ಕಲಬುರಗಿ, (ನ,13): ಕಳೆದ ಮೂರು ದಿನಗಳ ಹಿಂದೆ ಕಲಬುರಗಿ ನಗರದ ಎಂ,ಬಿ, ನಗರದ ಮನೆಯೊಂದರಲ್ಲಿ ಐಪಿಎಲ್‌ ಬೆಟ್ಟಿಂಗ್ ದಂಧ ನಡೆಸುತ್ತಿದ್ದ ಇಬ್ಬರನ್ನು ಸೊಲ್ಲಾಪುರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಕಲಬುರಗಿ ಶಾಸಕ ಬಸವರಾಜ ಮತ್ತಿಮೂಡ ಅವರ ಪತ್ನಿಗೆ ಸೇರಿರುವ ಕಾರನ್ನ ವಶಕ್ಕೆ ಪಡೆಯಲಾಗಿದೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಪುತ್ರನ ಕಾರು ಅಪಘಾತ...!

ಬೆಟ್ಟಿಂಗ್ ದಂಧೆ ಪ್ರಕರಣದಲ್ಲಿ ಬಂಧಿತರಾಗುರಯವ ಅತುಲ್ ಸಿರಶೆಟ್ಟಿ, ಪ್ರದೀಪ್ ಮಲ್ಲಯ್ಯ ಎನ್ನುವರಿಂದ ಸುಮಾರ್ 38 ಲಕ್ಷ ರೂ. ನಗದು ಹಣ, 4 ಲ್ಯಾಪ್‌ಟಾಪ್, ಟಿವಿ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಸ್ಕೂಟರ್ ಹಾಗೂ ಒಂದು ಕಾರನ್ನು ಜಪ್ತಿ ಮಾಡಿದ್ದಾರೆ. 

ಆದ್ರೆ, ಜಪ್ತಿ ಮಾಡಿರುವ ಕಾರು ಶಾಸಕ  ಬಸವರಾಜ ಮತ್ತಿಮೂಡ ಪತ್ನಿ ಜಯಶ್ರೀ ಹೆಸರಿನಲ್ಲಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ,

ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವುದು ಶಂಕೆ ವ್ಯಕ್ತವಾಗಿದ್ದು, ಸೊಲ್ಲಾಪುರ ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.