ಶ್ರದ್ಧಾ ವಾಕರ್‌ಳನ್ನು ಕೊಲೆ ಮಾಡಿ 35 ಪೀಸ್ ಮಾಡಿದ ಪ್ರಕರಣದಲ್ಲಿ ಆರೋಪಿ ಅಫ್ತಾಬ್ ಪೂನಾವಾಲಾ ಮೇಲೆ ಸೋಮವಾರ ಸಂಜೆ ಹಲ್ಲೆ ಯತ್ನ ನಡೆದಿದೆ. ಹಿಂದುಸೇನೆಯಸ ಕಾರ್ಯಕರ್ತರು ಖಡ್ಗ ಹಿಡಿದು ಆತನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ದಾಳಿ ಮಾಡಿದ್ದಾರೆ.
ನವದೆಹಲಿ (ನ.28): ಗೆಳತಿ ಶ್ರದ್ಧಾ ವಾಕರ್‌ಳನ್ನು ಅತ್ಯಂತ ಅಮಾನುಷವಾಗಿ 35 ಪೀಸ್ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಅಫ್ತಾಬ್ ಪೂನಾವಾಲಾ ಮೇಲೆ ಸೋಮವಾರ ಹಲ್ಲೆಯಾಗಿದೆ. ಸೋಮವಾರ ರೋಹಿಣಿ ಪ್ರದೇಶದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆದ ಪಾಲಿಗ್ರಾಫಿ ಟೆಸ್ಟ್ ಬಳಿಕ ಆತನನ್ನು ತಿಹಾರ್ ಜೈಲಿಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಹಿಂದುಸೇನೆಯ ಕಾರ್ಯಕರ್ತರು ಎಂದು ಹೇಳಿಕೊಂಡ 4-5ಜನ ವ್ಯಕ್ತಿಗಳು ಪೊಲೀಸ್ ವ್ಯಾನ್ ಮೇಲೆ ದಾಳಿ ಮಾಡಿದ್ದಾರೆ. ಇದರಲ್ಲಿ ಇಬ್ಬರು ವ್ಯಕ್ತಿಗಳು ಕೈಯಲ್ಲಿ ಖಡ್ಗ ಹಿಡಿದು ಆತನನ್ನು ಕೊಚ್ಚಿಹಾಕುವವ ಪ್ರಯತ್ನ ಮಾಡಿದ್ದರು. ಈ ಹಂತದಲ್ಲಿ ಜಾಗೃತರಾದ ಪೊಲೀಸರು ತಮ್ಮಲ್ಲಿದ್ದ ರಿವಾಲ್ವರ್ ಅನ್ನು ತೆಗೆದು ಶೂಟ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆಯನ್ನೂ ನೀಡಿದರು. ಆದರೆ, ಅವರ ಆಕ್ರೋಶ ಮಾತ್ರ ತೀರುತ್ತಿರಲಿಲ್ಲ. ಎಫ್‌ಎಸ್‌ಎಲ್ ಕಚೇರಿಯ ಮುಂದೆ ನಡೆದ ಈ ಘಟನೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ನಡು ರಸ್ತೆಯಲ್ಲಿಯೇ ಕತ್ತಿ ಹಿಡಿದು ವಿಕೃತಿ ಮರೆದ ಕಾರ್ಯಕರ್ತರನ್ನು ಪೊಲೀಸರು ತಕ್ಷಣವೇ ಬಂಧನ ಮಾಡಿದ್ದಾರೆ.
ಶ್ರದ್ಧಾ ವಾಕರ್‌ಳ ಕೊಲೆ ಪ್ರಕರಣದಲ್ಲಿ ಸೋಮವಾರ ಅಫ್ತಾಬ್ ಪೂನಾವಾಲಾನನ್ನು ನಾಲ್ಕನೇ ಬಾರಿ ಪಾಲಿಗ್ರಾಫಿ ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆಯಲ್ಲಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಈ ನಡುವೆ ಆಕೆಯ ದೇಹವನ್ನು ಕತ್ತರಿಸಲು ಬಳಸಿದ್ದ ಆಯುಧವನ್ನು ಪೊಲೀಸರು ಪತ್ತೆ ಮಾಡಿದ್ದು ಪ್ರಕರಣದಲ್ಲಿ ದೊಡ್ಡ ಯಶಸ್ಸು ಸಂಪಾದನೆ ಮಾಡಿದ್ದಾರೆ.
ಕೆಲ ದಿನಗಳಿಂದ ಪಾಲಿಗ್ರಾಫಿ ಟೆಸ್ಟ್‌ಗಾಗಿ ರೋಹಿಣಿ ಪ್ರದೇಶಕ್ಕೆ ಬರುತ್ತಿರುವುದನ್ನು ಇವರುಗಳು ಗಮನಿಸಿದ್ದರು. ಮಂಗಳವಾರ ಈತನ ಟೆಸ್ಟ್ ಮುಗಿಸಿ ಪೊಲೀಸ್ ವ್ಯಾನ್‌ನಲ್ಲಿ ಈತನನ್ನು ಹೊರತರಲಾಗುತ್ತಿತ್ತು. ಈ ಹಂತದಲ್ಲಿ 15 ಮಂದಿ ವ್ಯಕ್ತಿಗಳು ಪೊಲೀಸ್ ವ್ಯಾನ್ ಮೇಲೆ ದಾಳಿ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅದರಲ್ಲಿ ಇಬ್ಬರು ವ್ಯಕ್ತಿಗಳು ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡಿದ್ದರೆ, ಉಳಿದವರು ವ್ಯಾನ್‌ಗೆ ಅಡ್ಡಲಾಗಿ ನಿಂತಿದ್ದರು. ಅಫ್ತಾಬ್‌ನಲ್ಲಿ ಕರೆತರುತ್ತಿದ್ದ ವ್ಯಾನ್ ಹೊರಬರುತ್ತಿದ್ದ ಬೆನ್ನಲ್ಲಿಯೇ 4-5 ಮಂದಿ ವ್ಯಾನ್‌ನ ಹಿಂದಿನ ಬಾಗಿಲನ್ನು ತೆರೆಯುವ ಪ್ರಯತ್ನ ಮಾಡಿದ್ದರು. ಈ ವೇಳೆ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಕೂಡ ರಕ್ಷಣೆಗಾಗಿ ಧಾವಿಸಿದ್ದರು.
'ಇಂಥ ಕೆಲಸ ಮಾಡಿದ ಯಾರೊಬ್ಬರನ್ನೂ ತಾವು ಬಿಡೋದಿಲ್ಲ' ಎಂದು ದಾಳಿ ಮಾಡಿದ ವ್ಯಕ್ತಿಗಳು ಹೇಳುತ್ತಿದ್ದರು. ಆತನನ್ನು ರಸ್ತೆಗೆ ಎಳೆದು ಖಡ್ಗದಿಂದ ಕತ್ತರಿಸಬೇಕೆನ್ನುವ ಪ್ರಮಾಣ ಮಾಡಿದಂತೆ ಅವರು ನಡೆದುಕೊಂಡಿದ್ದರು. ಎಲ್ಲಾ ದಾಳಿಕೋರರು ಕಾರ್‌ನಲ್ಲಿ ಬಂದಿದ್ದು. ವ್ಯಾನ್‌ನಲ್ಲಿ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ತಂದಿದ್ದರು ಎಂದು ಹೇಳಲಾಗಿದೆ.
Shraddha Walkar Murder: ದೇಹವನ್ನು ಕತ್ತರಿಸಲು ಬಳಸಿದ್ದ ಆಯುಧ, ಶ್ರದ್ಧಾಳ ಉಂಗುರ ಪತ್ತೆ!
ಸದ್ಯ ಅಫ್ತಾಬ್ ಪೊಲೀಸ್ ವಶದಲ್ಲಿದ್ದು, ಆತನ ಭದ್ರತೆಯ ಹೊಣೆಯನ್ನು ಪೊಲೀಸರು ಹೊತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ದಾಳಿ ಸಂಭವಿಸಿದಾಗ, ಅಫ್ತಾಬ್ ಅವರನ್ನು ರಕ್ಷಿಸಲು ಮತ್ತು ದಾಳಿಕೋರರನ್ನು ಹಿಮ್ಮೆಟ್ಟಿಸಲು ಪೊಲೀಸರು ಸರ್ಕಾರಿ ಬಂದೂಕುಗಳ ಸಹಾಯ ಪಡೆದಿದ್ದಾರೆ. ಈ ದಾಳಿಕೋರರ ತನಿಖೆಯಲ್ಲಿ ಪೊಲೀಸರು ಈಗ ಭಾಗಿಯಾಗಲಿದ್ದಾರೆ. ಸದ್ಯ ಈ ದಾಳಿಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರದ್ಧಾ ರೀತಿ ಹತ್ಯೆ ಕೇಸ್: ದೇಹ 22 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಮಹಿಳೆ, ಪುತ್ರ ಬಂಧನ
70 ತುಂಡುಗಳನ್ನು ಕತ್ತರಿಸುವ ಯೋಜನೆಯಾಗಿತ್ತು: ದಾಳಿಕೋರರಲ್ಲಿ ಒಬ್ಬ ಮಾಧ್ಯಮಗಳಿಗೆ ಮಾತನಾಡಿದ್ದು, ಬೆಳಿಗ್ಗೆ 11 ರಿಂದ ಅಫ್ತಾಬ್‌ನನ್ನು ಕೊಲ್ಲಲು ಯೋಜನೆ ಮಾಡುತ್ತಿದ್ದಾಗಿ ಹೇಳಿದರು. ನಾವು 15 ಜನರ ತಂಡ.ಅಫ್ತಾಬ್ ಅನ್ನು 70 ತುಂಡುಗಳಾಗಿ ಕತ್ತರಿಸುವುದು ನಮ್ಮ ಪ್ರಯತ್ನವಾಗಿತ್ತು ಎಂದಿದ್ದಾರೆ. ಆತ ನಮ್ಮ ಸಹೋದರಿಯನ್ನು 35 ಪೀಸ್ ಮಾಡಿದ್ದಾನೆ. ಇಂದು ಆತನನ್ನು 70 ಪೀಸ್ ಮಾಡುತ್ತಿದ್ದೆವು ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಎಲ್ಲಾ ಘಟನೆಗಳು ಕೇವಲ 15 ನಿಮಿಷಗಳ ಅಂತರದಲ್ಲಿ ನಡೆದು ಹೋದವು.
