Asianet Suvarna News Asianet Suvarna News

ಗಜೇಂದ್ರಗಡ: ನೇಣಿಗೆ ಶರಣಾದ ಪಿಯುಸಿ ವಿದ್ಯಾರ್ಥಿ

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ 17 ವರ್ಷದ ಬಾಲಕ| ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದ ಘಟನೆ| ಆನ್‌ಲೈನ್‌ ಕ್ಲಾಸ್‌ ನೆಪದಲ್ಲಿ ಪಬ್ಜಿ ಗೇಮ್‌ ಆಡುತ್ತಿದ್ದ ಬಾಲಕ| ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೃತ ಕಾರ್ತಿಕ್‌| 

PUC Student Committed Suicide in Gajendragada in Gadag Districtgrg
Author
Bengaluru, First Published Oct 2, 2020, 12:56 PM IST
  • Facebook
  • Twitter
  • Whatsapp

ಗಜೇಂದ್ರಗಡ(ಅ.02): ಪಬ್ಜಿ ಗೇಮ್‌ಗೆ ಮಾರಹೋದ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದಾನೆ ಎನ್ನುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಗುರುವಾರ ಸಂಭವಿಸಿದೆ.

ಸ್ಥಳೀಯ ರೇಬಜಾರ ಬಡಾವಣೆಯ ಮನೆಯಲ್ಲಿ 17 ವರ್ಷದ ಕಾರ್ತಿಕ ಬಲಿ ಬೆಳಗ್ಗೆ 9.30ರ ಸುಮಾರಿಗೆ ನೇಣು ಹಾಕಿಕೊಂಡಿದ್ದಾನೆ. ಮೃತ ಕಾರ್ತಿಕ್‌ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. 

ಸಾಲಬಾಧೆ ತಾಳಲಾರದೆ ರೈತರಿಬ್ಬರು ಆತ್ಮಹತ್ಯೆ

ಆನ್‌ಲೈನ್‌ ಕ್ಲಾಸ್‌ ನೆಪದಲ್ಲಿ ಪಬ್ಜಿ ಗೇಮ್‌ ಆಡುತ್ತಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಓದಿನ ಕಡೆ ಗಮನ ನೀಡು ಎಂದು ಮೂಬೈಲ್‌ ಕಸಿದುಕೊಂಡಿದ್ದರಿಂದ ಬೇಸರಗೊಂಡು ಕಾರ್ತಿಕ್‌ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಇದ್ದ ಒಬ್ಬನೆ ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಗಜೇಂದ್ರಗಡ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
 

Follow Us:
Download App:
  • android
  • ios