*  ದರೋಡೆ ಕೇಸ್‌ನಲ್ಲಿ ಜೈಲು ಸೇರಿದ್ದ ಮನೋಜ್‌*  ಶೌಚಾಲಯದಲ್ಲಿ ನೇಣು* ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಘಟನೆ  

ಬೆಂಗಳೂರು(ಮೇ.17): ದರೋಡೆಗೆ(Robbery) ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿಯೊಬ್ಬ ಜೈಲಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ಆಜಾದ್‌ ನಗರದ ಮನೋಜ್‌ ಅಲಿಯಾಸ್‌ ಹೂವಾ (22) ಆತ್ಮಹತ್ಯೆ ಮಾಡಿಕೊಂಡವನು. ಸೋಮವಾರ ಬೆಳಗ್ಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ 8ನೇ ಬ್ಯಾರಕ್‌ನ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಬಿಜೆಪಿ ಮುಖಂಡ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್, ಡೆತ್​ನೋಟ್​ನಲ್ಲಿ ಹೆಣ್ಣಿನ ರಹಸ್ಯ ಬಯಲು

ಚಾಮರಾಜಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇತ್ತೀಚೆಗೆ ದರೋಡೆಗೆ ಯತ್ನ ಪ್ರಕರಣದಲ್ಲಿ ಚಾಮರಾಜಪೇಟೆ ಠಾಣೆ ಪೊಲೀಸರು(Police) ಮನೋಜ್‌ ಸೇರಿದಂತೆ ಐವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜೈಲು(Jail) ಸೇರಿದ ಬಳಿಕ ಮನೆಯವರು ಜಾಮೀನು ನೀಡಿ ಬಿಡಿಸುತ್ತಾರೆ ಎಂದು ಮನೋಜ್‌ ಭಾವಿಸಿದ್ದ. ಆದರೆ, ಜೈಲು ಸೇರಿ 15 ದಿನ ಕಳೆದರೂ ಮನೆಯವರು ಸಂಪರ್ಕ ಮಾಡಲಿಲ್ಲ. ಹೀಗಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮನೋಜ್‌ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.