ಬೆಂಗಳೂರು(ಫೆ.04): ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್‌ ಸಂಬಂಧಿ ಸಿದ್ಧಾರ್ಥ್‌ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ಸಂಬಂಧ ಮೃತನ ಮಲತಾಯಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬುಧವಾರ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಹತ್ಯೆಗೆ ಭೂ ವಿವಾದ ಶಂಕೆ ಬಲವಾದ ಹಿನ್ನೆಲೆಯಲ್ಲಿ ಮಲತಾಯಿ ಮೇಲೆ ಅನುಮಾನ ಮೂಡಿದೆ. ಹೀಗಾಗಿ ಆಕೆಯನ್ನು ವಶಕ್ಕೆ ಪಡೆದು ಪೊಲೀಸರು ಪ್ರಶ್ನಿಸಿದ್ದಾರೆ. ಆಂಧ್ರಪ್ರದೇಶದ ತಿರುಪತಿಯ ವಿನೋದ್‌ ಹಾಗೂ ಶ್ಯಾಂಸುಂದರ್‌ ಅವರಿಗೆ ಸುಪಾರಿ ನೀಡಿ ಸಿದ್ಧಾರ್ಥ್‌ರನ್ನು ಹತ್ಯೆ ಮಾಡಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮಾಜಿ ಸಿಎಂ ಧರ್ಮಸಿಂಗ್‌ ಸಂಬಂಧಿ ಕೊಲೆ ಕೇಸಿನ ಆರೋಪಿ ಆತ್ಮಹತ್ಯೆ: ಮತ್ತಷ್ಟು ನಿಗೂಢ..!

ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಹೆಚ್ಚುವರಿ ಪೊಲೀಸ್‌ ಆಯುಕ್ತ (ಪೂರ್ವ) ಎಸ್‌.ಮುರುಗನ್‌, ಸಿದ್ಧಾರ್ಥ್‌ ಕೊಲೆ ಪ್ರಕರಣದ ಬಗ್ಗೆ ಕೆಲವರ ವಿಚಾರಣೆ ನಡೆದಿದೆ. ಶೀಘ್ರವೇ ಕೃತ್ಯಕ್ಕೆ ಕಾರಣ ಗೊತ್ತಾಗಲಿದೆ. ಓರ್ವ ಆರೋಪಿ ಬಂಧನವಾಗಿದೆ ಎಂದು ತಿಳಿಸಿದ್ದಾರೆ.