ಹೊಲದಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಜೆಸಿಬಿ: ಕುಯ್ಯಿಕ್ ಎನ್ನದೇ ಪ್ರಾಣ ಬಿಟ್ಟರು
ರಾಯಚೂರಿನ ಜಮೀನಿನಲ್ಲಿ ಬೋರ್‌ವೆಲ್‌ನ ಕೊರೆದು ಕಾಲುದಾರಿಯಲ್ಲಿ ಮಲಗಿದ್ದ ಛತ್ತೀಸ್‌ಘಡದ ಕಾರ್ಮಿಕರ ಮೇಲೆ ಜೆಸಿಬಿ ಹರಿದು ಮೂವರು ಸಾವನ್ನಪ್ಪಿದ್ದಾರೆ.
ರಾಯಚೂರು (ಜೂ.14): ರಾತ್ರಿ ವೇಳೆ ಬೋರ್‌ವೆಲ್ ಕೊರೆದು ಹೊಲಕ್ಕೆ ಹೋಗುವ ಕಾಲುದಾರಿಯಲ್ಲಿ ಮಲಗಿದ್ದ ಮೂವರು ಕಾರ್ಮಿಕರ ಮೇಲೆ ರಾತ್ರಿ ವೇಳೆ ಆಗಮಿಸಿದ ಜೆಸಿಬಿ ಹರಿದು ಸ್ಥಳದಲ್ಲಿಯೇ ಸಾವನ್ಪ್ಪಿರುವ ದುರ್ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾ. ನಿಲವಂಜಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮೃತ ದುರ್ದೈವಿ ಕಾರ್ಮಿಕರನ್ನು ವಿಷ್ಣು (26), ಶಿವರಾಮ್ (28), ಬಲರಾಮ್(30) ಎಂದು ಕರೆಯಲಾಗಿದೆ. ರಾತ್ರಿ ವೇಳೆ ಜಮೀನಿನಲ್ಲಿ ಬೋರ್‌ವೆಲ್ ಕೊರೆದು ಸುಸ್ತಾಗಿದ್ದ ಕಾರ್ಮಿಕರು ಹೊಲದ ಬಳಿಯೇ ಇದ್ದ ಕಾಲುದಾರಿಯಲ್ಲಿ ಮೂವರು ಮಲಗಿದ್ದರು. ಆದರೆ, ರಾತ್ರಿ ವೇಳೆ ಕಾಲುದಾರಿಯಲ್ಲಿ ಬಂದ ಜೆಸಿಬಿ ಮಲಗಿದ್ದವರ ಮೇಲೆ ಹರಿದಿದೆ. ಮೂವರು ಕಾರ್ಮಿಕರನ್ನು ಛತ್ತೀಸ್‌ಘಡದ ಮೂಲದವರು ಎಂದು ಗುರುತಿಸಲಾಗಿದೆ. ನೀಲವಂಜಿ ಗ್ರಾಮದ ಬಾಲಯ್ಯ ಎಂಬುವವರಿಗೆ ಸೇರಿದ ಜೆಸಿಬಿ ಹರಿದಿದ್ದು ಚಾಲಕ ಪರಾರಿ ಆಗಿದ್ದಾನೆ. ಈ ಘಟನೆಯ ಬಗ್ಗೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಬೈಕ್‌ನಲ್ಲಿ ಜಾಲಿರೈಡ್ ಹೋದ ಸ್ನೇಹಿತರು ಪೀಸ್ ಪೀಸ್: ದೇಹದ ತುಂಡುಗಳನ್ನು ಎತ್ತಿಕೊಂಡು ಹೋದ ಪೊಲೀಸರು
ಜೆಸಿಬಿ ಹರಿದರೂ ಗೊತ್ತೇ ಆಗಿಲ್ಲ: ಇನ್ನು ಬೋರ್‌ವೆಲ್ ಕೊರೆದ ಜಮೀನಿನನ್ನು ಉಳುಮೆ ಮಾಡಿದ್ದರಿಂದ ನೆಲವು ಸಮವಾಗಿರಲಿಲ್ಲ. ಆದ್ದರಿಂದ ಕಾರ್ಮಿಕರು ಸಮತಟ್ಟಾದ ನೆಲವನ್ನು ಹುಡುಕಿಕೊಂಡು ಹೋಗಿ ಕಾಲುದಾರಿಯಲ್ಲಿ ಮಲಗಿದ್ದರು. ರಾತ್ರಿ ವೇಳೆ ಯಾವುದೇ ವಾಹನ ಬರುವುದಿಲ್ಲ ಎನ್ನುವ ನಂಬಿಕೆಯಿಂದ ನಿದ್ರೆಗೆ ಜಾರಿದ್ದರು. ಆದರೆ, ಕೊಳೆ ಬಾವಿ ಕೊರೆದ ಕಾರ್ಮಿಕರು ಸುಸ್ತಾಗಿದ್ದರಿಂದ ಘಾಡ ನಿದ್ರೆಯಲ್ಲಿದ್ದರು. ಹೀಗಾಗಿ, ಜೆಸಿಬಿ ಕಾಲುದಾರಿಯಲ್ಲಿ ಬಂದರೂ ಗೊತ್ತಾಗಿಲ್ಲ. ಇನ್ನು ಜೆಸಿಬಿ ಚಾಲಕ ಕೂಡ ಮುಂದೆ ಮಲಗಿರುವುದನ್ನು ನೋಡದೇ ಜೆಸಿಬಿಯನ್ನು ಹರಿಸಿದ್ದಾನೆ. ಜೆಸಿಬಿ ಮಲಗಿದ್ದವರ ಮೇಲೆ ಹರಿದಾಗ ಯಾರೊಬ್ಬರೂ ಉಸಿರಾಡಲೂ ಸಾಧ್ಯವಾಗದೇ ಕುಯ್ಯಿಕ್ ಎನ್ನದೇ ಪ್ರಾಣವನ್ನು ಬಿಟ್ಟಿದ್ದಾರೆ. ಇನ್ನು ಚಾಲಕನಿಗೆ ಜೆಸಿಬಿ ಅಡಿಯಲ್ಲಿ ಏನೋ ಸಿಲುಕಿರಬಹುದು ಎಂದು ನೋಡಿದಾಗ ರಕ್ತಸಿಕ್ತವಾಗಿ ಸಾವನ್ನಪ್ಪಿದ ಮೃತದೇಹಗಳನ್ನು ನೋಡಿ ಜೆಸಿಬಿ ಮಾಲೀಕರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ಮಾಡುವ ವೇಳೆ ಜೆಸಿಬಿ ಚಾಲಕ ಅಲ್ಲಿಂದ ಪರಾರಿ ಆಗಿದ್ದಾನೆ.
ದುಡಿಯಲು ಬಂದ ಕಾರ್ಮಿಕರ ದುರಂತ ಅಂತ್ಯ: ಇನ್ನು ಜೆಸಿಬಿಯಲ್ಲಿ ಕೆಲಸಕ್ಕೆಂದು ಬಂದ ಛತ್ತೀಸ್‌ಘಡದ ಮೂವರು ಕೂಡ ಮಾಲೀಕನ ಬಳಿ ಉತ್ತಮವಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ಸಾಮಾನ್ಯವಾಗಿ ಬೋರ್‌ವೆಲ್ ಕೊರೆಯುವ ವಾಹನದಲ್ಲಿಯೇ ಮಲಗುತ್ತಿದ್ದ ಇವರು, ವಾಹನ ಕೆಲಸ ಮಾಡಿ ಬಿಸಿಯಾಗಿದ್ದರಿಂದ ಕೆಳಗೆ ಮಲಗಲು ಬಂದಿದ್ದರು. ಆದರೆ, ನೆಲದ ಮೇಲೆ ಮಲಗಿದ್ದವರು ಅಪ್ಪಚ್ಚಿಯಾಗಿ ಸಾವನ್ನಪ್ಪಿದ್ದಾರೆ. ಇನ್ನು ಈ ಘಟನಾ ಸ್ಥಳಕ್ಕೆ ಭೇಡಿ ಮಾಡಿ ಸ್ಥಳ ಪರಿಶೀಲನೆ ಮಾಡಿದ ಪೊಲೀಸರು ಜೆಸಿಬಿ ಮಾಲೀಕರನ್ನು ವಶಕ್ಕೆ ಪಡೆದಿದ್ದಾರೆ. ಮೃತ ಕಾರ್ಮಿಕರ ಕುಟುಂಬಗಳಿಗೆ ಮಾಹಿತಿ ರವಾನಿಸಿದ್ದು, ಮೃತ ದೇಹಗಳನ್ನು ಆಸ್ಪತ್ರೆಗೆ ಸಾಗಣೆ ಮಾಡಿದ್ದಾರೆ.
ಮದುವೆಯಾಗಿ 22 ದಿನಕ್ಕೆ ದುರಂತ ಅಂತ್ಯ, ಬೈಕ್‌ನಲ್ಲಿ ಜಾಲಿರೈಡ್ ಹೊರಟಿದ್ದ ನವಜೋಡಿಯ ದಾರುಣ ಸಾವು!
ಜೆಸಿಬಿಯಿಂದ ದೂರವಿರಿ: ಜೆಸಿಬಿ ರಸ್ತೆಯಲ್ಲಿ ಹೋಗುವಾಗ ಜೆಸಿಬಿಯೇ ಬೇರೆ ವಾಹನಗಳಿಗೆ ಗುದ್ದಿದರೂ, ಬೇರೆ ವಾಹನಗಳು ಬಂದು ಜೆಸಿಬಿಗೆ ಡಿಕ್ಕಿ ಹೊಡದರೂ ಅಲ್ಲಿ ಸಮಸ್ಯೆ ಆಗುವುದು ಮಾತ್ರ ಬೇರೆ ವಾಹನಗಳಿಗೆ. ಇದಕ್ಕೆ ಕಾರಣ ಜೆಸಿಬಿ ಸಂಪೂರ್ಣವಾಗಿ ಕಬ್ಬಿಣದ ದೇಹವನ್ನು ಹೊಂದಿದ್ದು, ಭಾರಿ ಗಾತ್ರದ ಜೆಸಿಬಿಗೆ ಯಾವುದೇ ಹಾನಿಯಾಗುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಜೆಸಿಬಿ ಮತ್ತು ಇತರೆ ವಾಹನಗಳು ಸಾಗುವಾಗ ವಾಹನ ಸವಾರರು ಕೂಡ ದೂರದಿಂದಲೇ ಹೋಗುತ್ತಾರೆ.