ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ, ತಾಯಿ ಜವಾಬ್ದಾರಿಯಿಂದ ಇರಲು ಹೇಳಿದ ಬುದ್ದಿಮಾತಿಗೆ ಮನನೊಂದು ಬಸಲಿಂಗಮ್ಮ ಎಂಬ 24 ವರ್ಷದ ಯುವತಿ ತುಂಗಭದ್ರಾ ಕಾಲುವೆಗೆ ಹಾರಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾಳೆ. ಡಿಸೆಂಬರ್ 16 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಯಚೂರು (ಡಿ.18): ತಾಯಿ ಹೇಳಿದ ಬುದ್ದಿಮಾತಿಗೆ ಮನನೊಂದು ಯುವತಿಯೊಬ್ಬಳು ತುಂಗಭದ್ರಾ ಕಾಲುವೆಗೆ ಹಾರಿ ಮೃತಪಟ್ಟ ದುರ್ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ದಿನ್ನಿಭಾವಿ ಗ್ರಾಮದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಯಿ ಹೇಳಿದ ಬುದ್ಧಿ ಮಾತಿಗೆ ಆತ್ಮ೧ಹತ್ಯೆ!

ಗ್ರಾಮದ ನಿವಾಸಿ ಬಸಲಿಂಗಮ್ಮ (24) ಆತ್ಮ೧ಹತ್ಯೆ ಮಾಡಿಕೊಂಡ ದುರ್ದೈವಿ. ಮನೆಯಲ್ಲಿ ಸರಿಯಾಗಿ ಇರಬೇಕು, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ತಾಯಿ ಮಗಳಿಗೆ ಬುದ್ದಿವಾದ ಹೇಳಿ ಸ್ವಲ್ಪ ಗದರಿಸಿದ್ದರು ಎನ್ನಲಾಗಿದೆ. ಇದರಿಂದ ತೀವ್ರವಾಗಿ ಮನನೊಂದ ಬಸಲಿಂಗಮ್ಮ, ಜೀವನದಲ್ಲಿ ಜಿಗುಪ್ಸೆಗೊಂಡು ತುಂಗಭದ್ರಾ ಕಾಲುವೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ.

ತಡವಾಗಿ ಬೆಳಕಿಗೆ ಬಂದ ಪ್ರಕರಣ:

ಈ ಘಟನೆಯು ಡಿಸೆಂಬರ್ 16 ರಂದು ಸಂಭವಿಸಿದ್ದು, ಇಂದು ತಡವಾಗಿ ಬೆಳಕಿಗೆ ಬಂದಿದೆ. ಮಗಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಣ್ಣ ವಿಷಯಕ್ಕೆ ಯುವತಿ ಇಂತಹ ಕಠಿಣ ನಿರ್ಧಾರ ಕೈಗೊಂಡಿರುವುದು ಗ್ರಾಮದಲ್ಲಿ ವಿಷಾದ ಮೂಡಿಸಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.