Asianet Suvarna News Asianet Suvarna News

ನವಿ ಮುಂಬೈ ಮನೆಗಳಲ್ಲಿ ಕಾಣಿಸಿಕೊಂಡ ಪಿಎಫ್‌ಐ ಜಿಂದಾಬಾದ್‌ ಸ್ಟಿಕ್ಕರ್‌: ಪಟಾಕಿ ಕಟ್ಟಿದ ಕಿಡಿಗೇಡಿಗಳು

ಕೆಲವು ಕಿಡಿಗೇಡಿಗಳು ಸ್ಟಿಕ್ಕರ್‌ಗಳ ಮೇಲೆ ಹಸಿರು ಶಾಯಿಯಿಂದ “ಪಿಎಫ್‌ಐ ಜಿಂದಾಬಾದ್” ಮತ್ತು “786” ಎಂದು ಬರೆದು ಶನಿವಾರ ನಸುಕಿನಲ್ಲಿ ಹೊಸ ಪನ್ವೇಲ್‌ ಪ್ರದೇಶದ ಮನೆಯ ಪ್ರವೇಶದ್ವಾರದಲ್ಲಿ ಅಂಟಿಸಿದ್ದರು.

pro pfi stickers cracker bombs put up at houses in navi mumbai cops register case ash
Author
First Published Jun 25, 2023, 1:47 PM IST

ಥಾಣೆ (ಜೂನ್ 25, 2023): ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಯನ್ನು ಶ್ಲಾಘಿಸುವ ಸ್ಟಿಕ್ಕರ್‌ಗಳನ್ನು ಅಂಟಿಸಿರುವ ಮತ್ತು ನವಿ ಮುಂಬೈನ ಕೆಲವು ಮನೆಗಳಲ್ಲಿ ಪಟಾಕಿ ಬಾಂಬ್‌ಗಳನ್ನು ಕಟ್ಟಿರುವ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಅಲ್ಲದೆ, ಸ್ಟಿಕ್ಕರ್‌ ಮತ್ತು ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.

ಕೆಲವು ಕಿಡಿಗೇಡಿಗಳು ಸ್ಟಿಕ್ಕರ್‌ಗಳ ಮೇಲೆ ಹಸಿರು ಶಾಯಿಯಿಂದ “ಪಿಎಫ್‌ಐ ಜಿಂದಾಬಾದ್” ಮತ್ತು “786” ಎಂದು ಬರೆದು ಶನಿವಾರ ನಸುಕಿನಲ್ಲಿ ಹೊಸ ಪನ್ವೇಲ್‌ ಪ್ರದೇಶದ ಮನೆಯ ಪ್ರವೇಶದ್ವಾರದಲ್ಲಿ ಅಂಟಿಸಿದ್ದರು. ಇದಲ್ಲದೆ, ಈ ಪ್ರದೇಶದಲ್ಲಿ ಇತರ ಎರಡು ಮನೆಗಳಲ್ಲಿ ಪಟಾಕಿ ಮತ್ತು ಅಗರಬತ್ತಿಗಳನ್ನು ಕಟ್ಟಿರುವುದು ಕಂಡುಬಂದಿದೆ ಎಂದು ಪೊಲೀಸರು ಅಪರಾಧ ವರದಿಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: ಕರ್ನಾಟಕ, ಕೇರಳ ಸೇರಿ 10 ರಾಜ್ಯಗಳಲ್ಲಿ NIA, ED Raid: ನೂರಾರು ಪಿಎಫ್ಐ ಕಾರ್ಯಕರ್ತರ ಬಂಧನ

ಈ ಸಂಬಂಧ ಖಂಡೇಶ್ವರ ಪೊಲೀಸರು ಶನಿವಾರ ರಾತ್ರಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ಈ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಐಸಿಸ್‌ನಂತಹ ಜಾಗತಿಕ ಭಯೋತ್ಪಾದಕ ಗುಂಪುಗಳೊಂದಿಗೆ "ಸಂಪರ್ಕ" ಹೊಂದಿದ್ದಾರೆ ಎಂದು ಆರೋಪಿಸಿ ಕೇಂದ್ರ ಸರ್ಕಾರವು PFI ಮತ್ತು ಅದರ ಹಲವಾರು ಸಹವರ್ತಿಗಳನ್ನು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಐದು ವರ್ಷಗಳ ಕಾಲ ನಿಷೇಧಿಸಿತ್ತು.

ಇದನ್ನೂ ಓದಿ: ಕರಾವಳಿಯಂತೆ ಬಳ್ಳಾರಿಯಲ್ಲೂ ಪಿಎಫ್‌ಐ ಆ್ಯಕ್ಟಿವ್: ಶಸ್ತ್ರಾಸ್ತ್ರ ತರಬೇತುದಾರನನ್ನು ಬಂಧಿಸಿದ ಎನ್‌ಐಎ

ಬ್ಯಾನ್‌ ಆದರೂ, ಕರ್ನಾಟಕ, ಕೇರಳ, ಜಮ್ಮು ಕಾಶ್ಮೀರ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಪಿಎಫ್‌ಐ ಹಾಗೂ ಸಹವರ್ತಿ ಸಂಘಟನೆಗಳ ನಾಯಕರ ವಿರುದ್ಧ ದಾಳಿ ನಡೆಯುತ್ತಲೇ ಇದೆ. ಇಡಿ, ಸಿಬಿಐ ಹಾಗೂ ರಾಜ್ಯ ಪೊಲೀಸರು ಆಗಾಗ್ಗೆ ರೇಡ್‌ ನಡೆಸುತ್ತಿರುತ್ತಾರೆ ಮತ್ತು ಉಗ್ರರಿಗೆ ಅಥವಾ ಉಗ್ರ ಸಂಘಟನೆಗಳಿಗೆ ಹಣ ಸಹಾಯ ಮಾಡುತ್ತಿರುವ ಸಂಬಂಧ ಹಲವು ಕಾರ್ಯಕರ್ತರನ್ನು ಬಂಧಿಸಲಾಗುತ್ತಿರುತ್ತದೆ. ಆದರೀಗ, ಮಹಾರಾಷ್ಟ್ರದ ಮುಂಬೈನಲ್ಲೇ ಪಿಎಫ್‌ಐ ಜಿಂದಾಬಾದ್‌ ಎಂಬ ಸ್ಟಿಕ್ಕರ್‌ಗಳು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಪೊಲಸರ ಕ್ರಮ ಕುತೂಹಲ ಮೂಡಿಸಿದೆ. 

ಇದನ್ನೂ ಓದಿ: ನಿಷೇಧಿತ PFI ಸಂಘಟನೆಯ ಮಾಸ್ಟರ್ ಮೈಂಡ್ ಬಂಧನ

Follow Us:
Download App:
  • android
  • ios