ಪ್ರವೀಣ್‌ ನೆಟ್ಟಾರು ಹಂತಕರ ಹುಡುಕಿಕೊಟ್ಟರೆ ಇನಾಮು: ಎನ್‌ಐಎಯಿಂದ ಘೋಷಣೆ

ಮಡಿಕೇರಿ (ನ.2): ರಾಜ್ಯಾದ್ಯಂತ ಸಂಚಲನ ಮೂಡಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಕಾರ್ಯಕರ್ತ ಬೆಳ್ಳಾರೆ ಹತ್ಯೆ ಪ್ರಕರಣ. ಪ್ರವೀಣ್ ನೆಟ್ಟಾರು ಹತ್ಯೆಯಿಂದಾಗಿ ದಕ್ಷಿಣ ಕನ್ನಡ ಹೊತ್ತಿ ಉರಿದಿತ್ತು. ಹಲವಾರು ಕೋಮು ಘರ್ಷಣೆಗಳು ನಡೆದವು. ಈ ಹತ್ಯೆ ಹಿಂದಿನ ಹಕಿಕತ್ತು ಬಯಲಿಗೆಳೆಯಲು ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಹಿಂದು ಸಂಘಟನೆಗಳು ಒತ್ತಾಯಿಸಿದ್ದವು. ಅಂತಯೇ ಈ ಪ್ರಕರಣ ಎನ್‌ಐಎ ವಹಿಸಿಕೊಂಡು ತನಿಖೆ ಮುಂದುವರಿಸಿದೆ. ಸಂಶಯದ ಹಲವಾರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೂ .ಪ್ರವೀಣ್ ಹತ್ಯೆಯ ಆರೋಪಿಗಳು ಇನ್ನೂ ಸುಳಿವು ಸಿಗುತ್ತಿಲ್ಲ. 

ಇದೀಗ ಪ್ರವೀಣ್‌ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಾಲ್ವರು ನಿಷೇಧಿತ ಪಿಎಫ್‌ಐ ಸಂಘಟನೆ ಆರೋಪಿಗಳನ್ನು ಹುಡುಕಿಕೊಡುವವರಿಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಹುಮಾನ ಘೋಷಣೆ ಮಾಡಿದೆ. ಆರೋಪಿಗಳಲ್ಲಿ ಮೂವರು ದಕ್ಷಿಣ ಕನ್ನಡ ಹಾಗೂ ಒಬ್ಬ ಕೊಡಗು ಮೂಲದವನು. ಇವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಬೂಡುಮನೆ ನಿವಾಸಿ ಮೊಹಮ್ಮದ್‌ ಮುಸ್ತಫಾ .5 ಲಕ್ಷ, ಕೊಡಗು ಜಿಲ್ಲೆ ಮಡಿಕೇರಿ ನಗರದ ಗದ್ದಿಗೆ ನಿವಾಸಿ ತುಫೈಲ್‌ ಎಂ.ಎಚ್‌ .5 ಲಕ್ಷ, ಸುಳ್ಯ ನಗರದ ಕಲ್ಲುಮುಟ್ಲು ನಿವಾಸಿ ಉಮ್ಮರ್‌ ಫಾರೂಕ್‌ .2 ಲಕ್ಷ, ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಅಬೂಬಕ್ಕರ್‌ ಸಿದ್ದಿಕ್‌ ಎಂಬಾತನನ್ನು ಹುಡುಕಿಕೊಡುವವರಿಗೆ .2 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ.

ದಕ್ಷಿಣ ಕನ್ನಡ: ಪ್ರವೀಣ್ ನೆಟ್ಟಾರು ಹತ್ಯೆಗೆ ಫ್ರೀಡಂ ಕಮ್ಯೂನಿಟಿ ಹಾಲಲ್ಲಿ ಸ್ಕೆಚ್? ಟ್ರಸ್ಟಿ ಅರೆಸ್ಟ್