ಮಂಗಳೂರು: ಸರ್ಕಾರಿ ಸೀಟ್ ವಿಚಾರವಾಗಿ ಡೆಂಡಲ್ ವಿದ್ಯಾರ್ಥಿನಿಗೆ ರ‍್ಯಾಗಿಂಗ್
ಸರ್ಕಾರಿ ಸೀಟ್ ವಿಚಾರವಾಗಿ ಡೆಂಡಲ್ ವಿದ್ಯಾರ್ಥಿನಿಗೆ ರ‍್ಯಾಗಿಂಗ್ ಮಾಡಿದ ಆರೋಪದ ಮೇಲೆ ಆರು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲು
ಮಂಗಳೂರು(ಡಿ.29): ಸರ್ಕಾರಿ ಸೀಟ್ ವಿಚಾರವಾಗಿ ಡೆಂಡಲ್ ವಿದ್ಯಾರ್ಥಿನಿಗೆ ರ‍್ಯಾಗಿಂಗ್ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ನಡೆದಿದೆ. ಈ ಸಂಬಂಧ ಆರು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರಿನ ವೈಟ್ ಫೀಲ್ಡ್ ನಿವಾಸಿ ಡಾ.ಪಲ್ಲವಿ ರ‍್ಯಾಗಿಂಗ್‌ಗೆ ಒಳಗಾದ ಡೆಂಟಲ್ ವಿದ್ಯಾರ್ಥಿನಿಯಾಗಿದ್ದಾಳೆ. ಮೂರನೇ ವರ್ಷದ ಡೆಂಡಲ್ ವಿದ್ಯಾರ್ಥಿನಿಯಾಗಿರುವ ಡಾ.ಪಲ್ಲವಿ ರ‍್ಯಾಂಕ್ ಹೋಲ್ಡರ್ ಆಗಿದ್ದಾರೆ.
ಡಾ.ಪಲ್ಲವಿಗೆ ರ‍್ಯಾಂಗಿಗ್ ಮಾಡಿದ ಆರೋಪದ ಮೇಲೆ ಕೇರಳ ಮೂಲದ ಆರು ವಿದ್ಯಾರ್ಥಿಗಳಿಂದ ದೂರು ದಾಖಲಾಗಿದೆ. ರ‍್ಯಾಂಗಿಗ್ ಮತ್ತು ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಾಗಿದೆ. ಡಾ.ಪಲ್ಲವಿ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ ವಿದ್ಯಾರ್ಥಿಗಳು. ಮೂರನೇ ವರ್ಷದ ಡೆಂಡಲ್ ವಿದ್ಯಾರ್ಥಿ ವಿಶಾಖ್, ಡಾ.ವಿಶಾಕ್, ಐಶ್ವರ್ಯ, ಐಲ್ಪಾ ಮೇರಿ ಮ್ಯಾಥ್ಯೂ, ಡೆನಲ್ ಸೆಬಾಸ್ಟಿಯನ್, ರಿಷಿಕೇಸ್, ದಯಾ ವರ್ಗೀಸ್ ವಿರುದ್ಧ ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
MANGALURU: ಹಿಂದೂಗಳು ನಮ್ಮ ಏರಿಯಾಗೆ ಬರಬೇಡಿ: ಅಯ್ಯಪ್ಪ ಮಾಲಾಧಾರಿಗೆ ಬೆದರಿಕೆ!
ಡಾ.ಪಲ್ಲವಿಗೆ ಕಳೆದ ಆರು ತಿಂಗಳಿಂದ ಮಾನಸಿಕ ಹಿಂಸೆ ನೀಡಿ ಕಿರುಕುಳ ನೀಡುತ್ತಿದ್ದರು ಅಂತ ಆರೋಪಿಸಲಾಗಿದೆ. ಕೀಳು ಜಾತಿಯ ನಾಯಿಯಾದ ನಿನಗೆ ಯೂನಿವರ್ಸಿಟಿ ರ‍್ಯಾಂಕ್ ಬೇಕಾ?' ಅಂತ ಹಲ್ಲೆ ಮಾಡಿದ್ದಾರೆ. ಡಿ.21ರಂದು ಸುಳ್ಯದ ಖಾಸಗಿ ಹೊಟೇಲ್ ಬಳಿ ತುಳಿದು ಹಲ್ಲೆ ಮಾಡಿದ್ದಾರೆ. ಡಾ.ಪಲ್ಲವಿ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೈಸೂರಿಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಅಂತ ಹೇಳಲಾಗಿದೆ.