Asianet Suvarna News Asianet Suvarna News

ಜಿಪಂ ಮಾಜಿ ಸದಸ್ಯೆ ರೇಪ್‌ ಕೇಸ್‌: ಪ್ರಜ್ವಲ್‌ ರೇವಣ್ಣ 6 ದಿನ ಎಸ್‌ಐಟಿ ವಶಕ್ಕೆ

ಈ ಕೃತ್ಯದಲ್ಲಿ ಹಾಸನಕ್ಕೆ ಕರೆದೊಯ್ದು ಪ್ರಜ್ವಲ್ ಅವರನ್ನು ಮತ್ತೆ ಎಸ್‌ಐಟಿ ತನಿಖೆ ನಡೆಸಲಿದೆ. ಪ್ರಜ್ವಲ್ ವಿರುದ್ಧ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ರನ್ನು ಬಂಧಿಸಿದ್ದರು. ಈಗ ಜಿಪಂ ಮಾಜಿ ಸದಸ್ಯೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಅವರನ್ನು 2ನೇ ಬಾರಿಗೆ ಬಂಧಿಸಲಾಗಿದೆ. 

Prajwal Revanna in SIT Custody for 6 days on Former ZP Member Rape Case grg
Author
First Published Jun 13, 2024, 10:26 AM IST

ಬೆಂಗಳೂರು(ಜೂ.13):  ಹಾಸನ ಜಿಲ್ಲೆ ಜಿಪಂ ಮಾಜಿ ಸದಸ್ಯೆ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಆರು ದಿನಗಳ ಕಾಲ ವಿಶೇಷ ತನಿಖಾ ದಳ (ಎಸ್‌ಐಟಿ) ವಶಕ್ಕೆ ಪಡೆದಿದೆ. 

2ನೇ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ರನ್ನು ಬಂಧನಕ್ಕೊಳಪಡಿಸಿದ ಎಸ್ಐಟಿ, ಬಳಿಕ ನ್ಯಾಯಾಲಯದ ಬಾಡಿ ವಾರಂಟ್ ಮೇರೆಗೆ ಅವರನ್ನು ವಶಕ್ಕೆ ಪಡೆದಿದೆ. 

ಸೆಕ್ಸ್‌ ಪೆನ್‌ಡ್ರೈವ್‌ ಹಂಚಿಕೆ ಮಹಾಪಾಪ: ಹೈಕೋರ್ಟ್‌ ಬೇಸರ

ಈ ಕೃತ್ಯದಲ್ಲಿ ಹಾಸನಕ್ಕೆ ಕರೆದೊಯ್ದು ಪ್ರಜ್ವಲ್ ಅವರನ್ನು ಮತ್ತೆ ಎಸ್‌ಐಟಿ ತನಿಖೆ ನಡೆಸಲಿದೆ. ಪ್ರಜ್ವಲ್ ವಿರುದ್ಧ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ರನ್ನು ಬಂಧಿಸಿದ್ದರು. ಈಗ ಜಿಪಂ ಮಾಜಿ ಸದಸ್ಯೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಅವರನ್ನು 2ನೇ ಬಾರಿಗೆ ಬಂಧಿಸಲಾಗಿದೆ. ಇನ್ನುಳಿದ ಕೆ.ಆರ್‌.ನಗರ ತಾಲೂಕಿನ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ ಬಾಕಿ ಉಳಿದಿದೆ.

Latest Videos
Follow Us:
Download App:
  • android
  • ios