ದಾವಣಗೆರೆ, (ನ.10): ಮಾಜಿ ಸಿಎಂ, ಹಾಲಿ ಸಚಿವ ಜಗದೀಶ್ ಶೆಟ್ಟರ್ ಪುತ್ರ ಸಂಚರಿಸುತ್ತಿದ್ದ ಕಾರು ಅಪಘಾತವಾಗಿದೆ. ಇಂದು (ಮಂಗಳವಾರ) ದಾವಣಗೆರೆ ನಗರದ ಹಳೇ ಕುಂದುವಾಡ ಬಳಿಯ NH4 ನಲ್ಲಿ  ಘಟನೆ ನಡೆದಿದೆ.

ಪ್ರಶಾಂತ್ ಶೆಟ್ಟರ್, ಪತ್ನಿ ಅಂಚಲ್‌ ಗೆ ಸಣ್ಣಪುಟ್ಟ ಗಾಯಗಲಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.  ಡಿವೈಡರ್ ಬಳಿ KA 05 AR 6577 ನಂಬರಿನ ಲಾರಿ ಹಾಗೂ ಪ್ರಶಾಂತ್ ಶೆಟ್ಟರ್ ಇದ್ದ KA03 NE 8 ನಂಬರಿನ ರೇಂಜ್  ರೋವರ್ ಕಾರು ನಡುವೆ ಅಪಗಾತ ಸಂಭವಿಸಿದೆ.

ಡ್ರಗ್ಸ್‌ ಮಾಫಿಯಾ: ಕರ್ನಾಟಕದ ಮಾಜಿ ಸಚಿವರ ಪುತ್ರ ಅರೆಸ್ಟ್

ಘಟನೆಯಲ್ಲಿ ಪ್ರಶಾಂತ್ ಶೆಟ್ಟರ್ ಪುತ್ರ ಹಾಗೂ ಪತ್ನಿ (ಜಗದೀಶ್ ಶೆಟ್ಟರ್ ಸೊಸೆ) ಸೇರಿದಂತೆ ಮೂವರಿಗೆ ಸಣ್ಣಪುಟ್ಟ ಗಾಯಗಲಾಗಿದ್ದು, ಇವರನ್ನ  ಹೈಟೆಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ದಾವಣಗೆರೆಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದಾಗ ಈ ಅಪಘಾತ ಆಗಿದೆ.  ಸ್ಥಳಕ್ಕೆ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಪಿಎಸ್ ಐ ಕಿರಣ್ ಕುಮಾರ್ ಭೇಟಿ, ಪರಿಶೀಲ‌ನೆ ನಡೆಸಿದರು.

ಇನ್ನು ಈ ಸ್ಥಳದಲ್ಲಿ ಪದೇ ಪದೇ ಅಪಘಾತ ನಡೆದರು ಕ್ರಮ ವಹಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಸರ್ವಿಸ್ ರಸ್ತೆ ನಿರ್ಮಾಣ ಮಾಡುವಂತೆ ಸ್ಥಳಿಯರ ಪಟ್ಟು ಹಿಡಿದರು.

ಅರೆ ಬರೆ ರಸ್ತೆ ನಿರ್ಮಾಣ ಮಾಡಿ ಕಾಮಗಾರಿ ನಿಲ್ಲಿಸಲಾಗಿದೆ. ಈ ಹಿನ್ನಲೆಯಲ್ಲಿಯೇ ಸರಣಿ ಅಪಘಾತಗಳು ನಡೆಯುತ್ತಿವೆ. ಈ ಕೂಡಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿದರು.