Shivamogga crime: ನಕಲಿ ವಂಶವೃಕ್ಷ ಸೃಷ್ಟಿಸಿ ಆಸ್ತಿ ವಂಚ​ನೆ: ಆರೋಪಿಗಳಿಗೆ 3 ವರ್ಷ ಕಠಿಣ ಶಿಕ್ಷೆ

ನಕಲಿ ವಂಶವೃಕ್ಷ ಪಡೆದು ಅವಿಭಕ್ತ ಕುಟುಂಬದ ಆಸ್ತಿಯನ್ನು ಲಪಟಾಯಿಸಿದವರಿಗೆ 3 ವರ್ಷ ಕಠಿಣ ಶಿಕ್ಷೆ ಹಾಗೂ .10 ಸಾವಿರ ದಂಡ ವಿಧಿಸಿ ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.

Property fraud by creating fake family tree 3 years  punishment for the accused at shivamogga rav

ತೀರ್ಥಹಳ್ಳಿ (ಮಾ.4) : ನಕಲಿ ವಂಶವೃಕ್ಷ ಪಡೆದು ಅವಿಭಕ್ತ ಕುಟುಂಬದ ಆಸ್ತಿಯನ್ನು ಲಪಟಾಯಿಸಿದವರಿಗೆ 3 ವರ್ಷ ಕಠಿಣ ಶಿಕ್ಷೆ ಹಾಗೂ .10 ಸಾವಿರ ದಂಡ ವಿಧಿಸಿ ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.

ತೀರ್ಥಹಳ್ಳಿ(Teerthahalli) ತಾಲೂಕು ಹಾರೋಗುಳಿಗೆ ಗ್ರಾಮ(Harogulige village)ದ ಕಡಿದಾಳು ವಾಸಿಗಳಾದ ಕೆ.ಸಿ.ಅನಿಲ್‌ ಮತ್ತು ಕೆ.ಸಿ.ಅಮೃತ್‌ಕುಮಾರ್‌(KC Anil and KC Amrit kumar) ಬಿನ್‌ ಚೂಡಪ್ಪ ಗೌಡ ಶಿಕ್ಷೆಗೆ ಒಳಗಾದ ಅಪ​ರಾ​ಧಿ​ಗ​ಳು. ಕಡಿದಾಳು ವಾಸಿ ತಿಮ್ಮಪ್ಪ ಗೌಡ(Kadidalu timmappa gowda)ರ ಹೆಸರಿನಲ್ಲಿದ್ದ 5.36 ಎ​ಕರೆ ಜಮೀನು ಅವಿಭಕ್ತ ಕುಟುಂಬದ ಆಸ್ತಿಯಾಗಿತ್ತು. ತಿಮ್ಮಪ್ಪ ಗೌಡರ ಮರಣದ ನಂತರ ಈ ಆಸ್ತಿ ಅವರ ಪತ್ನಿ ಈರಮ್ಮ ಅವರ ಹೆಸರಿಗೆ ಪೌತಿ ಖಾತೆ ದಾಖಲೆಯಾಗಿತ್ತು. ಈರಮ್ಮ ಅವರ ಪುತ್ರಿಯಾಗಿದ್ದ ಪದ್ಮಾವತಿ ಕೋಂ ಶಿವಣ್ಣ ಅವರಿಗೂ ಆಸ್ತಿಯಲ್ಲಿ ಪಾಲು ಸಲ್ಲಬೇಕಿತ್ತು.

 

ತಂದೆ ಹತ್ಯೆಗೆ ಒಂದು ಕೋಟಿ ರೂ. ಸುಪಾರಿ ಕೊಟ್ಟ ಪಾಪಿ ಮಗ; ಹೆಣದ ಮುಂದೆ ಹೈಡ್ರಾಮಾ!

ಪದ್ಮಾವತಿ ಅವರಿಗೆ ಸಲ್ಲಬೇಕಿದ್ದ ಆಸ್ತಿಯನ್ನು ಕಬಳಿಸುವ ಸಲುವಾಗಿ ಆರೋಪಿಗಳು 2010ರ ಡಿಸೆಂಬರ್‌ 22ರಂದು ಕುತಂತ್ರ ರೂಪಿ​ಸಿ​ದ್ದರು. ಅದ​ರಂತೆ ಪದ್ಮಾವತಿ ನಿಧನರಾಗಿದ್ದಾರೆ ಎಂದು ಕೆ.ಸಿ.ಅನಿಲ್‌ ಮತ್ತು ಕೆ.ಸಿ.ಅಮೃತ್‌ಕುಮಾರ್‌ ನಕಲಿ ವಂಶವೃಕ್ಷ ದಾಖಲೆ ಸೃಷ್ಟಿಸಿ, ವಂಶವೃಕ್ಷದ ಆಧಾರದಲ್ಲಿ ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದರು. ಈ ಸಂಬಂಧ ಪದ್ಮಾವತಿ ಅವರು ನೀಡಿದ ದೂರಿನ ಮೇರೆಗೆ ಪಿಎಸ್‌ಐ ಭರತ್‌ಕುಮಾರ್‌ ಪ್ರಕರಣ ದಾಖಲಿಸಿ ತನಿಖೆ ನಡೆಸಿ, ದೋಷಾರೋಪ ಪಟ್ಟಿಸಲ್ಲಿಸಿದ್ದರು.

ಪ್ರಕರಣದ ಮೊದಲ ಆರೋಪಿ ಈರಮ್ಮ ವಿಚಾರಣೆ ಹಂತದಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಕಾರಣ ಸದರಿಯವರ ವಿರುದ್ಧ ಪ್ರಕರಣವನ್ನು ಪ್ರತ್ಯೇಕಿಸಿ ವಿಚಾರಣೆ ನಡೆದಿತ್ತು. ಸದ್ಯ ಈ ಸಂಬಂಧ ತೀರ್ಥಹಳ್ಳಿ ಹಿರಿಯ ಸಿ.ಜೆ. ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆ ಅಪ​ರಾ​ಧಿ​ಗ​ಳೆಂದು ತೀರ್ಮಾ​ನಿಸಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮೃತ ವ್ಯಕ್ತಿಯ ಹೆಸರಲ್ಲಿದ್ದ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ, ನಗದು ದೋಚಿದ ಖದೀಮರು

ದಂಡ ಕಟ್ಟಲು ವಿಫಲರಾದರೆ 6 ತಿಂಗಳ ಸಾದಾ ಕಾರಾಗೃಹ ವಾಸ ಅನುಭವಿಸುವಂತೆಯೂ ಆದೇಶಿಸಲಾಗಿದೆ. ಅಪ​ರಾ​ಧಿ​ಗ​ಳಿಗೆ ವಿಧಿಸಿದ ದಂಡದ ಮೊತ್ತದಲ್ಲಿ .40 ಸಾವಿರಗಳನ್ನು ಫಿರ್ಯಾದುದಾರರಾದ ಪದ್ಮಾವತಿ ಅವರಿಗೆ ಪರಿಹಾರವಾಗಿ ನೀಡಬೇಕೆಂದು ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಅಭಿಯೋಜಕರಾದ ಪ್ರೇಮಲೀಲಾ ವಾದ ಮಂಡಿಸಿದ್ದರು.

Latest Videos
Follow Us:
Download App:
  • android
  • ios