ಬೀದರ್‌: ಎರಡು ಸುಲಿಗೆ ಪ್ರಕರಣ ಬೇಧಿಸಿದ ಪೊಲೀಸ್‌ ತಂಡ

ಇತ್ತೀಚಿನ ದಿನಗಳಲ್ಲಿ ಬೀದರ್‌ ನಗರದಲ್ಲಿ ಮೊಬೈಲ್‌ ಸುಲಿಗೆ ಪ್ರಕರಣಗಳು ವರದಿಯಾಗುತ್ತಿದ್ದ ಕಾರಣ ಈ ಪ್ರಕರಣಗಳು ತಡೆಗಟ್ಟಲು ಹಾಗೂ ಪತ್ತೆ ಮಾಡಲು ಬೀದರ್‌ ಉಪವಿಭಾಗದಿಂದ ಒಂದು ರೌಡಿ ನಿಗ್ರಹ ದಳ ತಂಡವನ್ನು ರಚಿಸಲಾಗಿತ್ತು. 

Police Team Investigated Two Extortion Cases in Bidar grg

ಬೀದರ್‌(ಜೂ.22): ಗಾಂಧಿಗಂಜ್‌ ಪೊಲೀಸ್‌ ಠಾಣೆ ಮತ್ತು ಬೀದರ್‌ ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ಎರಡು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ 20ರಂದು ಒಬ್ಬ ಆರೋಪಿಯನ್ನು ಬಂಧಿಸಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಬೀದರ್‌ ನಗರದಲ್ಲಿ ಮೊಬೈಲ್‌ ಸುಲಿಗೆ ಪ್ರಕರಣಗಳು ವರದಿಯಾಗುತ್ತಿದ್ದ ಕಾರಣ ಈ ಪ್ರಕರಣಗಳು ತಡೆಗಟ್ಟಲು ಹಾಗೂ ಪತ್ತೆ ಮಾಡಲು ಬೀದರ್‌ ಉಪವಿಭಾಗದಿಂದ ಒಂದು ರೌಡಿ ನಿಗ್ರಹ ದಳ ತಂಡವನ್ನು ರಚಿಸಲಾಗಿತ್ತು. ಪೊಲೀಸ್‌ ಅಧೀಕ್ಷಕರಾದ ಚನ್ನಬಸವಣ್ಣ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಮಹೇಶ ಮೇಘಣ್ಣವರ್‌, ಪೊಲೀಸ್‌ ಉಪಾಧೀಕ್ಷಕರಾದ ಕೆ.ಎಮ್‌. ಸತೀಶ್‌ ಅವರ ಮಾರ್ಗದರ್ಶನದಲ್ಲಿ ರೌಡಿ ನಿಗ್ರಹ ದಳ ಬೀದರ್‌ ನಗರ ತಂಡದ ಅಧಿಕಾರಿ ಗಾಂಧಿಗಂಜ್‌ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಹನುಮರೆಡ್ಡೆಪ್ಪಾ ಮತ್ತು ಸಿಬ್ಬಂದಿ ನವೀನ್‌, ಅನೀಲ್‌, ಇರ್ಫಾನ್‌, ಗಂಗಾಧರ, ಪ್ರವೀಣ, ದೀಪಕ, ಕಿರಣ ಅವರನ್ನೊಳಗೊಂಡ ತಂಡವು ಪ್ರಕರಣ ಬೇಧಿಸಿ ಆರೋಪಿಯ ವಶದಿಂದ ಎರಡು ಪ್ರಕರಣಗಳಲ್ಲಿ ಸುಲಿಗೆ ಮಾಡಿದ ಎರಡು ಮೊಬೈಲ್‌ಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಂದು ದ್ವಿಚಕ್ರ ವಾಹನ ಹೀಗೆ ಒಟ್ಟು 1.50 ಲಕ್ಷದ ಮುದ್ದೆ ಜಪ್ತಿ ಮಾಡಿ ಪ್ರಕರಣ ಪತ್ತೆ ಹಚ್ಚಿರುದ್ದಾರೆ.

20ರ ಯುವಕನಿಗೆ 35ರ ಆಂಟಿ ಜೊತೆ ಲವ್, ಒಂದು ಫೋಟೋಗೆ ಖೇಲ್ ಖತಂ!

ಒಟ್ಟು 02 ಸುಲಿಗೆ ಪ್ರಕರಣಗಳು ಬೇಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಪೊಲೀಸ್‌ ಅಧೀಕ್ಷಕ ಚನ್ನಬಸವಣ್ಣ ಹರ್ಷವಕ್ತಪಡಿಸಿ, ಬಹುಮಾನ ವಿತರಣೆ ಮಾಡಿದ್ದಾರೆ.

Latest Videos
Follow Us:
Download App:
  • android
  • ios