Asianet Suvarna News Asianet Suvarna News

ಶ್ರದ್ಧಾ ರೀತಿ ಹತ್ಯೆ ಕೇಸ್‌: ದೇಹ 22 ಪೀಸ್‌ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಮಹಿಳೆ, ಪುತ್ರ ಬಂಧನ

ವ್ಯಕ್ತಿಯೊಬ್ಬರನ್ನು ಕೊಂದು, ಆತನ ದೇಹವನ್ನು ಕತ್ತರಿಸಿ, ಫ್ರಿಡ್ಜ್‌ನಲ್ಲಿ ಶೇಖರಿಸಿಟ್ಟ ನಂತರ ದೇಹದ ವಿವಿಧ ಭಾಗಗಳನ್ನು ಪೂರ್ವ ದೆಹಲಿಯ ನೆರೆಹೊರೆಯ ಪ್ರದೇಶಗಳಲ್ಲಿ ವಿಲೇವಾರಿ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಇಬ್ಬರನ್ನು ಬಂಧಿಸಲಾಗಿದೆ. 

delhi woman son arrested for murder eerily similar to shraddha walkars ash
Author
First Published Nov 28, 2022, 12:46 PM IST

ಶ್ರದ್ಧಾ ವಾಕರ್ (Shraddha Walker) ಬರ್ಬರ ಹತ್ಯೆಯ ಭೀಕರತೆಯು ರಾಷ್ಟ್ರ ರಾಜಧಾನಿ (National Capital) ದೆಹಲಿ (Delhi) ಮಾತ್ರವಲ್ಲ ಇಡೀ ದೇಶದ ಜನರನ್ನೇ ಬೆಚ್ಚಿ ಬೀಳಿಸಿದೆ. ಈ ಮಧ್ಯೆ, ದೆಹಲಿಯಲ್ಲೇ ಇದೇ ರೀತಿ ಮತ್ತೊಂದು ಹತ್ಯೆ ಪ್ರಕರಣ (Murder Case) ವರದಿಯಾಗಿದೆ. ರಾಷ್ಟ್ರ ರಾಜಧಾನಿಯ ಪೂರ್ವ ಭಾಗದಲ್ಲಿ ಇದೇ ರೀತಿಯ ಅಪರಾಧವನ್ನು (Crime) ಸೂಚಿಸುವ ಸುಳಿವುಗಳನ್ನು ಪೊಲೀಸರು ಕಂಡುಕೊಂಡಿದ್ದಾರೆ. ಈ ಸಂಬಂಧ ಒಬ್ಬರು ಮಹಿಳೆ ಮತ್ತು ಆಕೆಯ ಮಗನನ್ನು ದೆಹಲಿ ಪೊಲೀಸ್ ಅಪರಾಧ ಘಟಕವು (Delhi Police Crime Branch) ವ್ಯಕ್ತಿಯೊಬ್ಬರನ್ನು ಕೊಂದು, ಆತನ ದೇಹವನ್ನು ಕತ್ತರಿಸಿ, ಫ್ರಿಡ್ಜ್‌ನಲ್ಲಿ ಶೇಖರಿಸಿಟ್ಟ ನಂತರ ದೇಹದ ವಿವಿಧ ಭಾಗಗಳನ್ನು ಪೂರ್ವ ದೆಹಲಿಯ ನೆರೆಹೊರೆಯ ಪ್ರದೇಶಗಳಲ್ಲಿ ಬಿಸಾಡಿದ ಆರೋಪದ ಮೇಲೆ ಬಂಧಿಸಿದೆ.

28 ವರ್ಷದ ಅಫ್ತಾಬ್ ಪೂನಾವಾಲಾ ತನ್ನ ಲಿವ್-ಇನ್ ಪಾರ್ಟ್‌ನರ್‌ ಶ್ರದ್ಧಾ ವಾಕರ್‌ಳನ್ನು ಕತ್ತು ಹಿಸುಕಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ನಂತರ ದಕ್ಷಿಣ ದೆಹಲಿಯ ಮೆಹ್ರೌಲಿ ಅರಣ್ಯದಲ್ಲಿ ಎಸೆದ ರೀತಿಯ ಘಟನೆಗೆ ಇದು ವಿಲಕ್ಷಣವಾಗಿ ಹೋಲುತ್ತದೆ. ಜೂನ್‌ ತಿಂಗಳಲ್ಲೇ ದೆಹಲಿಯ ಪಾಂಡವ್ ನಗರದಲ್ಲಿ ಪೊಲೀಸರಿಗೆ ಮೊದಲ ಬಾರಿಗೆ ದೇಹದ ಭಾಗಗಳು ಪತ್ತೆಯಾಗಿವೆ, ಆದರೆ ಅವುಗಳ ಕೊಳೆತ ಸ್ಥಿತಿಯಿಂದಾಗಿ ಅವುಗಳನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಇಲ್ಲೂ ಮೃತದೇಹವನ್ನು 22 ಪೀಸ್‌ ಮಾಡಿ ಫ್ರಿಡ್ಜ್‌ನಲ್ಲಿಡಲಾಗಿತ್ತು ಎಂದು ತಿಳಿದುಬಂದಿದೆ. 

ಇದನ್ನು ಓದಿ: ಅಫ್ತಾಬ್‌ ನನ್ನನ್ನು ಕೊಲ್ಲುತ್ತಾನೆ, ತುಂಡಾಗಿ ಕತ್ತರಿಸುತ್ತಾನೆಂದು 2 ವರ್ಷಗಳ ಹಿಂದೆಯೇ ದೂರು ನೀಡಿದ್ದ ಶ್ರದ್ಧಾ..!

ಆದರೆ, ಶ್ರದ್ಧಾ ವಾಕರ್‌  ಹತ್ಯೆ ಪ್ರಕರಣದ ಘೋರ ವಿವರಗಳು ಬೆಳಕಿಗೆ ಬರಲು ಪ್ರಾರಂಭಿಸಿದ ನಂತರ, ಅಪರಿಚಿತ ದೇಹದ ಭಾಗಗಳು ಆಕೆಯದೇ ಎಂಬ ಬಗ್ಗೆಯೂ ತನಿಖೆ ನಡೆಸಲಾಯಿತು. ಆದರೆ ಇದೀಗ  ಮೃತದೇಹದ ಭಾಗಗಳು ಪಾಂಡವನಗರ ನಿವಾಸಿ ಅಂಜನ್ ದಾಸ್ ಎಂಬುವವರಿಗೆ ಸೇರಿದೆ ಎಂದು ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: Shraddha murder Case: ಪಾಲಿಗ್ರಾಫ್‌ ಪರೀಕ್ಷೆಗೆ ಒಳಗಾದ ಅಫ್ತಾಬ್ ಪೂನಾವಾಲಾ

ಅಕ್ರಮ ಸಂಬಂಧ ಕಾರಣ..!

ಆರೋಪಿಗಳಾದ ಪೂನಂ ಮತ್ತು ಆಕೆಯ ಮಗ ದೀಪಕ್ ಜೂನ್‌ನಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಅಂಜನ್ ದಾಸ್ ಎಂಬುವರನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಸಂತ್ರಸ್ಥನಿಗೆ ಮೊದಲು ನಿದ್ರೆ ಮಾತ್ರೆಗಳನ್ನು ನೀಡಿ ನಂತರ ಕೊಲೆ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ನಂತರ ಆರೋಪಿಗಳು ಆತನ ದೇಹವನ್ನು ಕತ್ತರಿಸಿ, ಫ್ರಿಡ್ಜ್‌ನಲ್ಲಿ ಮೃತದೇಹದ ತುಂಡುಗಳನ್ನು ಸಂಗ್ರಹಿಸಿ ಪಾಂಡವ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದೊಂದೇ ಬಿಸಾಡಿದ್ದಾರೆ ಎಂದು ತಿಳಿದುಬಂದಿದೆ.

ನೆರೆಹೊರೆಯಲ್ಲಿನ ಸಿಸಿಟಿವಿ ಕ್ಯಾಮೆರಾಗಳಿಂದ ಆಘಾತಕಾರಿ ದೃಶ್ಯಾವಳಿಗಳು ದೀಪಕ್ ತಡರಾತ್ರಿಯಲ್ಲಿ ಕೈಯಲ್ಲಿ ಚೀಲ ಹಿಡಿದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ.  ಇದು ದೇಹದ ತುಂಡುಗಳನ್ನು ಎಸೆಯಲು ಅವರು ಹೋಗುತ್ತಿರುವ ಘಟನೆಗಳಲ್ಲಿ ಒಂದಾಗಿದೆ ಎಂದು ಪೊಲೀಸರು ಹೇಳುತ್ತಾರೆ. ಇನ್ನು, ದೀಪಕ್‌ ತಾಯಿ ಪೂನಂ ಸಹ ಮಗನನ್ನು ಹಿಂಬಾಲಿಸುತ್ತಿರುವುದು ಕಂಡುಬಂದಿದೆ. 

ಇದನ್ನೂ ಓದಿ: ಮುಂಜಾನೆ 4 ಗಂಟೆಗೆ ಬ್ಯಾಗ್‌ ಹಿಡಿದು ಹೊರಟಿದ್ದ ಅಫ್ತಾಬ್‌, ಸಿಸಿಟಿವಿ ದೃಶ್ಯಾವಳಿ ಬಿಡುಗಡೆ!

ಮತ್ತೊಂದು ವಿಡಿಯೋ ಕ್ಲಿಪ್‌ನಲ್ಲಿ ಸಹ ದೀಪಕ್‌ ಹಾಗೂ ಪೂನಂ ಓಡಾಡುತ್ತಿರುವುದು ಕಂಡುಬಂದಿದ್ದು, ಬಹುಶ: ಅವರು ದೇಹದ ಭಾಗಗಳನ್ನು ಬಿಸಾಡಲು ಸೂಕ್ತ ಸ್ಥಳದ ಪರಿಶೀಲನೆಯಲ್ಲಿದ್ದರು ಎಂದೂ ದೆಹಲಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: Delhi Crime: ಶ್ರದ್ದಾ ಬರ್ಬರ ಹತ್ಯೆ ಪ್ರಕರಣ: ಗ್ಯಾಸ್ ಸಿಲಿಂಡರ್ ಬಳಿ ದೊರೆತ ಸಾಕ್ಷ್ಯ..!

Follow Us:
Download App:
  • android
  • ios