ರಾಜಸ್ಥಾನದ ಅಲ್ವಾರ್ ನಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. 8 ಮಂದಿ ಯುವಕರು ಬಾಲಕಿಯ ಸಾಮೂಹಿಕ ಅತ್ಯಾಚಾರ ಮಾಡಿದ್ದು ಮಾತ್ರವಲ್ಲದೆ, ಅದರ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡಲು ಆರಂಭಿಸಿದ್ದಾರೆ. ಬಾಲಕಿಯಿಂದ ಈ ರೀತಿಯಲ್ಲಿ ಬ್ಲ್ಯಾಕ್‌ಮೇಲ್‌ ಮಾಡುವ ಮೂಲಕ 50 ಸಾವಿರ ರೂಪಾಯಿ ವಸೂಲಿ ಮಾಡಿರುವ ಯುವಕರು ಬಳಿಕ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದಾರೆ.

ನವದೆಹಲಿ (ಅ.1): ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಎಂಟು ಮಂದಿ ಯುವಕರು, ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ಮಾಡಿದ್ದನ್ನು ವಿಡಿಯೋ ಮಾಡಿಕೊಂಡ ಈ ಹುಡುಗರು, ಇದನ್ನು ಸೋಷಿಯಲ್‌ ಮೀಡಿಯಾಗೆ ಹಾಕುವುದಾಗಿ ಬಾಲಕಿಗೆ ಬ್ಲ್ಯಾಕ್‌ಮೇಲ್‌ ಕೂಡ ಮಾಡಿದ್ದಾರೆ. ಸೋಶಿಯಲ್‌ ಮಿಡಿಯಾದಲ್ಲಿ ಹಾಕಬಾರದು ಎಂದಾದಲ್ಲಿ 50 ಸಾವಿರ ರೂಪಾಯಿ ನೀಡಬೇಕು ಎಂದು ಬೇಡಿಕೆಯನ್ನೂ ಮಾಡಿ ಆಕೆಯಿಂದ ಇಷ್ಟು ಹಣವನ್ನು ವಸೂಲಿಯೂ ಮಾಡಿದ್ದಾರೆ. ಈ ಕುರಿತಾಗಿ 8ನೇ ತರಗತಿಯ ವಿದ್ಯಾರ್ಥಿನಿ ಪೋಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕಿಶನ್‌ಗರ್‌ ಬಾಸ್‌ ಪೊಲೀಸ್‌ ಸ್ಟೇಷನ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರ ಸಂತ್ರಸ್ತೆ ತನ್ನ ಪೋಷಕರೊಂದಿಗೆ ಪೊಲೀಸ್ ಠಾಣೆಯಲ್ಲಿ ಎಂಟು ಜನರ ವಿರುದ್ಧ ಅತ್ಯಾಚಾರ ಮತ್ತು ಸುಲಿಗೆ ದೂರು ದಾಖಲಿಸಿದ್ದಾರೆ ಎಂದು ಡಿಎಸ್ಪಿ ಅತುಲ್ ಅಗರೆ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ನಂತರ ಅತ್ಯಾಚಾರದ ವೀಡಿಯೊದೊಂದಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಆರೋಪಿಗಳು ಈ ಹಿಂದೆ ಸಂತ್ರಸ್ತೆಯಿಂದ 50 ಸಾವಿರ ರೂಪಾಯಿ ಸುಲಿಗೆ ಮಾಡಿದ್ದರು. ಇದಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡದಿರಲು ಬದಲಾಗಿ 2.50 ಲಕ್ಷ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು.

Scroll to load tweet…


ಏನಿದು ಘಟನೆ: ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಎಂಟು ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ ಅಶ್ಲೀಲ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ. ಘಟನೆಯ ನಂತರ ಅಪ್ರಾಪ್ತ ಬಾಲಕಿಯ ಸಹೋದರ ಬುಧವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 31 ರಂದು, ಆರೋಪಿ ಸಾಹಿಲ್ ತನಗೆ ಕೆಲವು ಅಶ್ಲೀಲ ಚಿತ್ರಗಳು ಸಿಕ್ಕಿವೆ ಮತ್ತು ಆ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವುದಾಗಿ ಹುಡುಗಿಗೆ ಕರೆ ಮಾಡಿದ್ದ. ಇದನ್ನು ಸೋಷಿಯಲ್‌ ಮೀಡಿಯಾದಲ್ಲಿ (Social Media) ಹಾಕಬಾರದು ಎಂದಾದಲ್ಲಿ ಗೋಥರ ಎನ್ನುವ ಪ್ರದೇಶಕ್ಕೆ ಬರಬೇಕು ಎಂದು ತಿಳಿಸಿದ್ದ. ಸಾಹಿಲ್‌ ಹೇಳಿದ ಪ್ರದೇಶಕ್ಕೆ ಬಾಲಕಿ ತೆರಳಿದ ಬಳಿಕ 8 ಮಂದಿ ಯುವಕರು, ಒಬ್ಬೊಬ್ಬರಾಗಿ ಅಕೆಯನ್ನು ರೇಪ್‌ ಮಾಡಿದ್ದಾರೆ. ಬಳಿಕ ಇದನ್ನೂ ಕೂಡ ವಿರಿಯೋ ಮಾಡಿದ್ದಾರೆ. ಜನವರಿ 3 ರಂದು ರೇಪ್‌ (Rape) ಮಾಡಿದ ಬಳಿಕ ಜನವರಿ 6 ರಂದು ಆಕೆಯ ಮೇಲೆ ಈ ಎಂಟು ಮಂದಿ ಇನ್ನೊಮ್ಮೆ ರೇಪ್‌ ಮಾಡಿದ್ದಾರೆ ಎಂದು ಪೊಲೀಸರು (Rajasthan) ತಿಳಿಸಿದ್ದಾರೆ.

Moradabad Gang rape: ಬೆತ್ತಲೆಯಾಗಿ 2 ಕಿ.ಮೀ. ನಡೆದು ಮನೆ ಸೇರಿದ ಸಂತ್ರಸ್ತೆ

ಪೊಲೀಸ್‌ ಮಾಹಿತಿಯ ಪ್ರಕಾರ, ಸಾಹಿಲ್, ಅರ್ಬಾಜ್, ಜಾವೇದ್, ತಲೀಮ್, ಅಕ್ರಮ್, ಸಲ್ಮಾನ್ ಮತ್ತು ಮುಸ್ತಕೀಮ್ ಅವರು ಕೇಳಿದ ಮೊತ್ತವನ್ನು ನೀಡಲು ಬಾಲಕಿ ನಿರಾಕರಿಸಿದ ನಂತರ ವೀಡಿಯೊವನ್ನು ಇಂಟರ್‌ನೆಟ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) (POCSO) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗ್ಯಾಂಗ್‌ರೇಪ್‌ ಆದ ಬೆನ್ನಲ್ಲೇ ಗರ್ಭಿಣಿಗೆ ಗರ್ಭಪಾತ, ಭ್ರೂಣ ಹಿಡಿದು ಪೊಲೀಸ್‌ ಸ್ಟೇಷನ್‌ಗೆ ಬಂದ ಅತ್ತೆ!

ಇದುವರೆಗೆ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ, ಆದರೆ, ದುಷ್ಕರ್ಮಿಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 'ಮೊದಲಿಗೆ ಬಾಲಕಿಯ ಸಹೋದರನಿಗೆ ಕರೆ ಮಾಡಿದ್ದ ಈ ಹುಡುಗರು ಕೇಳಿದ್ದಷ್ಟು ಮೊತ್ತ ನೀಡಬೇಕು ಎಂದು ಹೇಳಿದ್ದಾರೆ. ಮೊದಲಿಗೆ ಈ ಹಣವನ್ನು ನೀಡಲಾಗಿತ್ತು. ಆ ಬಳಿಕ ಇವರುಗಳು 2.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ಬಾಲಕಿ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಈ ಎಂಟೂ ಮಂದಿಯ ವಿರುದ್ಧ ಅತ್ಯಾಚಾರ ಹಾಗೂ ಸುಲಿಗೆ ಪ್ರಕರಣವನ್ನು ದಾಖಲು ಮಾಡಲಾಗಿದೆ' ಎಂದು ಪೊಲೀಸರು ( Kishangarh Bas Police Station) ಹೇಳಿದ್ದಾರೆ.