Asianet Suvarna News Asianet Suvarna News

ಶಿವಮೊಗ್ಗ:  ಅಕ್ರಮ ಪಟಾಕಿ ಅಂಗಡಿ ಮೇಲೆ ಪೊಲೀಸರು ದಾಳಿ

ಜನವಸತಿ ಪ್ರದೇಶದಲ್ಲಿ ಅಕ್ರಮವಾಗಿ ಪಟಾಕಿ ಮಾರುತಿದ್ದ ಅಂಗಡಿಗಳ ಮೇಲೆ ಶಿವಮೊಗ್ಗ ನಗರದ ಗಾಂಧಿ ಬಜಾರ್ ಪೊಲೀಸರು ದಾಳಿ ನಡೆಸಿದ್ದಾರೆ. ಶಿವಮೊಗ್ಗ ತಹಶಿಲ್ದಾರ್ ನಾಗರಾಜ್ ನೇತೃತ್ವದಲ್ಲಿ ದೊಡ್ಡಪೇಟೆ ಪೊಲೀಸರು ನಡೆಸಿರುವ ದಾಳಿ.

Police raid on illegal fireworks shop at shivamogga rav
Author
First Published Nov 13, 2023, 10:20 AM IST

ಶಿವಮೊಗ್ಗ (ನ.13): ಜನವಸತಿ ಪ್ರದೇಶದಲ್ಲಿ ಅಕ್ರಮವಾಗಿ ಪಟಾಕಿ ಮಾರುತಿದ್ದ ಅಂಗಡಿಗಳ ಮೇಲೆ ಶಿವಮೊಗ್ಗ ನಗರದ ಗಾಂಧಿ ಬಜಾರ್ ಪೊಲೀಸರು ದಾಳಿ ನಡೆಸಿದ್ದಾರೆ.

ಶಿವಮೊಗ್ಗ ತಹಶಿಲ್ದಾರ್ ನಾಗರಾಜ್ ನೇತೃತ್ವದಲ್ಲಿ ದೊಡ್ಡಪೇಟೆ ಪೊಲೀಸರು ನಡೆಸಿರುವ ದಾಳಿ. ಗಾಂಧಿ ಬಜಾರ್ ನಲ್ಲಿ ರಮೇಶ್ ಎನ್ನುವವರು ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ವೇಳೆ ನಡೆದಿರುವ ದಾಳಿ. ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಪಟಾಕಿ ವಶಕ್ಕೆ ಪಡೆದಿರುವ ಪೊಲೀಸರು. ಮುಂಚಿತವಾಗಿಯೇ ಯಾವುದೇ ಅಹಿತಕರ ಘಟನೆಗಳು ತಡೆಯಲು ಜಿಲ್ಲಾಡಳಿತ  ಫ್ರೀಡಂ ಪಾರ್ಕ್ ನಲ್ಲಿ ಪಟಾಕಿ ಮಾರಾಟ ಮಾಡಲು ಅವಕಾಶ ಕಲ್ಪಿಸಿತ್ತು. ಜಿಲ್ಲಾಡಳಿತದ ಆದೇಶವಿದ್ದರು ಜನ‌ ನಿಬಿಡ ಪ್ರದೇಶದಲ್ಲಿ ಅಕ್ರಮ ಪಟಾಕಿ ಮಾರಾಟ ಮಾಡುತ್ತಿದ್ದ ರಮೇಶ್. ಈ ಬಗ್ಗೆ ಎಂಬ ದೂರು ಬಂದ ಹಿನ್ನೆಲೆ ದಾಳಿ ನಡೆಸಿದ ಪೊಲೀಸರು.

ಈ ಮೊದಲು ಹಸಿರು ಪಟಾಕಿಗಳನ್ನ ಮಾರಾಟ ಮಾಡುವ ಉದ್ದೇಶದಿಙದ ದಾಳಿ ನಡೆಸಿದ್ದ ಪೊಲೀಸರು ಬಳಿಕ ನಿನ್ನೆ ಅಕ್ರಮ ಪಟಾಕಿ ಮಾರಾಟ ಮಳಿಗೆ ಮೇಲೆ ದಾಳಿ ಮಾಡಿದ್ದಾರೆ.

ದೀಪಾವಳಿ ಹಬ್ಬ: ನಿನ್ನೆ ಒಂದೇ ದಿನ 26 ಕ್ಕೂ ಹೆಚ್ಚು ಪಟಾಕಿ ಸಿಡಿತ ಪ್ರಕರಣಗಳು ದಾಖಲು!

ಟಾಕಿ ಖರೀದಿ ಜೋರು:

ದೀಪಾವಳಿಯ ಹಬ್ಬದಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಮಾರುಕಟ್ಟೆ ಸೇರಿದಂತೆ ವಿವಿಧ ಅಂಗಡಿ ಮುಂಗಟ್ಟುಗಳಲ್ಲಿ ಜನಸ್ತೋಮವೇ ಕಂಡುಬಂತು. ಬೆಳಕಿನ ಹಬ್ಬ ದೀಪಾವಳಿಗೆ ಜಿಲ್ಲೆಯ ಎಲ್ಲೆಡೆ ಮನೆಯ ಮುಂಭಾಗದಲ್ಲಿ ಕಟ್ಟಲಾಗುವ ಆಕಾಶಬುಟ್ಟಿ, ಪ್ಲಾಸ್ಟಿಕ್‌ ಮಾವಿನ ತೋರಣ ಮತ್ತು ಹಣತೆ ಮತ್ತಿತರ ವಸ್ತುಗಳ ಖರೀದಿಗೆ ಗೃಹಿಣಿಯರು ಆಸಕ್ತಿ ತೋರಿದ್ದರು.

ಈಗಾಗಲೇ ಮಾರುಕಟ್ಟೆಯಲ್ಲಿ ಆಕಾಶ ಬುಟ್ಟಿಗಳು ಝಗಮಗಿಸುತ್ತಿವೆ. ರಂಗುರಂಗಿನ ಆಕಾಶಬುಟ್ಟಿ ಗಾತ್ರಕ್ಕೆ ಅನುಗುಣವಾಗಿ ಆಕಾಶ ಬುಟ್ಟಿಗಳು ಮಾರಾಟಕ್ಕಿವೆ. ₹100 ರಿಂದ ₹2000 ವರೆಗೆ ಮಾರಾಟವಾಗುತ್ತಿವೆ. ನಕ್ಷತ್ರ ಮಾದರಿ, ಕಂದಿಲು ಆಕಾರದ ಆಕಾಶ ಬುಟ್ಟಿಗಳು, ಕೋಮಲ್‌ ಡಿಸೈನ್‌, ಗುಲಾಬ್‌ ರಂಗೀಲಾ, ಚಂದ್ರನ ಆಕಾರದ ಆಕಾಶ ಬುಟ್ಟಿ ಖರೀದಿದಾರರನ್ನು ಆಕರ್ಷಿಸುತ್ತಿವೆ. ಇವುಗಳನ್ನು ದೆಹಲಿ, ಮುಂಬಯಿ ಮತ್ತು ಕೋಲ್ಕತ್ತಾ, ಮಹಾರಾಷ್ಟ್ರ ಪ್ರದೇಶಗಳಿಂದ ಈ ಆಕಾಶ ಬುಟ್ಟಿಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ದೀಪಾವಳಿಗೆ 24x7 ಕಣ್ಣಿನ ಚಿಕಿತ್ಸೆ, ಸಹಾಯವಾಣಿ ಆರಂಭಿಸಿದ ಮಿಂಟೋ ಆಸ್ಪತ್ರೆ: ಈಗ್ಲೇ ನೋಟ್‌ ಮಾಡ್ಕೊಳಿ!

ಫ್ಯಾನ್ಸಿ ಸ್ಟೋರ್‌ಗಳು ರಶ್‌:

ನಗರದ ಗಾಂಧಿ ಬಜಾರ್‌ ಸೇರಿದಂತೆ ವಿವಿಧ ಮಾರುಕಟ್ಟೆಯಲ್ಲಿನ ಬಟ್ಟೆ ಮತ್ತು ಫ್ಯಾನ್ಸಿ ಸ್ಟೋರ್‌ಗಳು ಫುಲ್‌ ರಶ್‌ ಆಗಿದ್ದವು. ತಮ್ಮ ಕುಟುಂಬಗಳಿಗೆ ಬಟ್ಟೆ ಸೇರಿ ಇತರ ವಸ್ತುಗಳನ್ನು ಸಾರ್ವಜನಿಕರು ಖರೀದಿಸಿದರು. ಅಷ್ಟೇ ಅಲ್ಲದೇ, ಕಿರಾಣಿ ಅಂಗಡಿಗಳಲ್ಲಿ ಪೂಜಾ ಸಾಮಗ್ರಿ ಮಾರಾಟ ಜೋರಾಗಿತ್ತು.

Follow Us:
Download App:
  • android
  • ios