ಮೈಸೂರು: ಸರ್ಕಾರಿ ಕೆಲಸ ಕೊಡಿಸೋದಾಗಿ ವಂಚಿಸಿದ್ದ ಉಪನ್ಯಾಸಕನ ಬಂಧನ

*  ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ 6 ಲಕ್ಷ ಹಣ ಪಡೆದು ವಂಚಿಸಿದ್ದ ಆರೋಪಿ
*  ದಾಖಲೆ ಪರಿಶೀಲನೆಗೆ ಬಂದಾಗ ಬಯಲಿಗೆ ಬಂದಿದ್ದ ಸತ್ಯ
*  ಆರೋಪಿಯನ್ನ ಬಂಧಿಸಿದ ಪೊಲೀಸರು 

Private College Lecturer Arrested For Cheated to Young Woman in Mysuru grg

ಮೈಸೂರು (ಅ.15):  ನಗರದ ಮಹಾರಾಣಿ ಕಾಲೇಜಿನಲ್ಲಿ ಕೆಲಸ ಕೊಡಿಸುತ್ತೆನೆ ಎಂದು ವಂಚಿಸಿದ್ದ(Cheat) ಲೆಕ್ಚರ್‌ನನ್ನ ಬೆಂಗಳೂರಿನ ವಿಧಾನಸೌಧ ಠಾಣೆಯ ಪೊಲೀಸರು ಇಂದು(ಶುಕ್ರವಾರ) ಬಂಧಿಸಿದ್ದಾರೆ.  ಸುರೇಶ್ ಅಲಿಯಾಸ್ ನಾಗರಾಜ್ ಎಂಬಾತನೇ ಬಂಧಿತ(Arrest) ಅರೋಪಿಯಾಗಿದ್ದಾನೆ. 

ನಗರದ ಖಾಸಗಿ ಕಾಲೇಜೊಂದರಲ್ಲಿ(College) ಉಪನ್ಯಾಸಕನಾಗಿರುವ(Lecturer) ಸುರೇಶ್ ಮೈಸೂರಿನಲ್ಲಿ(Mysuru) ಕೆಲಸ ಮಾಡುತ್ತಿದ್ದ ಯುವತಿಗೆ ಶಿಕ್ಷಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ 6 ಲಕ್ಷ ಹಣ ಪಡೆದು ವಂಚಿಸಿದ್ದನು.  

ಮೋಸ ಹೋದ ಯುವತಿ ಡಿಟಿಪಿ ಸೆಂಟರ್‌ವೊಂದರಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದಳು. ಅದೇ ಡಿಟಿಪಿ ಸೆಂಟರ್‌ಗೆ ಲೆಟರ್‌ವೊಂದನ್ನ ಟೈಪ್ ಮಾಡಿಸಲು ಆರೋಪಿ ಸುರೇಶ್ ತೆರಳಿದ್ದನು.  ಈ ವೇಳೆ ತನಗೆ ಎಲ್ಲಾದ್ರು ಒಂದು ಕೆಲಸ ಇದ್ರೆ ಹೇಳಿ ಸರ್ ಎಂದು ಮನವಿ ಮಾಡಿಕೊಂಡಿದ್ದಳು ಯುವತಿ. ಎಲ್ಲಾದ್ರು ಯಾಕೆ ಸರ್ಕಾರಿ(Government Job) ಕೆಲಸವನ್ನೇ ಕೊಡಿಸೋಣ ಎಂದು ಸುಳ್ಳು ಭರವಸೆ ಕೊಟ್ಟಿದ್ದನಂತೆ ಸುರೇಶ್. 

ಪತ್ರಕರ್ತನ ಸೋಗಿನಲ್ಲಿ ಸರ್ಕಾರಿ ಕೆಲಸದ ಆಮಿಷ, ಹಲವರಿಗೆ ವಂಚಿಸಿರುವ ಆಸಾಮಿ

ನಂತರ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕಿ(FDAP) ಕೆಲಸ ಕಾಲಿ ಇದೆ. ಕೆಲಸ ಕೊಡಿಸಲು 6 ಲಕ್ಷ ಹಣ ಬೇಕು ಎಂದು ಹೇಳಿ ಯುವತಿ ಕಡೆಯಿಂದ ಹಣ ಪಡೆದಿದ್ದನಂತೆ. ಬಳಿಕ ಬೇರೊಂದು ಡಿಟಿಪಿ ಸೆಂಟರ್‌ನಲ್ಲಿ ಸರ್ಕಾರದ ಲೆಟರ್ ಹೆಡ್ ನಂತೆ ಟೈಪ್‌ ಮಾಡಿಸಿ ಯುವತಿಗೆ ಮಹಾರಾಣಿ ಕಾಲೇಜಿನಲ್ಲಿ ಎಫ್‌ಡಿಎ ಎಂದು ಆಫರ್ ಲೆಟರ್(Offer Letter) ಕೊಡಿಸಿದ್ದನು. 

ಆಫರ್ ಲೆಟರ್ ಸಹಿತ ವಿಧಾನಸೌಧದ ಎಂಎಸ್ ಬಿಲ್ಡಿಂಗ್‌ನ ಶಿಕ್ಷಣ ಇಲಾಖೆಗೆ ದಾಖಲೆ ಪರಿಶೀಲನೆಗೆ ಬಂದಾಗ ಸತ್ಯ ಬಯಲಿಗೆ ಬಂದಿತ್ತು. ಬಳಿಕ ನಂತರ ಶಿಕ್ಷಣ ಇಲಾಖೆಯಿಂದಲೇ(Department of Education) ಆರೋಪಿ ಸುರೇಶ್ ವಿರುದ್ಧ ಪೊಲೀಸ್(Police) ಠಾಣೆಯಲ್ಲಿ ದೂರು ನೀಡಲಾಗಿತ್ತು. ದೂರಿನ ಆಧಾರದ ಮೇಲೆ ಬೆಂಗಳೂರಿನ(Bengaluru) ವಿಧಾನಸೌಧ ಪೊಲೀಸರು ಆರೋಪಿ(Accused) ಸುರೇಶ್‌ನನ್ನ ಬಂಧಿಸಿದ್ದಾರೆ. 
 

Latest Videos
Follow Us:
Download App:
  • android
  • ios