ಬಳ್ಳಾರಿಯ ಕೇಂದ್ರ ಕಾರಾಗೃಹದಿಂದ ಧಾರವಾಡ ನ್ಯಾಯಾಲಯಕ್ಕೆ ವಿಚಾರಣಾಧೀನ ಖೈದಿಯನ್ನು ವಿಚಾರಣೆಗೆ ಹಾಜರುಪಡಿಸಿ ವಾಪಸ್‌ ಕರೆ ತರುವ ವೇಳೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಇಲ್ಲಿನ ನಾಲ್ವರು ಬೆಂಗಾವಲು ಡಿಎಆರ್‌ ಪೊಲೀಸರನ್ನು ಭಾನುವಾರ ಅಮಾನತು ಮಾಡಲಾಗಿದೆ 

ಧಾರವಾಡ (ಆ.21): ಆರೋಪಿಯು ನ್ಯಾಯಾಲಯದ ವಿಚಾರಣೆ ಮುಗಿಸಿ ಮತ್ತೆ ಜೈಲಿಗೆ ತೆರೆಳುವುದು ಸಾಮಾನ್ಯ. ಆದರೆ, ಕುಖ್ಯಾತ ರೌಡಿ ಹಾಗೂ ಭೂಗತ ಪಾತಕಿಯೊಬ್ಬ ಪೊಲೀಸರ ಸಹಾಯ ಪಡೆದು ತನ್ನ ಪ್ರೇಯಸಿಯೊಂದಿಗೆ ಚಕ್ಕಂದವಾಡಲು ಹೋಗಿ ಮತ್ತೆ ಸ್ಥಳೀಯ ಪೊಲೀಸರ ಬಲೆಗೆ ಬಿದ್ದ ಘಟನೆ ಶನಿವಾರ ರಾತ್ರಿ ನಡೆದಿದೆ. ಹಲವು ವರ್ಷಗಳಿಂದ ವಿವಿಧ ಜೈಲಿನಲ್ಲಿರುವ ಬಚ್ಚಾಖಾನ್‌ ಸದ್ಯ ಬಳ್ಳಾರಿ ಜೈಲಿನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಧಾರವಾಡದಲ್ಲಿ ಪೊಲೀಸರ ಮೇಲಿನ ಹಲ್ಲೆ ಘಟನೆ ಕುರಿತು ವಿಚಾರಣೆಗೆ ಬಂದವನನ್ನು ನಂತರ ವಾಪಸ್‌ ಬಳ್ಳಾರಿ ಜೈಲಿಗೆ ಕರೆದೊಯ್ಯಬೇಕಿತ್ತು. ಆದರೆ, ಇದೀಗ ಸತ್ತೂರಿನ ಲಾಡ್ಜ್‌ವೊಂದರಲ್ಲಿ ಪ್ರೇಯಸಿಯೊಂದಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸರಿಗೆ ಅರೆ ಬೆತ್ತಲೆಯಾಗಿ ಸಿಕ್ಕಿಬಿದ್ದಿದ್ದಾನೆ. ಈತನನ್ನು ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಐವರು ಪೊಲೀಸರು ಕರೆ ತಂದಿದ್ದರು ಎಂಬ ಮಾಹಿತಿ ಇದೆ. ವಿಚಾರಣೆ ಬಳಿಕ ಮರಳಿ ಬಳ್ಳಾರಿಗೆ ಕರೆದೊಯ್ಯದೆ ಧಾರವಾಡದ ಸತ್ತೂರು ಬಡಾವಣೆಯಲ್ಲಿರುವ ಲಾಡ್ಜ್‌ನೊಳಗೆ ಯಾರು ಬಿಟ್ಟಿದ್ದಾರೆ ಎಂಬುದೇ ಈಗ ಕುತೂಹಲ ಮೂಡಿಸಿದೆ. ಈತನನ್ನು ವಶಕ್ಕೆ ಪಡೆದ ಪೊಲೀಸರು ವಿದ್ಯಾಗಿರಿ ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ.

ಈ ಮಧ್ಯೆ ಈತನ ಬಳಿ ನಗದು ಕೂಡ ಪತ್ತೆಯಾಗಿದೆ ಎನ್ನಲಾಗಿದೆ. ನ್ಯಾಯಾಲಯದಿಂದ ನೇರವಾಗಿ ಬಳ್ಳಾರಿ ಜೈಲಿಗೆ ತೆರಳಬೇಕಿದ್ದ ಈತನಿಗೆ ಯಾರಾರ‍ಯರು ಸಹಾಯ ಮಾಡಿದ್ದಾರೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಕುರಿತು ವಿಚಾರಣೆ ಮುಂದುವರಿದಿದ್ದು, ಪೊಲೀಸರು ಯಾವುದೇ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡುತ್ತಿಲ್ಲ. ನ್ಯಾಯಾಲಯದಿಂದ ನೇರವಾಗಿ ಬಳ್ಳಾರಿ ಜೈಲಿಗೆ ತೆರಳಬೇಕಿದ್ದ ಈತನಿಗೆ ಯಾರಾರ‍ಯರು ಸಹಾಯ ಮಾಡಿದ್ದಾರೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇನ್ನು 2009ರಲ್ಲಿ ಧಾರವಾಡದ ಕೇಂದ್ರ ಕಾರಾಗೃಹದ ಮೇಲೆ ಧಾರವಾಡ ಉಪನಗರ ಠಾಣೆ ಪೊಲೀಸರು ದಾಳಿ ಮಾಡಿದಾಗ ಈತನ ಬಳಿ ಗಾಂಜಾ ಪತ್ತೆಯಾಗಿತ್ತು. ಇದೇ ವೇಳೆ ದಾಳಿ ಮಾಡಿದ್ದ ಪೊಲೀಸರ ಮೇಲೆ ಈತ ಹಲ್ಲೆಯನ್ನೂ ಮಾಡಿದ್ದ. ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಮೂರು ವರ್ಷ ಶಿಕ್ಷೆಯಾಗಿದೆ. ಇನ್ನು ಗಾಂಜಾ ಪ್ರಕರಣ ಕುರಿತು ವಿಚಾರಣೆ ಇನ್ನೂ ನಡೆಯುತ್ತಿದೆ. ಈ ಕೇಸಿನ ವಿಚಾರಣೆಗೆ ಬಳ್ಳಾರಿ ಜೈಲಿನಿಂದ ಅಲ್ಲಿನ ಪೊಲೀಸರು ಧಾರವಾಡಕ್ಕೆ ಕರೆ ತಂದಿದ್ದರು. ವಿಚಾರಣೆ ಮುಗಿದ ಬಳಿಕ ನೇರವಾಗಿ ಮತ್ತೆ ಬಳ್ಳಾರಿ ಜೈಲಿಗೆ ಹೋಗಬೇಕಿತ್ತು.

 ನಾಲ್ವರು ಪೊಲೀಸರ ಅಮಾನತು: ಭೂಗತ ಪಾತಕಿಗೆ ಧಾರವಾಡ ಪೊಲೀಸರು ಲಾಡ್ಜ್‌ ನಲ್ಲಿ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ನಾಲ್ವರ ಮೇಲೆ ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಬಳ್ಳಾರಿಯ ಒಬ್ಬ ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಮೂವರು ಪೇದೆಗಳನ್ನು ಅಮಾನತು ಮಾಡಿ ಬಳ್ಳಾರಿ ಎಸ್ಪಿ ಅವರು ಆದೇಶ ಮಾಡಿದ್ದಾರೆ.

ರೌಡಿಶೀಟರ್ ಬಚ್ಚಾಖಾನ್ ಗೆ ಲಾಡ್ಜ್‌ನಲ್ಲಿ ಯುವತಿ ಜತೆ ಕಾಲ ಕಳೆಯಲು ಅವಕಾಶ ಕೊಟ್ಟ ಪೋಲಿಸರು..! 

ಪ್ರಕರಣದ ವಿಚಾರಣೆಗೆ ಬಳ್ಳಾರಿ ಜೈಲಿನಿಂದ ಧಾರವಾಡಕ್ಕೆ ಬಂದಿದ್ದ ಪಾತಕಿ ಬಚ್ಚಾಖಾನ್‌ ರಾತ್ರಿ ತನ್ನ ಜತೆಗೆ ಬಂದಿದ್ದ ಪೊಲೀಸರ ಸಹಕಾರದಿಂದ ಶನಿವಾರ ರಾತ್ರಿ ಲಾಡ್ಜ್‌ವೊಂದರಲ್ಲಿ ತನ್ನ ಪ್ರೇಯಸಿಯೊಂದಿಗೆ ಸರಸವಾಡುವಾಗಲೇ ವಿದ್ಯಾಗಿರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ರಾಯಾಪುರದ ಬಳಿಯ ಪ್ರಕೃತಿ ಲಾಡ್ಜ್‌ನಲ್ಲಿ ತಂಗಲು ವ್ಯವಸ್ಥೆ ಪೊಲೀಸರೇ ವ್ಯವಸ್ಥೆ ಮಾಡಿಕೊಟ್ಟಿದ್ದರು ಎಂಬ ಆರೋಪ ಇತ್ತು. ಮಾಹಿತಿ ಆಧರಿಸಿ ದಾಳಿ ಮಾಡಿದ್ದ ಹು-ಧಾ ಪೊಲೀಸ್‌ ಆಯುಕ್ತ ಲಾಬೂರಾಮ್‌ ಬಚ್ಚಾಖಾನ ಜತೆಗೆ ಅವನಿಗೆ ಸಹಾಯ ಮಾಡಿದ್ದ ಮೈನುದ್ದೀನ್‌ ಪಟೇಲ್‌, ಮೊಹ್ಮದ ಯೂನೂಸ್‌ ಹಾಗೂ ಫಜಲ್‌ ಕುಂದಗೋಳ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ. ಕರ್ತವ್ಯ ನಿರ್ಲಕ್ಷ್ಯದ ಮೇಲೆ ಬಳ್ಳಾರಿಯ ಹೆಡ್‌ ಕಾನ್‌ಸ್ಟೆಬಲ್‌ ಯೋಗೇಶ ಆಚಾರ, ಪೇದೆಗಳಾದ ಎಸ್‌. ಶಶಿಕುಮಾರ್‌, ರವಿಕುಮಾರ್‌ ಹಾಗೂ ಸಂಗಮೇಶ ಅಮಾನತು ಮಾಡಲಾಗಿದೆ.