ಎರಡನೇ ಮದುವೆ ಕಾನೂನು ಬಾಹಿರವಾಗಿದ್ರೂ ಜೀವನಾಂಶ ಪಡೆಯಲು ಪತ್ನಿ, ಮಕ್ಕಳು ಅರ್ಹ: ಹೈಕೋರ್ಟ್ ಮಹತ್ವದ ಆದೇಶ

ಮೊದಲ ಮದುವೆಯ ಅಸ್ತಿತ್ವದ ಕಾರಣದಿಂದ ಎರಡನೇ ಮದುವೆ ಕಾನೂನುಬದ್ಧವಾಗಿಲ್ಲದಿದ್ದರೂ, ಎರಡನೇ ಪತ್ನಿ ಮತ್ತು ಮಕ್ಕಳು ಜೀವನಾಂಶಕ್ಕೆ ಅರ್ಹರಾಗಿರುತ್ತಾರೆ ಎಂದು ಮದ್ರಾಸ್ ಹೈಕೋರ್ಟ್  ಮಹತ್ವದ ಆದೇಶ ಹೊರ ಹಾಕಿದೆ.

Second Wife and Children Born Out of Second Marriage Entitled to Maintenance Says Madras High Court gow

ಚೆನ್ನೈ (ಜು.11): ಮೊದಲ ಮದುವೆಯ ಅಸ್ತಿತ್ವದ ಕಾರಣದಿಂದ ಎರಡನೇ ಮದುವೆ ಕಾನೂನುಬದ್ಧವಾಗಿಲ್ಲದಿದ್ದರೂ, ಎರಡನೇ ಪತ್ನಿ ಮತ್ತು ಎರಡನೇ ಮದುವೆಯಿಂದ ಜನಿಸಿದ ಮಕ್ಕಳು ಸಿಆರ್‌ಪಿಸಿಯ ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶಕ್ಕೆ ಅರ್ಹರಾಗಿರುತ್ತಾರೆ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಮಹತ್ವದ ಆದೇಶ ಹೊರ ಹಾಕಿದೆ.

ಮಧುರೈ ಪೀಠದ ನ್ಯಾಯಮೂರ್ತಿ ಕೆ ಮುರಳಿ ಶಂಕರ್ ಅವರು ತಿರುನಲ್ವೇಲಿಯ ಕೌಟುಂಬಿಕ ನ್ಯಾಯಾಲಯವು  ಪತ್ನಿ ಮತ್ತು  ಮಗನಿಗೆ ಮಾಸಿಕ ಹತ್ತು ಸಾವಿರ ರೂಪಾಯಿಗಳನ್ನು ಪಾವತಿಸಲು ಮತ್ತು ಒಂದು ತಿಂಗಳೊಳಗೆ ನಿರ್ವಹಣೆ ಮೊತ್ತದ ಬಾಕಿ ಸಂಪೂರ್ಣ ಖರ್ಚು ವೆಚ್ಚ  ಪಾವತಿಸುವಂತೆ ಕೆಳಹಂತದ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ ನಿರ್ದೇಶಿಸಿತ್ತು. ಈ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ವ್ಯಕ್ತಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಸಿಆರ್‌ಪಿಸಿಯ ಸೆಕ್ಷನ್ 125 ಜೀವನಾಂಶಕ್ಕೆ ಪತ್ನಿ ಅರ್ಹ ಎಂದು ಹೇಳಿದೆ.

Microsoft Lays Off: ಮತ್ತೆ ಉದ್ಯೋಗ ಕಡಿತಗೊಳಿಸಿದ ಮೈಕ್ರೋಸಾಫ್ಟ್, ಸಿಇಓ ವಿರುದ್ಧ

ನನ್ನನ್ನು ಮತ್ತು ಮಗನನ್ನು ನೋಡಿಕೊಳ್ಳಲು ಕಾನೂನುಬದ್ಧವಾಗಿ ಪತಿ ಅರ್ಹನಾಗಿದ್ದರು ತನ್ನನ್ನು ಆತ ನೋಡಿಕೊಳ್ಳಲು ವಿಫಲನಾಗಿದ್ದಾನೆ ಎಂದು ಆರೋಪಿಸಿ ಮಹಿಳೆ ಈ ಹಿಂದೆ ಜೀವನಾಂಶಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಗಂಡ  ವರದಕ್ಷಿಣೆಯಾಗಿ 25 ಲಕ್ಷ ಮೊತ್ತವನ್ನು ಬೇಡಿಕೆಯಿಟ್ಟಿದ್ದ ಮತ್ತು  ಬೇಡಿಕೆಯನ್ನು ಪೂರೈಸಲು ನನಗೆ ಸಾಧ್ಯವಾಗದಿದ್ದಾಗ, ಗಂಡ ತನ್ನನ್ನು ನಿರಾಕರಿಸಿದ್ದ ಎಂದು ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಜೊತೆಗೆ ಗಂಡ ತಿಂಗಳಿಗೆ  50,000 ರೂ ವೇತನ ಪಡೆಯುತ್ತಿದ್ದು, ಆತನಿಗೆ 11 ಮನೆಗಳಿಂದ ಮಾಸಿಕ ರೂ.90,000 ಕ್ಕಿಂತ ಹೆಚ್ಚು ಬಾಡಿಗೆ  ಬರುತ್ತಿದೆ ಎಂದು ಪತ್ನಿ ವಾದಿಸಿದ್ದಳು.

ಸೆ.15ರಿಂದ ಮುಂಬೈ-ಮಂಗಳೂರು ನಡುವೆ ಗಣೇಶ ಚತುರ್ಥಿ ವಿಶೇಷ ರೈಲು ಓಡಾಟ, ಈಗಲೇ ಟಿಕೆಟ್

ವಾದ ವಿವಾದಗಳನ್ನು ಆಲಿಸಿದ ಮದ್ರಾಸ್‌ ಉಚ್ಚ ನ್ಯಾಯಾಲಯ ಪತ್ನಿ ಮತ್ತು ಮಗನ ಜೀವನ ನಿರ್ವಹಣೆಗೆ ಮಾಸಿಕ 10,000 ರೂ ನೀಡುವಂತೆ ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದ್ದು, ಎರಡನೇ ಮದುವೆ ಕಾನೂನು ಬಾಹಿರವಾಗಿದ್ದರೂ ಕೂಡ ಜೀವನಾಂಶ ಪಡೆಯಲು ಎರಡನೇ ಪತ್ನಿ ಮತ್ತು ಮಕ್ಕಳು ಅರ್ಹರು ಎಂದಿದೆ.

Latest Videos
Follow Us:
Download App:
  • android
  • ios