ಮೂರು ಕಡೆ ಹೆಣ್ಣು ನೋಡಲಾಗಿತ್ತು. ಆದರೆ ಮೂವರು ತಿರಸ್ಕರಿಸಿದ್ದರು. ಇತ್ತ ಮದುವೆ ವಯಸ್ಸು ದಾಟುತ್ತಿದ್ದರೂ ಕಂಕಣ ಬಾಗ್ಯ ಕೂಡಿ ಬರದೇ ನೊಂದುಕೊಂಡಿದ್ದ ಹೋಂಗಾರ್ಡ್ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
ಚಿತ್ರದುರ್ಗ (ಜು.19) ಒಂದಡೆ ಮದುವೆಯಾಗಿಲ್ಲ ಅನ್ನೋ ಸಮಸ್ಯೆ, ಮತ್ತೊಂದೆಡೆ ಮದುವೆಯಾದರೂ ಸಮಸ್ಯೆ ಅನ್ನೋವಂತಾಗಿದೆ ಪರಿಸ್ಥಿತಿ.ಇದೀಗ 31 ವರ್ಷದ ಹೋಂಗಾರ್ಡ್ ಹೆಣ್ಣು ಸಿಗುತ್ತಿಲ್ಲ, ಹೆಣ್ಣು ನೋಡಿದ ಕಡೆಯೆಲ್ಲಾ ತಿರಸ್ಕಾರದಿಂದ ತೀವ್ರವಾಗಿ ಮನ ನೊಂದು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಚಿತ್ರದುರ್ಗದ ಜೆಬಿ ಹಳ್ಳಿಯ ಹೋಂಗಾರ್ಡ್ ತಿರುಮಲ ಬದುಕು ಅಂತ್ಯಗೊಳಿಸಿದ್ದಾರೆ. ತಿರುಮಲ ಜೀವನದಲ್ಲಿ ನಡೆದ ಹಲವು ಘಟನೆಗಳು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ವಯಸ್ಸಾಗುತ್ತಿದೆ ಹೆಣ್ಣು ಸಿಗುತಿಲ್ಲ ಎಂದು ನೊಂದು ಕೊಂಡಿದ್ದ ತಿರುಮಲ
31 ವರ್ಷದ ತಿರುಮಲ ಹೋಂಗಾರ್ಡ್ ಉದ್ಯೋಗಿಯಾಗಿದ್ದ. ಆದರೆ ಕಳೆದ ಕೆಲ ವರ್ಷಗಳಿಂದ ಮದುವೆಯಾಗಿ ಸಂಸಾರ ನಡೆಸಲು ಬಯಸಿದ್ದ. ಈ ಕುರಿತು ಮನೆಯಲ್ಲಿ ಹೇಳಿಕೊಂಡಿದ್ದ. ಹೀಗಾಗಿ ಹೆಣ್ಣು ಹುಡುಕಲು ತಿರುಮಲ ಹಾಗೂ ಆತನ ಕುಟುಂಬಸ್ಥರು ಮುಂದಾಗಿದ್ದರು. ಹೋಂಗಾರ್ಡ್ ಉದ್ಯೋಗದಲ್ಲಿದ್ದರೂ ಕಂಕಣ ಭಾಗ್ಯ ಕೂಡಿ ಬರುತ್ತಿರಲಿಲ್ಲ. ಹೀಗಾಗಿ ತಿರುಮಲ ನೊಂದು ಕೊಂಡಿದ್ದರು.
ಪ್ರೊಫೈಲ್ ತಿರಸ್ಕರಿಸಿದ್ದ ಹಲವರು
ಹೆಣ್ಣು ಹುಡುಕಲು ಕುಟುಂಬಸ್ಥರು ಸೇರಿದಂತೆ ತಿರುಮಲ ಕೂಡ ಪ್ರಯತ್ನ ಮಾಡಿದ್ದ. ಕುಟುಂಬಸ್ಥರ ಸೂಚನೆ ಪ್ರಕಾರ ಈತನ ಪ್ರೊಫೈಲ್ ಹಲವು ಹೆಣ್ಣಿನ ಕುಟುಂಬಸ್ಥರು, ಪೋಷಕರಿಗೆ ಕಳುಹಿಸಿಕೊಟ್ಟಿದ್ದ. ಆದರೆ ಬಹುತೇಕರು ತಿರಸ್ಕರಿಸಿದ್ದರು.ಇದು ತಿರುಮಲ ಮನಸ್ಸಿಗೆ ತೀವ್ರ ನೋವು ತಂದಿತ್ತು.
ಹೆಣ್ಣು ನೋಡಿದ್ದ ಮೂರು ಕಡೆ ತಿರಸ್ಕಾರ
ಸತತ ಪ್ರಯತ್ನದ ನಡುವೆ ಆಶಾದಾಯಕ ಬೆಳವಣಿಗೆ ನಡೆದಿತ್ತು. ಹೀಗಾಗಿ ಹೆಣ್ಣಿನ ಕುಟುಂಬಸ್ಥರು ಹೆಣ್ಣು ನೋಡಲು ಆಹ್ವಾನ ನೀಡಿದ್ದರು. ಹಿರಿ ಹಿಗಿದ್ದ ತಿರುಮಲ ಹೆಣ್ಣು ನೋಡಲು ಹೆಣ್ಣಿನ ಮನೆಗೆ ತೆರಳಿದ್ದರು. ಪೋಷಕರು, ಕುಟುಂಬಸ್ಥರ ಜೊತೆ ತೆರಳಿ ಹೆಣ್ಣು ನೋಡಿ ತಿರುಮಲ ಒಕೆ ಎಂದಿದ್ದರು. ಆದರೆ ಒಂದಲ್ಲ, ಎರಡಲ್ಲ, ಮೂರು ಕಡೆ ನೋಡಿದ್ದ ಹೆಣ್ಣು ತಿರುಮಲನ ತಿರಸ್ಕರಿಸಿದ್ದರು. ಇದು ತಿರುಮಲ ಬಾಳಿನಲ್ಲಿ ಅತೀ ದೊಡ್ಡ ಬಿರುಗಾಳಿ ಬೀಸುವಂತೆ ಮಾಡಿತ್ತು.
ವಯಸ್ಸಾಗುತ್ತಿದೆ ಹೆಣ್ಣು ಸಿಗುತ್ತಿಲ್ಲ ಎಂದು ಕೊರಗಿದ್ದ ತಿರುಮಲ
ವಯಸ್ಸು 31. ಆದರೆ ತಿರುಮಲ ಮದುವ ಪ್ರಯತ್ನ ಕಳೆದೆರಡು ವರ್ಷದಿಂದ ತೀವ್ರಗೊಂಡಿತ್ತು. ಆದರೆ ಕೈಗೂಡಿರಲಿಲ್ಲ. ವಯಸ್ಸಾಗುತ್ತಿದೆ. ಹೆಣ್ಣು ಸಿಗುತ್ತಿಲ್ಲ ಎಂದು ತೀವ್ರವಾಗಿ ನೊಂದುಕೊಂಡಿದ್ದ. ಜೀವನದಲ್ಲಿ ತೀವ್ರವಾಗಿ ಮನ ನೊಂದುಕೊಂಡಿದ್ದ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ತಿರುಮಲ ತಂದೆ ಸೋಮರೆಡ್ಡಿ ದೂರು ನೀಡಿದ್ದಾರೆ. ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.
