಗದೀಶ್ ನ್ಯಾಯಾಲಕ್ಕೆ ಹಾಜರು ಪಡಿಸುತ್ತೇವೆ ಎಂದು  ಹೇಳಿ ಬೇರೆ ಕಡೆ  ಹೇಳಿಕೆ ಕೊಡಿಸುವ ಕೆಲಸ ಮಾಡಿದರು .  ಈ ಹಿಂದೆ ಯುವತಿ ವಕೀಲ ಜಗದೀಶ್ ಮೂಲಕ ಲಿಖಿತ ದೂರನ್ನು ಸಲ್ಲಿಸಿದ್ದರು.

"