Asianet Suvarna News Asianet Suvarna News

Mysuru Road Accident: ಅಪಘಾತದಲ್ಲಿ ಬಲಿಯಾದವರ ಸಾಮೂಹಿಕ ಅಂತ್ಯ ಸಂಸ್ಕಾರ, ಇವರನ್ನ ಬಿಟ್ಟು ನಾ ಹ್ಯಾಂಗ ಬದುಕಲಿ

ಮೈಸೂರಿನ ಟಿ ನರಸೀಪುರದಲ್ಲಿ ಮೃತಪಟ್ಟ 9 ಮಂದಿಯ ಅಂತ್ಯಸಂಸ್ಕಾರವನ್ನು ಸಾಮೂಹಿಕವಾಗಿ ನೆರವೇರಿಸಲಾಗಿದೆ. 4 ಆ್ಯಂಬುಲೆನ್ಸ್ ಗಳಲ್ಲಿ ಮೃತ ದೇಹ ಗ್ರಾಮಕ್ಕೆ ತರುತ್ತಿದ್ದಂತೆಯೇ ಆಕ್ರಂದನ ಮುಗಿಲು ಮುಟ್ಟಿತ್ತು.

Mysuru Road Accident victims Mass cremation in Ballari kannada news  gow
Author
First Published May 30, 2023, 6:53 PM IST

ಬಳ್ಳಾರಿ (ಮೇ.30):  ಮೈಸೂರಿನ ಟಿ ನರಸೀಪುರದಲ್ಲಿ ಮೃತಪಟ್ಟ 9 ಮಂದಿಯ ಅಂತ್ಯಸಂಸ್ಕಾರವನ್ನು ಸಾಮೂಹಿಕವಾಗಿ ನೆರವೇರಿಸಲಾಗಿದೆ. 4 ಅಂಬುಲೈನ್ಸ್ ಗಳಲ್ಲಿ ಮೃತ ದೇಹ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಕುಟುಂಬಸ್ಥರ ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮನೆ ಮುಂದೆ ಪೂಜಾ ಕಾರ್ಯ ನಡೆಸಿ ವೀರಶೈವ ರುದ್ರಭೂಮಿ ಯಲ್ಲಿ ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿಸಲಾಯ್ತು. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಒಂದೇ ಸ್ಥಳದಲ್ಲಿ ಸಾಲಾಗಿ 9 ಶವಗಳ ಅಂತ್ಯಸಂಸ್ಕಾರ ನೆರವೇರಿಸಲಾಯ್ತು.

ಅಂದುಕೊಂಡಂತೆ ಆಗಿದ್ದರೆ ಮೈಸೂರು, ಚಾಮರಾಜನಗರ ಸೇರಿದಂತೆ ಚಾಮುಂಡೇಶ್ವರಿ ದರ್ಶನ ಮುಗಿಸಿಕೊಂಡು ಇವರೆಲ್ಲ ಇಂದು ಮನೆ ಸೇರಬೇಕಿತ್ತು. ಆದ್ರೆ ವಿಧಿಯ ಆಟವೇ ಬೇರೆಯಾಗಿತ್ತು. ಮೂರು ದಿನಗಳ ಹಿಂದೆ ನಗುನಗುತ್ತಾ ಪ್ರವಾಸಕ್ಕೆ ತೆರಳಿದವರು. ಶವವಾಗಿ ಮನೆ ಸೇರಿದ್ದಾರೆ.  ಅಕ್ಕ ಪಕ್ಕದಲ್ಲೆ ವಾಸವಾಗಿದ್ದ ಅವರೆಲ್ಲಾ ಇದೀಗ ಅಂತಿಮ ಯಾತ್ರೆಯಲ್ಲೂ ಅಕ್ಕಪಕ್ಕದಲ್ಲೆ ಮಣ್ಣಾಗಿದ್ದಾರೆ. ಮೇ.29ರಂದು ಮೈಸೂರಿನ ಅಪಘಾತದಲ್ಲಿ ಮೃತಪಟ್ಟ ಸಂಗನಕಲ್ಲು ಗ್ರಾಮಸ್ಥರ ಅಂತ್ಯಕ್ರಿಯೆ ವೇಳೆ ಈಡೀ ಊರಿಗೆ ಊರೇ ಕಣ್ಣೀರಾಗಿತ್ತು.

ವಿಧಿಯಾಟಕ್ಕೆ  ಹಿಡಿಶಾಪ ಹಾಕಿದ ಗ್ರಾಮಸ್ಥರು: 
ಇದೊಂದು ಕರಳು ಹಿಂಡುವ ದೃಶ್ಯ. ಅಕ್ಕಪಕ್ಕದ ಸಮಾಧಿಯಲ್ಲಿ ಮಣ್ಣಾಗುತ್ತಿರುವ ಇವರೆಲ್ಲರೂ ಅಕ್ಕಪಕ್ಕದ ಮನೆಯಲ್ಲೆ ವಾಸವಾಗಿದ್ದರು. ಬಳ್ಳಾರಿಯ ಸಂಗನಕಲ್ಲು ಗ್ರಾಮದಲ್ಲಿ ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದ ಒಂದೇ ಕುಟುಂಬದ ಸಂಬಂಧಿಕರು ಒಟ್ಟಾಗೇ ಮೈಸೂರಿಗೆ ತೆರಳಿದ್ದರು. ಆದ್ರೆ, ಮರಳಿ ಬಳ್ಳಾರಿಗೆ ಬರುವ ವೇಳೆ ಮೇ.29 ಮೈಸೂರಿನ ಟಿ. ನರಸೀಪುರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇವರೆಲ್ಲಾ ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೋವಾ ಕಾರು-ಖಾಸಗಿ ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ಬಳ್ಳಾರಿಯ ಸಂಗನಕಲ್ಲು ಗ್ರಾಮದ  9 ಜನ ಸಂಬಂಧಿಕರ ಸಾಮೂಹಿಕ ಅಂತ್ಯಸಂಸ್ಕಾರ   ಮಾಡಲಾಯಿತು.

Mysuru Road Accident victims Mass cremation in Ballari kannada news  gow

ಮುಗಿಲು ಮುಟ್ಟಿದ ಆಕ್ರಂದನ: 
ಅಪಘಾತದಲ್ಲಿ ಮೃತಪಟ್ಟವರ ಮೃತ ದೇಹಗಳನ್ನು ಗ್ರಾಮಕ್ಕೆ ನಾಲ್ಕು ಆ್ಯಂಬುಲೆನ್ಸ್ ಮೂಲಕ ತರುತ್ತಿದ್ದಂತೆ ಗ್ರಾಮಸ್ಥರೆಲ್ಲ ಕಣ್ಣಿರಿಟ್ಟ ದೃಶ್ಯ ಮನಕಲಕುವಂತಿತ್ತು. ಅಪಘಾತದಲ್ಲಿ ಎಲ್ಲರ ಮುಖ ದೇಹಗಳೆಲ್ಲಾ ಗುರುತು ಸಿಗದಂತೆ ನುಜ್ಜುಗುಜ್ಜಾದ ಪರಿಣಾಮ ಕೊನೆಯಲ್ಲಿ ಮುಖವನ್ನು ಸಹ ನೋಡಲಾಗಲಿಲ್ಲವೆಂದು ಗ್ರಾಮಸ್ಥರು ಮತ್ತು ಕುಟುಂಬಸ್ಥರು ವಿಧಿಗೆ ಹಿಡಿಶಾಪ ಹಾಕುತ್ತಲೇ ಅಂತಿಮ ದರ್ಶನ ಪಡೆದರು. ಮಾಜಿ ಸಚಿವ ಬಿ ಶ್ರೀರಾಮುಲು, ಮಾಜಿ ಸಂಸದೆ ಜೆ ಶಾಂತಾ, ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಸೇರಿದಂತೆ ಹಲವು ಮುಖಂಡರು ಸ್ಥಳದಲ್ಲೆ ಮುಕ್ಕಾ ಹೂಡಿ ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡಿದರು. ಮೃತರೆಲ್ಲಾ ಕಡುಬಡವರಾಗಿದ್ದು. ಮೃತಕುಟುಂಬಗಳಿಗೆ  ರಾಜ್ಯ ಸರ್ಕಾರ  ಇನ್ನಷ್ಟು ಹೆಚ್ಚಿನ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಮಾಜಿ ಸಚಿವ ಶ್ರೀರಾಮುಲು ಮನವಿ ಮಾಡಿದ್ದಾರೆ.

ಖಾಸಗಿ ಬಸ್ ಮತ್ತು ಇನೋವಾ ಕಾರು ನಡುವೆ ಸಂಭವವಿಸಿದ ಅಪಘಾತದಲ್ಲಿ ಬಳ್ಳಾರಿಯ (Ballari) ಸಂಗನಕಲ್ಲು (sanganakallu ) ಗ್ರಾಮದ  ಒಂದೇ ಕುಟುಂಬದ ನಾಲ್ವರು, ಮತ್ತೊಂದು ಕುಟುಂಬದ ಮೂವರು, ಇನ್ನೊಂದು ಕುಟುಂಬದ ಇಬ್ಬರು ಸೇರಿದಂತೆ 10 ಮಂದಿ ಮೃತಪಟ್ಟಿದ್ದರು. ಓರ್ವ ಕಾರು ಚಾಲಕ ಆದಿತ್ಯ (26)  ಉಳಿದಂತೆ  ರೊಟ್ಟಿ ತಯಾರಿಸಿ ಜೀವನ ನಿರ್ವಹಣೆ ಮಾಡುತ್ತಿದ್ದ ಮಂಜುನಾಥ್‌ (35) ಪತ್ನಿ ಪೂರ್ಣಿಮಾ (30) ಪುತ್ರ ಕಾರ್ತೀಕ್‌ (9) ಹಾಗೂ ಮತ್ತೊಬ್ಬ ಪುತ್ರ ಪವನವಕುಮಾರ್‌ (8) ಘಟನೆಯಲ್ಲಿ ಸಾವಿಗೀಡಾಗಿದ್ದರೆ, ಚಕ್ಕುಲಿ, ಸಿಹಿತಿಂಡಿಗಳನ್ನು ತಯಾರಿಸಿ ಜೀವನ ನಡೆಸುತ್ತಿದ್ದ ಗಾಯತ್ರಿ(38) ಹಾಗೂ ಶ್ರಾವ್ಯ(5) ಮೃತಪಟ್ಟಿದ್ದಾರೆ. ಗಾಯತ್ರಿ ಪತಿ ಜನಾರ್ದನ ಹಾಗೂ ಪುತ್ರ ಪುನೀತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮ ಒನ್‌ ಕೇಂದ್ರ ಹಾಗೂ ಕಿರಾಣಿ ಅಂಗಡಿ ನಡೆಸುತ್ತಿದ್ದ ವಿಜಯನಗರ ಜಿಲ್ಲೆಯ ಹಗರಿ ಗಜಾಪುರ ಗ್ರಾಮದವರಾದ ಕೊಟ್ರೇಶ್‌ (45), ಪತ್ನಿ ಸುಜಾತಾ (40) ಹಾಗೂ ಪುತ್ರ ಸಂದೀಪ್‌ (23) ಈ ಮೂವರು ಮೃತಪಟ್ಟಿದ್ದಾರೆ.

ಗಾಯಾಳುಗಳ ಮಾಹಿತಿ
1. ಶಶಿಕುಮಾರ್ (ಗಂಭೀರ ಗಾಯ)
2. ಜನಾರ್ಧನ್ (40)
3. ಪುನೀತ್ (5)

ಕುಟುಂಬ ಸದಸ್ಯರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿತ್ತು. ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಮಂಜುನಾಥ ಕುಟುಂಬದ ಬಹುತೇಕರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಮಂಜುನಾಥ ಕುಟುಂಬದ ಏಳು ಜನ ಸದಸ್ಯರಲ್ಲಿ ನಾಲ್ವರು ಸಾವಿಗೀಡಾಗಿದ್ದು ಮಂಜುನಾಥ ಸಹೋದರ ಸುರೇಶ್‌, ತಾಯಿ ಲಕ್ಷ್ಮಮ್ಮ ಹಾಗೂ ತಂದೆ ನಾಗರಾಜ್‌ ಮಾತ್ರ ಉಳಿದಿದ್ದಾರೆ.

ಕೊಟ್ರೇಶ್‌ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ. ಮೊಮ್ಮಕ್ಕಳನ್ನು ನೆನೆದು ರೋಧಿಸುತ್ತಿದ್ದ ಅಜ್ಜಿ ಲಕ್ಷ್ಮಮ್ಮ ‘ನಾಳೆಯೇ ಬರುತ್ತೇವೆ ಎಂದು ಹೇಳಿದ್ದರು. ಮೊಮ್ಮಕ್ಕಳು ನಿತ್ಯವೂ ನನ್‌ ಜತೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಮಕ್ಕಳು, ಮೊಮ್ಮಕ್ಕಳನ್ನು ಬಿಟ್ಟು ನಾ ಹ್ಯಾಂಗ ಇರಲಿ’ ಎಂದು ಗೋಳಿಡುತ್ತಿರುವ ದೃಶ್ಯ ಮನ ಕಲಕುವಂತಿತ್ತು. ಮೃತ ಮಂಜುನಾಥ್‌ ಅವರ ಸಹೋದರ ಸುರೇಶ್‌ ಘಟನೆಯಿಂದ ತೀವ್ರ ಆಘಾತಕ್ಕೀಡಾಗಿದ್ದರು. ಅಣ್ಣ, ಅತ್ತಿಗೆ, ಅಣ್ಣನ ಮಕ್ಕಳನ್ನು ನೆನೆದು ರೋಧಿಸುತ್ತಿದ್ದ ಸುರೇಶ್‌, ‘ಅಣ್ಣನ ಮಕ್ಕಳನ್ನು ಬಿಟ್ಟು ನಾ ಹ್ಯಾಂಗ ಬದುಕಲಿ’ ಎಂದು ಅಳಲುತ್ತಿರುವ ದೃಶ್ಯ ಮನ ಕಲಕುತ್ತಿತ್ತು.

Mysuru Road Accident: ಟಿ.ನರಸೀಪುರದಲ್ಲಿ ಭೀಕರ ರಸ್ತೆ ಅಪಘಾತ, ಬಳ್ಳಾರಿಯ 10 ಮಂ

ಹಗರಿ ಗಜಾಪುರ ಮೂಲದ ಕೊಟ್ರೇಶ್‌ ಇಡೀ ಕುಟುಂಬವೇ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಬಡತನ ಹಿನ್ನೆಲೆಯ ಈ ಕುಟುಂಬ ಜೀವನ ನಿರ್ವಹಣೆಗೆಂದು ಸಂಗನಕಲ್ಲು ಗ್ರಾಮದಲ್ಲಿ ಬಂದು ನೆಲೆಸಿತ್ತು. ಇವರ ಸಂಬಂಧಿಕರು ಹಗರಿ ಗಜಾಪುರ ಹಾಗೂ ಹಡಗಲಿಯಲ್ಲಿ ಇರುವುದರಿಂದ ಇವರ ಮನೆಯ ಮುಂದೆ ಕುಟುಂಬ ಸದಸ್ಯರು ಯಾರೂ ಇರಲಿಲ್ಲ. ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಮನೆಯ ಮುಂದೆ ಜಮಾಯಿಸಿದ್ದರು.

ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ, ತಲೆಯ ಮೇಲೆ ಟಿಪ್ಪರ್ ಹರಿದು 15 ವರ್ಷದ ವಿದ್ಯಾರ್ಥಿನಿ

ಖುಷಿಯಿಂದ ಹೋದವರು ಶವವಾಗಿ ಬಂದ್ರು
ಅಪಘಾತದಲ್ಲಿ ಮೃತಪಟ್ಟ 10 ಜನರ ಫೈಕಿ 9 ಜನರು ಬಳ್ಳಾರಿಯ ಸಂಗನಕಲ್ಲು ಗ್ರಾಮಸ್ಥರಾಗಿದ್ದು, ಅಪಘಾತದಲ್ಲಿ ಇದೇ ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದಿದ್ರೆ ಎಲ್ಲರೂ ಇಂದು ಮರಳಿ ಊರಿಗೆ ಬರಬೇಕಾಗಿತ್ತು ಆದರೆ ಈಗ ಮರಳಿ ಬಾರದ ಲೋಕಕ್ಕೆ ತೆರಳಿದ್ದು ಮಾತ್ರ ನಿಜಕ್ಕೂ ದುರಂತವಾಗಿದೆ.

Follow Us:
Download App:
  • android
  • ios