ಗ್ಯಾಂಗ್‌ರೇಪ್ ಆದ ಬೆನ್ನಲ್ಲೇ ಗರ್ಭಿಣಿಗೆ ಗರ್ಭಪಾತ, ಭ್ರೂಣ ಹಿಡಿದು ಪೊಲೀಸ್ ಸ್ಟೇಷನ್‌ಗೆ ಬಂದ ಅತ್ತೆ!
ಉತ್ತರಪ್ರದೇಶದ ಬರೇಲಿಯಲ್ಲಿ ಅತ್ಯಂತ ಹೀನ ಎನ್ನುವ ಘಟನೆಯೊಂದು ಬೆಳಕಿಗೆ ಬಂದಿದೆ. ಗ್ರಾಮದ ಗದ್ದೆಯಲ್ಲಿ ಗರ್ಭಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಅದರ ಬೆನ್ನ್ಲಿಯೇ ಆಕೆಗೆ ಗರ್ಭಪಾತವೂ ಆಗಿದೆ. ಇದಾದ ಬಳಿಕ ಸಂತ್ರಸ್ತೆಯ ಅತ್ತೆ ಕೈಯಲ್ಲಿ ಭ್ರೂಣವನ್ನು ಹಿಡಿದುಕೊಂಡು ನ್ಯಾಯ ಕೋರಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಇದನ್ನು ನೋಡಿದ ಅಧಿಕಾರಿಗಳು ಸ್ವತಃ ಬೆಚ್ಚಿಬಿದ್ದಿದ್ದಾರೆ.
ಬರೇಲಿ (ಸೆ. 21): ಉತ್ತರ ಪ್ರದೇಶದ ಬರೇಲಿಯಲ್ಲಿ ಮಾನವ ಸಮಾಜಕ್ಕೆ ಅತ್ಯಂತ ನಾಚಿಕೆಗೇಡಿನ ಘಟನೆಯೊಂದು ನಡೆದಿದ.ೆ ಬಿಷರತ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಮಜ್ಗವಾನ್ ಗ್ರಾಮದಲ್ಲಿ ಗರ್ಭಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ನಂತರ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ. ತನ್ನ ಸೊಸೆಯ ಮೇಲೆ ಅತ್ಯಾಚಾರ ಹಾಗೂ ಗರ್ಭಪಾತವಾದ ಸಿಟ್ಟಿನಲ್ಲಿದ್ದ ಅತ್ತೆ, ಮಗುವಿನ ಭ್ರೂಣದೊಂದಿಗೆ ಪೊಲೀಸ್ ಠಾಣೆಯ ಕಚೇರಿಗೆ ಬಂದು ನ್ಯಾಯ ಕೊಡಿಸುವಂತೆ ಕೇಳಿದ್ದಾರೆ. ಇದನ್ನು ಕೇಳಿ ಸ್ವತಃ ಪೊಲೀಸರೇ ದಿಗಿಲುಬಿದ್ದಿದ್ದಾರೆ. ಈ ಘಟನೆಗೆ ಇಡೀ ಪ್ರದೇಶದಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದೆ. ಮೂರು ತಿಂಗಳ ಗರ್ಭಿಣಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದು, ಇದರಿಂದಾಗಿ ಆಕೆಗೆ ಗರ್ಭಪಾತವಾಗಿದೆ. ಪ್ರತಿದಿನದ ಕೆಲಸದ ನಿಮಿತ್ತ ಜಮೀನಿಗೆ ಹೋಗುವ ಮಾರ್ಗಮಧ್ಯದಲ್ಲಿ ಈ ಘಟನೆ ನಡೆದಿದೆ. ಆಕೆ ಜಮೀನಿಗೆ ಬರುತ್ತಿದ್ದ ಸಮಯವನ್ನೇ ಕಾಯುತ್ತಿದ್ದ ಕಾಮುಕರು ಆಕೆಯ ಮೇಲೆ ಹೀನ ರೀತಿಯಲ್ಲಿ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ಬಳಿಕ ಮಹಿಳೆಯನ್ನು ಅಲ್ಲಿಯೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಮಹಿಳೆ ಬಹಳ ಹೊತ್ತಾದರೂ ಮನೆಗೆ ಬರದೇ ಇದ್ದಾಗ ಕುಟುಂಬದವರು ಆಕೆಯನ್ನು ಹುಡುಕುತ್ತಾ ಜಮೀನಿನ ಮಾರ್ಗದಲ್ಲಿ ಬಂದಿದ್ದು, ಈ ವೇಳೆ ಗದ್ದೆಯ ಒಳಗೆ ಆಕೆ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಕೂಡಲೇ ಕುಟುಂಬದವರು ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಮಗುವನ್ನು ಉಳಿಸುವ ನಿಟ್ಟಿನಲ್ಲಿ ಸಾಧ್ಯವಾದಷ್ಟು ಎಲ್ಲಾ ಪ್ರಯತ್ನ ಮಾಡಿದರು. ಆದರೆ, ಅತ್ಯಾಚಾರದ (gangrape) ವೇಳೆ ಮಗು (Fetus) ಹೊಟ್ಟೆಯಲ್ಲಿಯೇ ಸಾವನ್ನಪ್ಪಿದೆ ಎಂದು ವೈದ್ಯರು ಸಂಬಂಧಿಕರಿಗೆ ತಿಳಿಸಿದ್ದಾರೆ. ಮಹಿಳೆಯ ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ (Bareilly Police) ಮೆಟ್ಟಿಲೇರಿದ್ದಾರೆ. ಆರೋಪಿಯನ್ನು ಶಿಕ್ಷಿಸಲೇಬೇಕು ಎಂದಿರುವ ಸಂತ್ರಸ್ತೆಯ ಅತ್ತೆ, ಮಗುವಿನ ಭ್ರೂಣವನ್ನು ಪ್ಲಾಸ್ಟಿಕ್ ಜಾರ್‌ನಲ್ಲಿ ಎಸ್‌ಎಸ್‌ಪಿ ಕಚೇರಿಗೆ (SSP Office) ತಂದಿದ್ದರು. ಇದನ್ನು ಕಂಡು ಪೊಲೀಸರೇ ಹೌಹಾರಿದ್ದಾರೆ.
ಮಹಿಳೆಯ ಕೈಯಲ್ಲಿದ್ದ ಭ್ರೂಣವನ್ನು ನೋಡಿ, ಎಸ್‌ಎಸ್‌ಪಿ ಕಚೇರಿಯಲ್ಲಿದ್ದ ಅಧಿಕಾರಿಗಳು ಒಂದು ಕ್ಷಣ ಅಚ್ಚರಿಗೆ ಒಳಗಾದರು. ವಿಷಯದ ಗಂಭೀರತೆ ತಿಳಿದು ಎಸ್ಪಿ ದೇಹತ್ ರಾಜ್ ಕುಮಾರ್ ಅಗರ್ವಾಲ್ ತನಿಖೆಗೆ ಆದೇಶಿಸಿದ್ದಾರೆ. ಮಹಿಳೆಯ ಹೇಳಿಕೆಯನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು. ಶೀಘ್ರವೇ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸಂತ್ರಸ್ತೆಯ ಅತ್ತೆ ಹೇಳಿದ್ದೇನು?: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಅತ್ತೆ, 'ನಾನು ಹಲವು ದಿನಗಳಿಂದ ದೂರು ನೀಡುತ್ತಿದ್ದೇನೆ. ನನ್ನ ಸೊಸೆಯನ್ನು ಮೂವರು ದುರುಳರು ಅತ್ಯಾಚಾರವೆಸಗಿದ್ದಾರೆ. 3 ತಿಂಗಳ ಮಗು ಹೊಟ್ಟೆಯಲ್ಲಿತ್ತು, ಸೊಸೆ ಬಾಯಿ ಮುಚ್ಚಿ ಅತ್ಯಾಚಾರ ಮಾಡಿದ್ದಾರೆ. ಇದರಿಂದ ಆಕೆ ಮೂರ್ಛೆ ಹೋಗಿದ್ದಾಳೆ. ಈ ಪ್ಲಾಸ್ಟಿಕ್ ಚೀಲದಲ್ಲಿ ಮಗುವಿನ ದೇಹವಿದೆ ಎಂದು ಮಹಿಳೆ ಹೇಳಿದ್ದಾರೆ.
ಉತ್ತರಪ್ರದೇಶ: ಮಹಿಳೆಗೆ ಕಿರುಕುಳ: ಬಿಜೆಪಿ ಶಾಸಕನ ವಿರುದ್ಧ FIR, ಮಗನ ಮೇಲೆ ಅತ್ಯಾಚಾರ ಆರೋಪ
ಪ್ರಕರಣ ದಾಖಲಿಸಿರುವ ಪತಿ: ಸಾಮೂಹಿಕ ಅತ್ಯಾಚಾರದ ಈ ನಾಚಿಕೆಗೇಡಿನ ಘಟನೆಯ ಬಗ್ಗೆ, ಬಿಷರತ್‌ಗಂಜ್‌ನ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಪತಿ ಪ್ರಕರಣ ದಾಖಲಿಸಿದ್ದಾರೆ. ಗ್ರಾಮದ ಕೆಲವರು ತನ್ನ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದು, ಆಕೆಯ ಗರ್ಭಪಾತಕ್ಕೆ ಕಾರಣವಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಿಷರತ್‌ಗಂಜ್ ಪೊಲೀಸ್ ಠಾಣೆಯಲ್ಲಿ (Bisharatganj police station) ಸೆಕ್ಷನ್ 376 ಡಿ, 315 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Varanasi Rape: ಮಾರ್ಷಿಯಲ್ ಆರ್ಟ್ಸ್ ತರಬೇತುದಾರನಿಂದ ದಲಿತ ಬಾಲಕಿ ಮೇಲೆ ಅತ್ಯಾಚಾರ..!
ಸೇಡಿನ ಕೃತ್ಯ: ಈ ಘಟನೆಯ ಬಗ್ಗೆ ಬರೇಲಿಯ ಎಸ್ಪಿ (ಗ್ರಾಮೀಣ) ರಾಜ್ಕುಮಾರ್ ಅಗರ್ವಾಲ್ ಮಾತನಾಡಿ, ಬೇಳೆ ಕಾಳುಗಳನ್ನು ಮೈದಾನದಲ್ಲಿ ಬಿಡಿಸುವ ವಿಚಾರದ ಬಗ್ಗೆ ಇವರ ನಡುವೆ ಗಲಾಟೆ ನಡೆದಿತ್ತು.ಈ ಬಗ್ಗೆ ಗ್ರಾಮದಲ್ಲಿ ಸಭೆ ನಡೆಸಿ ಒಪ್ಪಂದವನ್ನೂ ಮಾಡಿಕೊಳ್ಳಲಾಯಿತು. ಅದರ ಲಿಖಿತ ಒಪ್ಪಂದವೂ ಆಗಿತ್ತು. ಇದರ ಸಲುವಾಗಿಯೇ ಈ ಘಟನೆ ನಡೆದಿರಬಹುದು. ಇದೀಗ ಘಟನೆಯ ಬಳಿಕ ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ. ತನಿಖೆಯಲ್ಲಿ ಏನೇನು ಬಂದರೂ ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.