*  ವಿದೇಶಿಯರು ಸೇರಿ 13 ಮಂದಿ ಮಹಿಳೆಯರ ರಕ್ಷಣೆ*  ಕೆಲಸದ ನೆಪದಲ್ಲಿ ಯುವತಿಯರನ್ನು ಕರೆತಂದು ಅಕ್ರಮ ಚಟುವಟಿಕೆಗೆ ಬಳಕೆ*  ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಹಿಳಾ ಸಂರಕ್ಷಣಾ ದಳ ಕಾರ್ಯಾಚರಣೆ  

ಬೆಂಗಳೂರು(ಫೆ.06): ಅನೈತಿಕ ಚಟುವಟಿಕೆಗಳ ಶಂಕೆ ಹಿನ್ನೆಲೆಯಲ್ಲಿ ನಗರದ ಮೂರು ‘ಸ್ಪಾ’(Spa) ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು(CCB Police), ವಿದೇಶಿಯರು ಸೇರಿ 13 ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.

ಉತ್ತರ ಭಾರತ(North India) ಮೂಲದ ದೇವೆಂದರ್‌, ಅಭಿಜಿತ್‌ ಬಂಧಿತರು. ನಗರದ ರಾಯಲ್‌ ಸ್ಪಾ ಆ್ಯಂಡ್‌ ಸಲೂನ್‌, ಅಸ್ತೇಟಿಕ್‌ ಯೂನಿಸೆಕ್ಸ್‌ ಸೆಲೂನ್‌ ಆ್ಯಂಡ್‌ ಸ್ಪಾ, ನಿಸರ್ಗ ಆಯುರ್ವೇದಿಕ್‌ ಕ್ಲಿನಿಕ್‌ಗಳ ಮೇಲೆ ಸಿಸಿಬಿ ದಾಳಿ(CCB Raid) ನಡೆಸಿದೆ. ಕೆಲಸದ ನೆಪದಲ್ಲಿ ಯುವತಿಯರನ್ನು(Girls) ಕರೆತಂದು ಅಕ್ರಮ ಚಟುವಟಿಕೆಗೆ ಬಳಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿಯ ಮಹಿಳಾ ಸಂರಕ್ಷಣಾ ದಳ ಕಾರ್ಯಾಚರಣೆ ನಡೆಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಜಯನಗರದಲ್ಲಿ ಎಂಥಾ ಮಾಸ್ಟರ್ ಪ್ಲಾನ್... ಕಬೋರ್ಡ್ ಮಧ್ಯೆ ಸುರಂಗದಲ್ಲಿ ವೇಶ್ಯಾವಾಟಿಕೆ!

ದಾಳಿ ವೇಳೆ ನೇಪಾಳ(Nepal) ಹಾಗೂ ಟರ್ಕಿ(Turkey) ದೇಶದ ಇಬ್ಬರು ಮಹಿಳೆಯರು(Woman), ನಾಗಾಲ್ಯಾಂಡ್‌ನ ಇಬ್ಬರು, ಅಸ್ಸಾಂನ ಮೂವರು ಮಹಿಳೆಯರು, ದೆಹಲಿಯ ಒಬ್ಬರು, ಪಶ್ಚಿಮ ಬಂಗಾಳದ ಮೂವರು ಹಾಗೂ ಸ್ಥಳೀಯ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಈ ಸಂಬಂಧ 9 ಮಂದಿ ವಿರುದ್ಧ ಎಚ್‌ಎಸ್‌ಆರ್‌ ಲೇಔಚ್‌, ಅಶೋಕ ನಗರ ಹಾಗೂ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ: ಮೂವರು ಮಹಿಳೆಯರ ರಕ್ಷಣೆ

ಶಿವಮೊಗ್ಗ: ವೇಶ್ಯಾವಾಟಿಕೆ(Prostitution) ಅಡ್ಡೆ ಮೇಲೆ ಮಹಿಳಾ ಠಾಣೆಯ ಪೋಲಿಸರು ದಾಳಿ(Raid) ಮಾಡಿ ವೃದ್ಧ ಸೇರಿ ಇಬ್ಬರ ಬಂಧಿಸಿ ಮೂವರು ಮಹಿಳೆಯರನ್ನ(Woman) ರಕ್ಷಿಸಿದ ಘಟನೆ ನಗರದ ಹೊರವಲಯದಲ್ಲಿ ಜ.30 ರಂದು ನಡೆದಿತ್ತು. ಬಂಧಿತರನ್ನ(Arrest) ದುರ್ಗಿಗುಡಿ ಕೆ.ಎಚ್.ಶಂಕರ್ ಮತ್ತು ಭೋಜಪ್ಪ ಕ್ಯಾಂಪ್‌ನ ಮುನಿಯಪ್ಪ ಎಂದು ಗುರುತಿಸಲಾಗಿತ್ತು.

ಖಚಿತ ಮಾಹಿತಿ ಮೇರೆಗೆ ನಗರದ ಹೊರವಲಯದಲ್ಲಿ ತೋಟದ ಮನೆ ಮೇಲೆ ಪೊಲೀಸರು(Police) ದಾಳಿ ಮಾಡಿದ್ದರು. ದಾಳಿ ವೇಳೆ ಬೆಂಗಳೂರಿನ(Bengaluru) 38 ವರ್ಷದ ಮಹಿಳೆ, ತೀರ್ಥಹಳ್ಳಿಯ 28 ವರ್ಷದ ಯುವತಿ ಹಾಗೂ ಕುಂದಾಪುರ ತಾಲೂಕಿನ 22 ವರ್ಷದ ಯುವತಿಯನ್ನ ರಕ್ಷಣೆ ಮಾಡಲಾಗಿತ್ತು.

ಸೊಗಾನೆ ಬಳಿಯಿರುವ ಭೋಜಪ್ಪ ಕ್ಯಾಂಪ್‌ನ ತೋಟದ ಮನೆಯಲ್ಲಿ ಅಕ್ರಮ ಚಟುವಟಿಕೆ(Illegal Activity) ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ಕಾರ್ಯಾಚರಣೆಯನ್ನ ಮಾಡಿದ್ದರು. 
ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ವೀರೇಶ್ ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ ಅಂತ ತಿಳಿದು ಬಂದಿದೆ. ದಾಳಿ ವೇಳೆ ಪೊಲೀಸರು ಒಂದು ಬೈಕ್‌ನ್ನು ಜಪ್ತಿ ಮಾಡಿದ್ದರು. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 ವರ್ಷದಲ್ಲಿ 75 ಮದುವೆ, ನಂಬಿಸಿ ಕರೆತಂದು ವೇಶ್ಯಾವಾಟಿಕೆಗೆ ದೂಡುತ್ತಿದ್ದ!

ಭೋಪಾಲ್: ಮಧ್ಯಪ್ರದೇಶದ ಇಂದೋರ್ ಪೊಲೀಸರು (Indore) ಪೊಲೀಸರು ಪತ್ತೆ ಮಾಡಿರುವ ಸೆಕ್ಸ್ ರಾಕೆಟ್(prostitution) ಆಘಾತಕಾರಿ ಸತ್ಯಗಳನ್ನು ಬಯಲು ಮಾಡಿದ ಘಟನೆ ಕಳೆದ ವರ್ಷದ ಅ. 05 ರಂದು ನಡೆದಿತ್ತು. ಓರ್ವ ಸೆಕ್ಸ್ ರಾಕೆಟ್ ಕಿಂಗ್ ಪಿನ್ ಸೆರೆ ಸಿಕ್ಕಿದ್ದು ಆತ ನೀಡಿದ ಮಾಹಿತಿ ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದರು.

ತುಮಕೂರು: ವೇಶ್ಯಾವಾಟಿಕೆಗೆ ಲಾಡ್ಜ್‌ನಲ್ಲೇ ಸುರಂಗ..!

ಬಂಧಿತ ಆರೋಪಿ ತಾನು ಇದುವರೆಗೂ ಸುಮಾರು 200ಕ್ಕೂ ಹೆಚ್ಚು ಯುವತಿಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ತಂದು ಬಿಟ್ಟಿರುವುದಾಗಿ ಒಪ್ಪಿಕೊಂಡಿದ್ದನು. ಬಾಂಗ್ಲಾ ದೇಶದಿಂದ ಯುವತಿಯರನ್ನು ತಂದು ಬಿಡುತ್ತಿದ್ದ ಮುನೀರ್ ನನ್ನು ಬಂಧಿಸಲಾಗಿದೆ.

ಮುನೀರ್ ಕಳೆದ ಐದು ವರ್ಷಗಳಿಂದ ವೇಶ್ಯಾವಾಟಿಕೆ ದಂಧೆಯಲ್ಲಿದ್ದಾನೆ. ಬಡ ಮತ್ತು ನಿರಾಶ್ರಿತ ಕುಟುಂಬದ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಮುನೀರ್ ಐದು ವರ್ಷಗಳಲ್ಲಿ 75 ಮದುವೆ (Marriage) ಆಗಿದ್ದೆ ಎಂದಿದ್ದಾನೆ! ಬಾಂಗ್ಲಾದೇಶದಿಂದ 55 ಯುವತಿಯರನ್ನು ಭಾರತಕ್ಕೆ ಅಕ್ರಮವಾಗಿ ಪ್ರತಿ ತಿಂಗಳು ಕರೆತರುತ್ತಿದ್ದ. ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿ ಒಳನುಸುಳಿ ಕರೆತರುತ್ತಿದ್ದ. ನಂತರ ಹಳ್ಳಿಗಳಲ್ಲಿ ತಂಗಿ ಅಲ್ಲಿಂದ ಭಾರತ ಪ್ರವೇಶ ಮಾಡುತ್ತಿದ್ದ.