Asianet Suvarna News Asianet Suvarna News

ಚಿಕ್ಕಬಳ್ಳಾಪುರ: ದರೋಡೆ ನಾಟಕವಾಡಿ ಜೈಲು ಪಾಲಾದ ಖಾಸಗಿ ಕಂಪನಿ ಉದ್ಯೋಗಿ..!

ತನಿಖೆ ಕೈಗೊಂಡ ಪೊಲೀಸರಿಗೆ ಪಳನಿ ಮೇಲೆ ಅನುಮಾನ ಬಂದಿದ್ದು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಆತ ಸುಳ್ಳು ದೂರು ನೀಡಿ ಹಣ ಲಪಟಾಯಿಸಿದ ವಿಷಯ ಹೊರಬಂದಿದೆ. ಪಳಿನಿ ಸೇರಿದಂ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
 

private company employee who was jailed for the robbery drama in Chikkaballapur grg
Author
First Published Sep 9, 2024, 11:20 AM IST | Last Updated Sep 9, 2024, 11:20 AM IST

ಚಿಕ್ಕಬಳ್ಳಾಪುರ(ಸೆ.09): ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕ್ಯಾಷ್​ ಕಲೆಕ್ಷನ್ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ಕಂಪನಿಗೆ ಸೇರಿದ ಕಲೆಕ್ಷನ್ ಹಣವನ್ನು ತನ್ನ ಸ್ನೇಹಿತರ ಮೂಲಕ ರಸ್ತೆಯಲ್ಲಿ ದರೋಡೆ ಮಾಡಿಸಿದ ಬಳಿಕ ಠಾಣೆಯಲ್ಲಿ ದೂರು ದಾಖಲಿಸಿ ಸಿಕ್ಕಿಬಿದ್ದ ಘಟನೆ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ನಗರದ ಮಂಜುನಾಥ ಫೈನಾನ್ಸ್​​ನಲ್ಲಿ ಆಂಧ್ರದ ಎಂ.ಪಳನಿ ಎಂಬುವನು ಕ್ಯಾಷ್​ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಆಗಸ್ಟ್ 21 ರಂದು ಸಂಜೆ ಸಮಯದಲ್ಲಿ ಮಲ್ಲೇಶ ಜತೆ ತಾನು ದ್ವಿ-ಚಕ್ರ ವಾಹನದಲ್ಲಿ ವಿವಿಧೆಡೆ ಹಣ ಕಲೆಕ್ಷನ್ ಬರುತ್ತಿರುವಾಗ ರಸ್ತೆಯಲ್ಲಿ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ಹತ್ತೊಂಭತ್ತು ಸಾವಿರ ನಗದು ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾಗಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಳನಿ ದೂರು ದಾಖಲಿಸಿದ್ದ.

ಹುಬ್ಬಳ್ಳಿ: ಷೇರಲ್ಲಿ ಹಣ ಕಳೆದುಕೊಂಡಿದ್ದಕ್ಕೆ ಬ್ಯಾಂಕ್‌ ದರೋಡೆಗೆ ಯತ್ನ..!

ದೂರುದಾರನೇ ಆರೋಪಿ

ತನಿಖೆ ಕೈಗೊಂಡ ಪೊಲೀಸರಿಗೆ ಪಳನಿ ಮೇಲೆ ಅನುಮಾನ ಬಂದಿದ್ದು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಆತ ಸುಳ್ಳು ದೂರು ನೀಡಿ ಹಣ ಲಪಟಾಯಿಸಿದ ವಿಷಯ ಹೊರಬಂದಿದೆ. ಪಳಿನಿ ಸೇರಿದಂ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಸಿಪಿಐ ಎಂ.ಮಂಜುನಾಥ್ ನೇತೃತ್ವದಲ್ಲಿ ನಂದಿಗಿರಿಧಾಮ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ವಿ.ಮನೋಹರ್, ಗ್ರಾಮಾಂತರ ಠಾಣೆಯ ವಿ.ಎನ್.ಗುಣವತಿ ಹಾಗೂ ಸಿಬ್ಬಂದಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಎಸ್ಪಿ ಚೌಕ್ಸೆಅಭಿನಂದಿಸಿದ್ದಾರೆ.

Latest Videos
Follow Us:
Download App:
  • android
  • ios