ತಮ್ಮನಿಂದಲೇ ಅಣ್ಣನ ಕೊಲೆ, ಬಟ್ಟೆ ತೊಳೆಯುವ ನೀರು ವಿಚಾರಕ್ಕೆ ‌ಬಿತ್ತು ಹೆಣ!

* ಕಾರ ಹುಣ್ಣಿಮೆ ಕರಿ ದಿನೇ ತಮ್ಮನೇ ಅಣ್ಣನ ಕೊಲೆ!

* ತಮ್ಮನಿಂದಲೇ ಅಣ್ಣನ ಕೊಲೆ 

* ಬಟ್ಟೆ ತೊಳೆಯುವ ನೀರು ವಿಚಾರಕ್ಕೆ ‌ಬಿತ್ತು ಹೆಣ!

Raichur Man kills his brother for silly reason pod

ವರದಿ: ಜಗನ್ನಾಥ ಪೂಜಾರ್

ರಾಯಚೂರು(ಜೂ.17): ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಗಾದೆ ಎಲ್ಲರಿಗೂ ಗೊತ್ತೆ ಇದೆ. ಅದೇ ಗಾದೆ ಅಂತೆ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಜಕ್ಕಲದಿನ್ನಿ ಗ್ರಾಮದಲ್ಲಿ ಬಟ್ಟೆ ತೊಳೆಯುವ ನೀರು ಮನೆಯೊಳಗೆ ಸಿಡಿಯುತ್ತೆ ಎಂಬ ಕಾರಣಕ್ಕೆ ಅಣ್ಣ- ತಮ್ಮ ಹೊಡೆದಾಡಿಕೊಂಡು ಅಣ್ಣನನ್ನ ತಮ್ಮ ಕೊಂದಿರುವ ಘಟನೆವೊಂದು ಜರುಗಿದೆ.

ಮಾತುಕತೆಗೆ ಕರೆದು ಜಗಳ ತೆಗೆದ ತಮ್ಮನ ಮನೆಯವರು

ಜಕ್ಕಲದಿನ್ನಿ ಗ್ರಾಮದಲ್ಲಿ ಕೋಟೆ ಮನೆತನವೆಂದರೆ ಒಳ್ಳೆಯ ಜನರು ಎಂಬ ಮಾತು ಇದೆ. ಕೊಲೆ ಆರೋಪಿ ಶರಣಪ್ಪ,ಮೃತ ಬಸವರಾಜ್ ಇಬ್ಬರು ಅಣ್ಣ- ತಮ್ಮಂದಿರು. ಇಬ್ಬರು ತಲಾ 50 ಎಕರೆ ಜಮೀನು ಹೊಂದಿದ್ದರು. ನಿತ್ಯವೂ ತಾವೂ ಆಯ್ತು ತಮ್ಮ ‌ಕೆಲಸ ಆಯ್ತು ಅಂತ ಇರುವರು. ಆದ್ರೆ ನಿನ್ನೆ ಬೆಳಗ್ಗೆ ಮೃತ ಬಸವರಾಜ್  ಮನೆ ಎದುರು ಶರಣಪ್ಪನ ಸೊಸೆ ಬಟ್ಟೆ ತೊಳೆಯುತ್ತಿದ್ದಳು. ಆಗ ಮೃತ ಬಸವರಾಜ್..ಬಟ್ಟೆ ನೀರು ಮನೆಯೊಳಗೆ ಸಿಡಿಯುತ್ತೆ. ಇಲ್ಲಿ ಬಟ್ಟೆ ತೊಳೆ ಬೇಡ ಅಂತ ಹೇಳಿದನಂತೆ. ಪದೇ ಪದೇ ಇದೇ ರೀತಿ ಮಾಡ್ತಿರಿ ಅಂತ ಕಿವಿ ಮಾತು ಹೇಳಿ ಹೋಗಿದ್ದಾನೆ. ದೊಡ್ಡ ಮಾವ ಹೇಳಿದ ಮಾತನ್ನ ಸೊಸೆ ಆರೋಪಿ ಶರಣಪ್ಪಗೆ ಹೇಳಿದ್ದಾಳೆ. ಇದರಿಂದ ‌ಕೋಪಗೊಂಡ ಶರಣಪ್ಪ  ಮಧ್ಯಾಹ್ನ ಪ್ರಭು ಎಂಬುವರ ನೇತೃತ್ವದಲ್ಲಿ ಸಂಧಾನ ಸಭೆ ಮಾಡಿದ್ದಾರೆ. ಆ ಬಳಿಕ ಸಂಜೆ ಕಾರಹುಣ್ಣಿಮೆ ಹಿನ್ನೆಲೆ ಎತ್ತುಗಳ ಸಂಭ್ರಮಾಚರಣೆ ಇತ್ತು. ಈ ವೇಳೆ ಎತ್ತುಗಳಿಗೆ ನೀರು ಕುಡಿಸಿ ಬರ್ತಿದ್ದ ಬಸವರಾಜ್ ನನ್ನ ಶರಣಪ್ಪ ಕಡೆಯವರು 

ಮಾತನಾಡಲು ಕರೆದಿದ್ದಾರೆ. ಆಗ ಬಸವರಾಜ್ ಮಾತಿಗೆ ಕರೆದಿದ್ದಾರೆ ಎಂದು ಹೋಗಿದ್ದಾನೆ. ಈ ವೇಳೆ ಆರೋಪಿ ಶರಣಪ್ಪಗೂ ಮತ್ತು ಮೃತ ಬಸವರಾಜ್ ನಡುವೆ ಮಾತಿನ ಚಕಮಕಿ ಶುರುವಾಗಿದೆ.

ಕಲ್ಲಿನಿಂದ ತಲೆಗೆ ಹೊಡೆದು ಕೊಲೆ: 

ಮಾತುಕತೆ ಕರೆದ ತಕ್ಷಣವೇ ಶರಣಪ್ಪ ಹೋಗಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಶರಣಪ್ಪ ಕೋಟೆ, ಅಮರೇಶ್ ಕೋಟೆ, ಚಂದ್ರಣ್ಣ, ಚನ್ನಬಸವ, ಶಂಕರಮ್ಮ, ಶರಣಮ್ಮ ಎಂಬುವರು ಸೇರಿ ಬಸವರಾಜ್ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ನೆಲಕ್ಕೆ ಕುಸಿದು ಬಿದ್ದ ಬಸವರಾಜ್ ನನ್ನ ಸಿರವಾರ ಆಸ್ಪತ್ರೆಗೆ ದಾಖಲು ಮಾಡಲು ಹೋಗಿದ್ದಾರೆ. ಅಷ್ಟರಲ್ಲೇ ಬಸವರಾಜ್ ಪ್ರಾಣ ಹೋಗಿಬಿಟ್ಟಿದೆ. 

ಆರು ಜನ ಆರೋಪಿಗಳಲ್ಲಿ ಇಬ್ಬರ ಬಂಧನ: 

ಬಸವರಾಜ್ ಕೊಲೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿರವಾರ ಪೊಲೀಸರು ಸದ್ಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. ತಲೆ ಮರೆಸಿಕೊಂಡ ಇನ್ನುಳಿದ ನಾಲ್ಕು ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Latest Videos
Follow Us:
Download App:
  • android
  • ios