ಗಿರಿನಗರದಲ್ಲಿ ಬಚ್ಚಿಟ್ಟಿದ್ದ ₹50 ಲಕ್ಷ ಮೌಲ್ಯದ 95 ಕೆ.ಜಿ. ಗಾಂಜಾ ಜಪ್ತಿ !

ಮಹಾರಾಷ್ಟ್ರದಿಂದ ಬೆಂಗಳೂರಿಗೆ ಅಕ್ರಮವಾಗಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ನಾಲ್ವರು ಡ್ರಗ್‌್ಸ ಪೆಡ್ಲರ್‌ಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Police seized illegal marijuana hidden in Girinagar bengaluru crime rav

ಬೆಂಗಳೂರು (ಜೂ.30) ಮಹಾರಾಷ್ಟ್ರದಿಂದ ಬೆಂಗಳೂರಿಗೆ ಅಕ್ರಮವಾಗಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ನಾಲ್ವರು ಡ್ರಗ್‌್ಸ ಪೆಡ್ಲರ್‌ಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ ಮೂಲದ ಆಕಾಶ್‌, ಅಮೂಲ್‌, ಸಾಧಿಕ್‌ ಮತ್ತು ರಾಹುಲ್‌ ಬಂಧಿತರು. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ .50 ಲಕ್ಷ ಮೌಲ್ಯದ 95 ಕೆ.ಜಿ. 400 ಗ್ರಾಂ ತೂಕದ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಂಜಾ ಗುಂಗಿನಲ್ಲಿ ಸ್ನೇಹಿತರು ಪತ್ನಿಯ ಸೆರಗು ಎಳೆದ್ರೂ ಗಂಡ ಸೈಲೆಂಟ್‌, ಪ್ರೀತಿಸಿ ಮದುವೆಯಾಗಿದ್ದಕ್ಕೆ ಬಾಳು ನರಕ!

ಇತ್ತೀಚೆಗೆ ಎನ್‌ಡಿಪಿಎಸ್‌ ಪ್ರಕರಣ(NDPS Case)ದಲ್ಲಿ ಬಂಧಿಸಿದ್ದ ಆರೋಪಿಯ ವಿಚಾರಣೆ ವೇಳೆ ಮಹಾರಾಷ್ಟ್ರದಿಂದ ಬೆಂಗಳೂರಿಗೆ ಅಕ್ರಮವಾಗಿ ಗಾಂಜಾ ಪೂರೈಕೆಯಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು. ಈ ಮಾಹಿತಿ ಆಧರಿಸಿ ಪೊಲೀಸರ ವಿಶೇಷ ತಂಡ ಮಹಾರಾಷ್ಟ್ರಕ್ಕೆ ತೆರಳಿ ನಾಲ್ವರು ಪೆಡ್ಲರ್‌ಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿಗಳು ಗಿರಿನಗರ ವ್ಯಾಪ್ತಿಯಲ್ಲಿ ಗಾಂಜಾ ಬಚ್ಚಿಟ್ಟಿರುವ ಬಗ್ಗೆ ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಿ ಭಾರೀ ಪ್ರಮಾಣ ಗಾಂಜಾ ಜಪ್ತಿ ಮಾಡಲಾಗಿದೆ.

ಆರೋಪಿಗಳು ಲಗೇಜಿನೊಳಗೆ ಗಾಂಜಾ ಬಚ್ಚಿಟ್ಟು ಬಸ್‌, ರೈಲುಗಳ ಮೂಲಕ ನಗರಕ್ಕೆ ಗಾಂಜಾ ತರುತ್ತಿದ್ದರು. ಬಳಿಕ ಸ್ಥಳೀಯ ಪೆಡ್ಲರ್‌ಗಳ ಮೂಲಕ ಈ ಗಾಂಜಾವನ್ನು ಮಾರಾಟ ಮಾಡಿಸಿ ಅಕ್ರಮವಾಗಿ ಹಣ ಗಳಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಗಿರಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೈಟೆಕ್ ತಂತ್ರಜ್ಞಾನ ಬಳಸಿ ಮನೆಯಲ್ಲಿಯೇ ಗಾಂಜಾ ಕೃಷಿ: ಮೆಡಿಕಲ್ ಸ್ಟೂಡೆಂಟ್ಸ್ ಅರೆಸ್ಟ್!

Latest Videos
Follow Us:
Download App:
  • android
  • ios