ಸಿಂದಗಿ/ರಾಣಿಬೆನ್ನೂರು(ಸೆ.28): ಸಾಲಬಾಧೆಗೆ ವಿಜಯಪುರ ಹಾಗೂ ಹಾವೇರಿ ಜಿಲ್ಲೆಯ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ವಿಜಯಪುರದ ಸಿಂದಗಿ ತಾಲೂಕಿನ ಯರಗಲ್‌ ಬಿ.ಕೆ.ಗ್ರಾಮದ ಮಲಕಪ್ಪ ಜೆಟ್ಟೆಪ್ಪ ಬಾಲಪ್ಪಗೋಳ(45) ಕೃಷಿ ಚಟುವಟಿಕೆಗಾಗಿ ಬ್ಯಾಂಕ್‌ನಲ್ಲಿ 1 ಲಕ್ಷ, ಖಾಸಗಿಯಾಗಿ 3 ಲಕ್ಷ ಸಾಲ ಮಾಡಿದ್ದ ಎನ್ನಲಾಗಿದೆ. ಇದರಿಂದ ನೊಂದು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. 

ರೈತ ಮಸೂದೆ ವಿರುದ್ಧ ಪ್ರತಿಭಟನೆ, ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಆಸ್ಪತ್ರೆಯಲ್ಲಿ ಸಾವು!

ಇನ್ನು ಹಾವೇರಿಯ ರಾಣಿಬೆನ್ನೂರು ತಾಲೂಕಿನ ನದಿಹರಳಹಳ್ಳಿಯ ಮಹಾಂತೇಶಪ್ಪ ಹನುಮಂತಪ್ಪ ಬಜಾರಿ(57) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು 3 ಲಕ್ಷ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.