* ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ* ಪೊಲೀಸ್ ಅಧಿಕಾರಿಗಳಿಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್* ಪ್ರಕರಣದ ತನಿಖೆ ಸರಿಯಾಗಿಯೇ ನಡೆದಿದೆ* ರಾಜಕಾರಣದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದ್ದ ಪ್ರಕರಣ 

ಬೆಂಗಳೂರು(ಡಿ. 14) ರಮೇಶ್ ಜಾರಕಿಹೊಳಿ (Ramesh Jarkiholi) ಸಿಡಿ ಬಹಿರಂಗ (Sex CD Scandal) ಪ್ರಕರಣದಲ್ಲಿ ಪೊಲೀಸ್ (Bengaluru Police) ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿತ್ತು ಎನ್ನುವ ಸುದ್ದಿ ಬಂದಿತ್ತು. ಪೊಲೀಸ್ ಆಯುಕ್ತರಿಗೆ ಇದೀಗ ಬಿಗ್ ರಿಲೀಫ್ ಸಿಕ್ಕಿದೆ. 

ಪೊಲೀಸ್ ಅಧಿಕಾರಿಗಳ ವಿರುದ್ಧದ ಕೇಸ್ ರದ್ದುಪಡಿಸಿದ ಹೈಕೋರ್ಟ್ (High Court) ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಎಂ.ಎನ್.ಅನುಚೇತ್, ಇನ್ಸ್ ಪೆಕ್ಟರ್ ಮಾರುತಿ.ಬಿ ವಿರುದ್ಧದ ತನಿಖೆ ರದ್ದುಗೊಳಿಸಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸದ ಆರೋಪ ಬಂದಿತ್ತು. ಆದರ್ಶ್ ಅಯ್ಯರ್ ಎಂಬುವರು ಖಾಸಗಿ ದೂರು ದಾಖಲಿಸಿದ್ದರು.

Belagavi MLC Result:ಸ್ವಪ್ರತಿಷ್ಠೆಗಾಗಿ ಬಿಜೆಪಿಯನ್ನೇ ಸೋಲಿಸಿದ್ರಾ ರಮೇಶ್ ಜಾರಕಿಹೊಳಿ?

ರಮೇಶ್ ಜಾರಕಿಹೊಳಿ ಪ್ರಕರಣದ ತನಿಖೆ ಮುಕ್ತಾಯವಾಗಿದೆ. ಕಾನೂನು ಪ್ರಕಾರವೇ ತನಿಖೆ ನಡೆಸಲಾಗಿದೆ. ಅಂತಿಮ ವರದಿ ಸಲ್ಲಿಸಲು ಅನುಮತಿ ಕೋರಲಾಗಿದೆ. ಹೈಕೋರ್ಟ್ ಗೆ ಈ ಸಂಬಂಧ ಅರ್ಜಿ ಸಲ್ಲಿಸಲಾಗಿದೆ ಎಂದು ಎಸ್ ಐಟಿ ಪರ ಎಸ್ ಪಿಪಿ ಪ್ರಸನ್ನ ಕುಮಾರ್ ವಾದ‌ ಮಂಡಿಸಿದ್ದರು.

ಸಾಮಾಜಿಕ ಕಾರ್ಯಕರ್ತರ ದಿನೇಶ್ ಕಲ್ಲಳ್ಳಿ ನೀಡಿದ್ದ ದೂರು ಗಂಭಿರವಾಗಿ ಪರಿಗಣಿಸದ ಪೊಲೀಸ್ ಕಮಿಷನರ್ ಕಮಲ್ ಪಂತ್ , ಡಿಸಿಪಿ ಅನುಚೇತ್ ಹಾಗು ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ಮಾರುತಿ ವಿರುದ್ಧ ತನಿಖೆಗೆ ಕೋರ್ಟ್ ಆದೇಶ ಹೊರಡಿಸಿತ್ತು.

ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ (Bengaluru 8th ACMM Court) ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದ್ದು, ಮೂವರು ಪೊಲೀಸ್ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿತ್ತು.

ಎಸಿಎಂಎಂ ಕೋರ್ಟ್ (ACMM Court) ) ಆದೇಶ ಪ್ರಶ್ನಿಸಿ ಎಸ್ಐಟಿ ವಿಶೇಷ ಅಭಿಯೋಕ ಪ್ರಸನ್ನ ಕುಮಾರ್ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಎಸಿಎಂಎಂ ಆದೇಶ ರದ್ದುಪಡಿಸುವಂತೆ ಹೈಕೋರ್ಟ್‌ ಅರ್ಜಿ ಮೂಲಕ ಮನವಿ ಮಾಡಿಕೊಂಡಿದ್ದರು.

ರಮೇಶ ಜಾರಕಿಹೊಳಿ ಅತ್ಯಾಚಾರ ಎಸಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಎಫ್ ಐ ಆರ್ ದಾಖಲಿಸದೆ ಪೊಲೀಸರಿಂದ ನಿರ್ಭಯ ಗೈಡ್ ಲೈನ್ಸ್ ಉಲ್ಲಂಘನೆ ಮಾಡಿದ್ರು.

ಈ ಹಿನ್ನೆಲೆಯಲ್ಲಿ ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಅಯ್ಯರ್ ಪಿಸಿಆರ್ ಸಲ್ಲಿಸಿದ್ದು, ಪೊಲೀಸ್ ಅಧಿಕಾರಿಗಳು ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪ ಮಾಡಿದ್ದರು.

ಸಂಚಲನ ಮೂಡಿಸಿದ್ದ ಸಿಡಿ ಪ್ರಕರಣ: ಜಲಸಂಪನ್ಲೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿತ್ತು. ಲೈಂಕಿಗ ಕ್ರಿಯೆಯಲ್ಲಿ ತೊಡಗಿರಿವ ಸಿಡಿ ಬಹಿರಂಗವಾಗಿತ್ತು. ಇದಾದ ಮೇಲೆ ರಮೇಶ್ ಮಂತ್ರಿ ಸ್ಥಾನ ಕಳೆದುಕೊಂಡಿದ್ದರು.

ವಿಶೇಷ ತನಿಖಾ ದಳದ ವ್ಯಾಪ್ತಿಗೆ ಪ್ರಕರಣವನ್ನು ನೀಡಲಾಗಿತ್ತು. ಸಂತ್ರಸ್ತ ಯುವತಿ ಸಹ ಹೇಳಿಕೆ ದಾಖಲಿಸಿದ್ದರು. ಈಗ ಅಂತಿಮವಾಗಿ ಎಸ್‌ಐಟಿ ತನಿಖೆಯ ಅನೇಕ ಹಂತಗಳನ್ನು ಮುಗಿಸಿದ್ದು ನ್ಯಾಯಾಲಯಕ್ಕೆ ವಿವರ ಸಲ್ಲಿಸಿದೆ.

ರಾಜಕಾರಣದಲ್ಲಿಯೂ ಈ ಪ್ರಕರಣ ಅನೇಕ ಬದಲಾವಣೆಗಳಿಗೆ ಕಾರಣವಾಗಿತ್ತು. ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಂಡಿದ್ದರು. ಇದೊಂದು ಬ್ಲಾಕ್ ಮೇಲ್ ಮಾಡಲು ಮಾಡಿದ ಪ್ರಕರಣ ಎಂದು ಜಾರಕಿಹೊಳಿಮ ಟೀಂ ಆರೋಪಿಸಿತ್ತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಕರಣದ ಸೂತ್ರಧಾರ ಎಂಬ ಆರೋಪವೂ ಕೇಳಿಬಂದಿತ್ತು.