Asianet Suvarna News Asianet Suvarna News

ಹಸು ಮೇಲೆ ವಿಕೃತಿ ಮೆರೆದಿದ್ದ ಸೈಕೋಪಾಥ್ ಬಂಧನ

ಹಸುಗಳ ಜತೆಗೆ ವಿಕೃತಿ ಮೆರೆದಿದ್ದ ಸೈಕೋಪಾಥ್ ವ್ಯಕ್ತಿಯನ್ನ ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.  ಬಂಧಿತ ಆರೋಪಿ ಮದ್ದೂರು ಮೂಲದ ಮಂಜುನಾಥ್(34) ಎಂದು ಗುರುತಿಸಲಾಗಿದೆ.

Psychopath arrested for perverting cow banglore rav
Author
Bangalore, First Published Aug 7, 2022, 2:45 PM IST

ಬೆಂಗಳೂರು (ಆ.7) : ಬೆಂಗಳೂರಿನಲ್ಲಿ ಹಸುಗಳ ಜತೆಗೆ ವಿಕೃತಿ ಮೆರೆದಿದ್ದ ಸೈಕೋಪಾಥ್ ವ್ಯಕ್ತಿಯನ್ನ ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.  ಬಂಧಿತ ಆರೋಪಿ ಮದ್ದೂರು ಮೂಲದ ಮಂಜುನಾಥ್(34) ಎಂದು ಗುರುತಿಸಲಾಗಿದೆ. ಹಸುಗಳ ಮೇಲೆ ವಿಕೃತವಾಗಿ ವರ್ತಿಸಿದ್ದ ಆರೋಪಿಯ ಮೇಲೆ ಕ್ರಮ ಕೈಗೊಳ್ಳುವಂತೆ ಶಶಿಕುಮಾರ್ ಎಂಬುವವರು ನೀಡಿದ್ದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ. 

ಕೋಲಾರ: ಆರೆಸ್ಸೆಸ್‌ ಮುಖಂಡನ ಮೇಲೆ ಹಲ್ಲೆ, ಕೊಲೆಗೆ ಯತ್ನ

ನಾಯಂಡಹಳ್ಳಿ ಬಳಿ ಹಸುಗಳನ್ನ ಸಾಕಿದ್ದ ಶಶಿಕುಮಾರ್, ಬೆಂಗಳೂರು ಯುನಿವರ್ಸಿಟಿ ಕ್ಯಾಂಪಸ್‌ನಲ್ಲಿ ಹಸುಗಳನ್ನು ಮೇಯಲು ಕಟ್ಟುತ್ತಿದ್ದರು. ಬಳಿಕ ಮನೆಗೆ ತೆರಳುತ್ತಿದ್ದ ಹಸು ಮಾಲೀಕ ಶಶಿಕುಮಾರ್. ಆದರೆ ಹಸು ಮಾಲೀಕ ಇಲ್ಲದ ವೇಳೆ ಆರೋಪಿ ಮಂಜುನಾಥ್ ಹಸುಗಳ ಮೇಲೆ ವಿಕೃತಿ ಮೆರೆಯುತ್ತಿದ್ದ. ಹಸುಗಳನ್ನು ಪೊದೆಯಲ್ಲಿ ಎಳೆದೊಯ್ಯುತ್ತಿದ್ದ ಸೈಕೋಪಾಥ್ ಹಸುವಿನ ಕೆಚ್ಚಲನ್ನು ಬಾಯಲ್ಲಿ ಕಚ್ಚುವುದು, ಬಾಲ ಕತ್ತರಿಸಿ ಚಿಂತ್ರಹಿಂಸೆ ನೀಡುತ್ತಿದ್ದ.
ಅಷ್ಟೇ ಅಲ್ಲದೇ ಈ ಸೈಕೋಪಾಥ್ ಮಂಜುನಾಥ ಅದೆಷ್ಟು ವಿಕೃತನಾಗಿದ್ದಾನೆಂದರೆ, ಬಟ್ಟೆ ಬಿಚ್ಚಿ ಬೆತ್ತಲಾಗಿ ಹಸುವಿನೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋ ಚಂದ್ರಾಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಖಾಸಗಿ ಬಸ್-ಟ್ರ್ಯಾಕ್ಟರ್ ಡಿಕ್ಕಿ: ಖಾಸಗಿ ಬಸ್, ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿ 20ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಲಾಡು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕರ್ನಾಟಕ ಗಡಿ ಅರಣ್ಯ ಪ್ರದೇಶದಲ್ಲಿ ನಡೆದಿರುವ ಘಟನೆ.

ಕರ್ನಾಟಕ ಗಡಿ ಅರಣ್ಯ ಪ್ರದೇಶದಲ್ಲಿ ನಡೆದಿರುವ ಅಪಘಾತದಲ್ಲಿ 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗೊಂಡಿದ್ದಾರೆ. ನಿನ್ನೆ ತಡ ರಾತ್ರಿ ಸಮಯದಲ್ಲಿ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ ನಲ್ಲಿದ್ದ ವ್ಯಕ್ತಿ ಒಮರ್ ಮುನಿ (45) ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. 

ಜಾಲಿ ರೈಡ್‌ನಲ್ಲಿ ಗೆಳತಿ ಇಂಪ್ರೆಸ್ ಮಾಡಲು ಕಾರು ನೀಡಿದ ಯುವಕ, ಅಪಘಾತಕ್ಕೆ ಬೈಕ್ ಸವಾರರು ಬಲಿ!

ಎರಡು ವಾಹನಗಳು ಕರ್ನಾಟಕ ದಿಂದ ಆಂಧ್ರಪ್ರದೇಶ ಮದನಪಲ್ಲಿಗೆ ಹೋಗುತ್ತಿದ್ದ ವಾಹನಗಳು. ಗಾಯಗೊಂಡವರು ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲು. ಅರಣ್ಯ ಪ್ರದೇಶದಲ್ಲಿ ನೆಟ್ವರ್ಕ್ ಸಹ ಕೆಲಸ ಮಾಡದೆ ಗಾಯಲುಗಳು ಕೆಲ ಕಾಲ ನರಳಾಟ. ಕೆಲವು ಪ್ರಯಾಣಿಕರು ಸ್ವಲ್ಪ ದೂರ ನಡೆದು ಕೊಂಡು ಹೋಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ. ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

Follow Us:
Download App:
  • android
  • ios