Asianet Suvarna News Asianet Suvarna News

ಸ್ತ್ರೀರೋಗ ತಜ್ಞೆ Dr Archana Sharma ಆತ್ಮಹತ್ಯೆ ಪ್ರಕರಣದಲ್ಲಿ ಪತ್ರಕರ್ತ, ರಾಜಕಾರಣಿಗಳಿಗೆ ನಂಟು!

ದೇಶದಾದ್ಯಂತ ಸುದ್ದಿಯಾಗಿರುವ  ಸ್ತ್ರೀರೋಗ ತಜ್ಞೆ ಡಾ.ಅರ್ಚನಾ ಶರ್ಮಾ ಅವರ ಸಾವಿಗೆ ರಾಜಕಾರಣಿಗಳು ಮತ್ತು ಪತ್ರಕರ್ತ ಕಾರಣ ಎಂದು  ಆಕೆಯ ಪತಿ ಆರೋಪಿಸಿದ್ದಾರೆ.

Rajasthan Dr Archana Sharma committed Suicide after harass gow
Author
Bengaluru, First Published Mar 31, 2022, 2:08 PM IST

ದೌಸಾ(ಮಾ.31): ರಾಜಸ್ಥಾನದ (Rajasthan) ಖಾಸಗಿ ಆಸ್ಪತ್ರೆಯೊಂದರಲ್ಲಿ  ಗರ್ಭಿಣಿಗೆ ಸಿಸೇರಿಯನ್ ಮಾಡುವ ಸಮಯದಲ್ಲಿ ಮೃತಪಟ್ಟಿದ್ದರು. ಇದಕ್ಕೆ ಆಕ್ರೋಶಗೊಂಡ ಮೃತ ಮಹಿಳೆಯ ಕುಟುಂಬಸ್ಥರು ವೈದ್ಯೆ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ಇದರಿಂದ ನೊಂದ ವೈದ್ಯೆ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಮಾತ್ರವಲ್ಲ ಈ ಘಟನೆಯನ್ನು ಖಂಡಿಸಿ ದೇಶದಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ರಾಜಸ್ಥಾನದ ದೌಸಾ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಸಿಸೇರಿಯನ್ ಮಾಡುವ ಸಮಯದಲ್ಲಿ  ಸಾವನ್ನಪ್ಪಿದ ಮಹಿಳೆಯ ಸಂಬಂಧಿಕರು ಆಸ್ಪತ್ರೆಯ ನಿರ್ಲಕ್ಷ್ಯವನ್ನು ಆರೋಪಿಸಿ, ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಮಾಡಿದ್ದರು. ಗರ್ಭಿಣಿಯ ಸಾವಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಅಡಿಯಲ್ಲಿ ವೈದ್ಯೆ , ಸ್ತ್ರೀರೋಗ ತಜ್ಞೆ, ಅರ್ಚನಾ ಶರ್ಮಾ (Dr Archana Sharma) ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ಇದರಿಂದ ನೊಂದ ವೈದ್ಯೆ ಮಾನಸಿಕ ಹಿಂಸೆಗೆ ಒಳಗಾಗಿ ಮಾರ್ಚ್ 30 ರಂದು ಆತ್ಮಹತ್ಯೆಗೆ ಶರಣಾಗಿದ್ದರು.

ಮಾರ್ಚ್ 28 ರಂದು 22 ವರ್ಷದ ಗರ್ಭಿಣಿ ಮಹಿಳೆಯನ್ನು ಡಾ ಅರ್ಚನಾ ಶರ್ಮಾ ಮತ್ತು ಅವರ ಪತಿ ಡಾ ಸುನೀತ್ ಉಪಾಧ್ಯಾಯ ನಡೆಸುತ್ತಿರುವ ಆನಂದ್ ಆಸ್ಪತ್ರೆಗೆ ಕರೆತರಲಾಯಿತು. ಆಕೆಯನ್ನು ಲೇಬರ್ ರೂಮ್‌ಗೆ ಕರೆದೊಯ್ದರೂ, ಆಕೆಯ ಸ್ಥಿತಿ ಹದಗೆಟ್ಟಿತು ಮತ್ತು ತೀವ್ರ ರಕ್ತ ಸೋರಿಕೆಯಿಂದಾಗಿ ಗರ್ಭಿಣಿ ಸಾವನ್ನಪ್ಪಿದಳು. 

INDIAN NAVY RECRUITMENT 2022: ಅಪ್ರೆಂಟಿಸ್ ಮತ್ತು SSR ಬ್ಯಾಚ್‌ ಗೆ ಅರ್ಜಿ ಆಹ್ವಾನ

ರಾಜಕಾರಣಿಗಳು ಮತ್ತು ಪತ್ರಕರ್ತರ ಕೈವಾಡ!
ಆತ್ಮಹತ್ಯೆ ಮಾಡಿಕೊಂಡಿರುವ ಪತ್ನಿ ಡಾ.ಅರ್ಚನಾ ಶರ್ಮಾ ಅವರ ಪತಿ ಡಾ ಸುನೀತ್ ಉಪಾಧ್ಯಾಯ (Dr Suneet Upadhyay) ಅವರು ಕೂಡ ವೈದ್ಯರಾಗಿದ್ದು, ಸ್ಥಳೀಯ ರಾಜಕಾರಣಿಗಳು ಮತ್ತು ಪತ್ರಕರ್ತರು ಪ್ರಕರಣದಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆ. ವೈದ್ಯರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಸ್ಥಳೀಯ ಮುಖಂಡರು ಹಾಗೂ ಪತ್ರಕರ್ತರು ಪೊಲೀಸರ ಮೇಲೆ ಒತ್ತಡ ಹೇರಿದ್ದರು ಎಂದು ಆರೋಪಿಸಿದ್ದಾರೆ. ಮಹಿಳೆಯು ಪಿಪಿಎಚ್ ಸಮಸ್ಯೆಯಿಂದ  ಮೃತಪಟ್ಟಿದ್ದಾರೆ. ಆಸ್ಪತ್ರೆಯ ವೈದ್ಯರು ಸತ್ತವರ ಜೀವವನ್ನು ಉಳಿಸಲು ಪ್ರಯತ್ನಿಸುತ್ತಾರೆ ಎಂದು ಡಾ ಉಪಾಧ್ಯಾಯ  ಹೇಳಿದ್ದಾರೆ.

ಮೃತ ವ್ಯಕ್ತಿಯ ಅಂತಿಮ ಸಂಸ್ಕಾರಕ್ಕಾಗಿ ಮನೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಕುಟುಂಬವು ಆಸ್ಪತ್ರೆಗೆ ವಿನಂತಿಸಿತು. ನಾವು ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಿ ಕೊಟ್ಟೆವು. ನಂತರ ಬಿಜೆಪಿಯ ಶಿವಶಂಕರ ಬಲ್ಯ ಜೋಶಿ (Shiv Shankar Balya Joshi ), ಕುಟುಂಬದವರ ಬಳಿ ತೆರಳಿ ಮೃತದೇಹವನ್ನು ಮರಳಿ ಆಸ್ಪತ್ರೆಗೆ ತಂದಿದ್ದಾರೆ. 

ಜೋಶಿ ಅವರು ಡಾ.ಕಿರೋಡಿ ಲಾಲ್ ಮೀನಾ ( Dr Kirodi Lal Meena ) ಅವರ ಸಹಾಯ ಪಡೆದು ಕುಟುಂಬಕ್ಕೆ ಸಿಎಂ ನಿಧಿಯಿಂದ ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಿದರು.  200 ಜನರನ್ನು ಒಗ್ಗೂಡಿಸಿ ಇತರ ಬಿಜೆಪಿ ನಾಯಕರನ್ನು ಕರೆದು ಆಸ್ಪತ್ರೆಯ ವಿರುದ್ಧ ಪ್ರತಿಭಟಿಸಿ, ಡಾ ಅರ್ಚನಾ ಶರ್ಮಾ ಅವರ ವಿರುದ್ಧ ಕೊಲೆ ಕೊಲೆ ಯತ್ನದ ಆರೋಪವನ್ನೂ ಮಾಡಿದ್ದಾರೆ ಎಂದು ಪತಿ ವಿಡಿಯೋ ಬಿಡುಗಡೆ ಮಾಡಿ ಹೇಳಿದ್ದಾರೆ.

ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಕೊನೆ ಪ್ರಕರಣ ದಾಖಲಿಸಿದ್ದನ್ನು ಮರುದಿನ ಪತ್ರಿಕೆಯಲ್ಲಿ ಡಾ.ಅರ್ಚನಾ ಓದಿದರು. ಈ ಒತ್ತಡವನ್ನು ತಡೆಯಲು ಸಾಧ್ಯವಾಗದೆ, ಹೆದರಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ. ಪತ್ರಕರ್ತ ಮಹೇಶ್ ಬಿಹಾರಿ, ಜೋಶಿ ಮತ್ತು ಕಿರೋಡಿ ಲಾಲ್ ಮೀನಾ ಅವರು ನನ್ನನ್ನು ಜೈಲಿಗೆ ಕಳುಹಿಸುತ್ತಾರೆ ಎಂದು ಆಕೆ  ನಿರಂತರವಾಗಿ ಹೇಳುತ್ತಿದ್ದಳು. ಪತ್ರಕರ್ತ ಮಹೇಶ್ ಬಿಹಾರಿ ( journalist Mahesh Bihari) ಸುದ್ದಿಯ ಒಂದು ಭಾಗವನ್ನು ಮಾತ್ರ ಪರಿಗಣಿಸಿ ಸುದ್ದಿ ಪ್ರಕಟಿಸಿದ್ದಾರೆ. ಈ ವಿಚಾರದಲ್ಲಿ ಆಸ್ಪತ್ರೆಯ ಹೇಳಿಕೆಯನ್ನು ಪರಿಗಣಿಸಲಿಲ್ಲ ಜೊತೆಗೆ ಮುದ್ರಿಸಲಿಲ್ಲ ಎಂದು ಅರ್ಚನಾ ಪತಿ ಹೇಳಿದ್ದಾರೆ.

ಬಿಹಾರಿ, ಜೋಶಿಯಂತಹ ಜನರು ಆಸ್ಪತ್ರೆಗಳಲ್ಲಿ ಹಿಂಸಾಚಾರವನ್ನು ಸೃಷ್ಟಿಸಲು ಬಿಡಬಾರದು. ಡಾ.ಕಿರೋಡಿ ಲಾಲ್ ಮೀನಾ ಈ ಜನರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಮತ್ತು ಪೊಲೀಸರು ತಕ್ಷಣ ಅವರನ್ನು ಬಂಧಿಸಬೇಕು. ಜೋಶಿ ಒಬ್ಬ ಗೂಂಡಾ ಮತ್ತು ಈ ಹಿಂದೆ ಪೊಲೀಸರಿಗೂ ಹೊಡೆದಿದ್ದರು ಎಂದು ಆರೋಪಿಸಿದ್ದಾರೆ.

AICTE Recruitment 2022: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ವಿವಿಧ ಹುದ್ದೆಗಳ ನೇಮಕಾತಿ

ತನಿಖೆಗೆ ಮುಖ್ಯಮಂತ್ರಿ  ಆದೇಶ:  ಸ್ತ್ರೀರೋಗ ತಜ್ಞೆ  ಡಾ. ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣ ದೇಶದಾದ್ಯಂತ ಸುದ್ದಿಯಾಗುತ್ತಿದ್ದಂತೆಯೇ  ಬುಧವಾರ ಸಂಜೆ ಉನ್ನತ ಮಟ್ಟದ ಸಭೆ ನಡೆಸಿ ಘಟನೆಗೆ ಸಂಬಂಧಿಸಿ ಸೂಕ್ತವಾಗಿ ತನಿಖೆ ಮಾಡುವಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ (Ashok Gehlot ) ಆದೇಶಿಸಿದ್ದಾರೆ.  ಜೊತೆಗೆ  ದೌಸಾ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅನಿಲ್​ ಕುಮಾರ್​  ಹಾಗೂ ಲಾಲ್ಸೋಟ್​ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್​ ಅಂಕೇಶ್​ ಕುಮಾರ್ ಅವರನ್ನು ಅಮಾನತು ಮಾಡಲು ಆದೇಶ ಹೊರಡಿಸಿದ್ದಾರೆ. ಜೊತೆಗೆ ಇಂತಹ ಘಟನೆ ಮರುಕಳಿಸದಂತೆ  ಕ್ರಮ ವಹಿಸಲು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವಂತೆ ಸೂಚಿಸಿದ್ದು, ಅರ್ಚನಾ ಶರ್ಮಾ ಸಾವಿಗೆ  ಯಾರೆಲ್ಲ ಕಾರಣವೋ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದ ಗೆಹ್ಲೋಟ್​, ಡಾ. ಅರ್ಚನಾ ಶರ್ಮಾ ಆತ್ಮಹತ್ಯೆ ಘಟನೆ ನಿಜಕ್ಕೂ ವಿಷಾದನೀಯ. ವೈದ್ಯರಿಗೆ ದೇವರ ಸ್ಥಾನ ನೀಡುವ ಸಂಸ್ಕೃತಿ ನಮ್ಮದು. ರೋಗಿಯ ಪ್ರಾಣ ಉಳಿಸಲು ಪ್ರತಿ ವೈದ್ಯನೂ ತನ್ನ ಕೈಯ್ಯಲಾದ ಪ್ರಯತ್ನವನ್ನು ಮಾಡುತ್ತಾನೆ. ಓರ್ವ ರೋಗಿ ಸಾವನ್ನಪ್ಪಿದ ತಕ್ಷಣ ವೈದ್ಯರನ್ನೇ ಹೊಣೆ ಮಾಡುವುದು ಸರಿಯಲ್ಲ ಎಂದಿದ್ದರು.
 
ಡೆತ್‌ ನೋಟ್ ಬರೆದಿಟ್ಟು ಮೃತಪಟ್ಟ ವೈದ್ಯೆ: ನಾನು ನನ್ನ ಪತಿ ಮತ್ತು ಮಕ್ಕಳನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಸಾವಿನ ನಂತರ ಅವರಿಗೆ ಕಿರುಕುಳ ನೀಡಬೇಡಿ, ನಾನು ಯಾವುದೇ ತಪ್ಪು ಮಾಡಿಲ್ಲ. ಯಾರನ್ನೂ ಕೊಲ್ಲಲಿಲ್ಲ. ವೈದ್ಯರಿಗೆ ಇಷ್ಟು ಕಿರುಕುಳ ನೀಡುವುದನ್ನು ನಿಲ್ಲಿಸಿ. ವೈದ್ಯರಿಗೆ ಕಿರುಕುಳ ನೀಡುವುದನ್ನು ತಪ್ಪಿಸಿ. ನಾವ್ಯಾರನ್ನೂ ಕೊಲೆ ಮಾಡುವುದಿಲ್ಲ. ಗರ್ಭಿಣಿಗೆ ಪ್ರಸವದ ನಂತರ ವಿಪರೀತ ಎನ್ನುವಷ್ಟು ರಕ್ತಸ್ರಾವ ಆಗಿತ್ತು.  ಹೀಗಾಗಿ ಸತ್ತಿದ್ದಾಳೆ . ಪ್ರಸವಾನಂತರ ಇದು ಒಂದು ಸಮಸ್ಯೆ ಎಂಬುದು ಎಲ್ಲರಿಗೂ ಗೊತ್ತು. ಅದಕ್ಕಾಗಿ ವೈದ್ಯರಿಗೆ ಕಿರುಕುಳ ನೀಡಬೇಡಿ.  ನನ್ನ ಸಾವು ಬಹುಶಃ ನನ್ನ ಮುಗ್ಧತೆಯನ್ನು ಸಾಬೀತುಪಡಿಸುತ್ತದೆ. ನನ್ನ ಸಾವಿನ ಬಳಿಕ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬರೆದಿಟ್ಟಿದ್ದರು. ಅರ್ಚನಾ ಶರ್ಮಾ ಪ್ರಸೂತಿಶಾಸ್ತ್ರ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
 

Follow Us:
Download App:
  • android
  • ios