*  ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶರಣಪ್ಪ*  ಬಂಧನ ವೇಳೆ ಪೊಲೀಸರ ಮೇಲೆ ಹಲ್ಲೆ*  ಗುಂಡಿಕ್ಕಿ ಆರೋಪಿ ಬಂಧನ 

ಬೆಂಗಳೂರು(ಏ.14): ಕೊಲೆ(Murder) ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ರೌಡಿ ಶೀಟರ್‌ನೊಬ್ಬನ(Rowdysheeter) ಕಾಲಿಗೆ ಗುಂಡು ಹಾರಿಸಿ ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಗಶೆಟ್ಟಿಹಳ್ಳಿ ನಿವಾಸಿ ಶರಣಪ್ಪ(22) ಗುಂಡೇಟು ತಿಂದ ರೌಡಿಶೀಟರ್‌. ಏ.9ರಂದು ಸಂಜೆ 5 ಗಂಟೆ ಸುಮಾರಿಗೆ ನಾಗಶೆಟ್ಟಿಹಳ್ಳಿಯ ಮಂಜುನಾಥ ಲೇಔಟ್‌ನ ಭಜನಾ ಮಂದಿರದ ಎದುರು ನಡೆದು ಹೋಗುತ್ತಿದ್ದ ವೇಣುಗೋಪಾಲ್‌ ಎಂಬುವವರ ಮೇಲೆ ಆರೋಪಿ ಶರಣಪ್ಪ ಹಾಗೂ ಆತನ ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆಗೈದು ಪುಂಡಾಟ ನಡೆಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿಯ ಬಂಧನಕ್ಕೆ(Arrest) ಬಲೆ ಬೀಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮರ್ಯಾದಾ ಹತ್ಯೆ, ಪ್ರೇಮಿ ಮನೆ ತಲುಪಿದ ವಿದ್ಯಾರ್ಥಿನಿಯ ಕೊಂದ ತಂದೆ-ಮಗ!

ಆರೋಪಿ ಶರಣಪ್ಪ ಬುಧವಾರ ಬೆಳಗ್ಗೆ ಭೂಪಸಂದ್ರ ಬಳಿ ಇರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಂಜಯನಗರ ಠಾಣೆ ಇನ್ಸ್‌ಪೆಕ್ಟರ್‌ ಬಾಲರಾಜ್‌ ನೇತೃತ್ವದಲ್ಲಿ ಪೊಲೀಸರು(Police) ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಹಿಡಿಯಲು ಕಾನ್ಸ್‌ಟೇಬಲ್‌ ಮಲ್ಲಪ್ಪ ಕದ್ಲಿ ಮುಂದಾಗಿದ್ದಾರೆ. ಆಗ ಆರೋಪಿ ಏಕಾಏಕಿ ಮಲ್ಲಪ್ಪ ಅವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ(Assault) ಮಾಡಿದ್ದಾನೆ. ಈ ವೇಳೆ ಶರಣಾಗುವಂತೆ ಸೂಚನೆ ನೀಡಿದರೂ ಆರೋಪಿಯು(Accused) ಪೊಲೀಸರ ಮೇಲೆ ಎರಗಿ ಬಂದಿದ್ದಾನೆ.

ಈ ವೇಳೆ ಇನ್ಸ್‌ಪೆಕ್ಟರ್‌ ಬಾಲರಾಜ್‌ ಅವರು ಆತ್ಮರಕ್ಷಣೆಗಾಗಿ ಆತನ ಮೇಲೆ ಗುಂಡು ಹಾರಿಸಿದ್ದಾರೆ. ಬಲಗಾಲಿಗೆ ಗುಂಡು ತಗುಲಿ ಗಾಯಗೊಂಡು ಕುಸಿದು ಬಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಕಾನ್ಸ್‌ಟೇಬಲ್‌ ಮಲ್ಲಪ್ಪ ಕದ್ಲಿ ಅವರನ್ನೂ ಚಿಕಿತ್ಸೆಗೆ ದಾಖಲಿಸಲಾಗಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Chikkaballapur: ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿ ಲವರ್​ ಜತೆ ನಿರ್ಜನ ಪ್ರದೇಶಕ್ಕೆ ತೆರಳಿದ ಹುಡುಗಿಗೆ ಕಾದಿತ್ತು ಶಾಕ್..​!

11 ಪ್ರಕರಣ ದಾಖಲು

ಆರೋಪಿ ವಿರುದ್ಧ ಸಂಜಯನಗರ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಒಂದು ಕೊಲೆ, ನಾಲ್ಕು ಕೊಲೆ ಯತ್ನ ಪ್ರಕರಣ ಸೇರಿದಂತೆ ಒಟ್ಟು 11 ಅಪರಾಧ(Criminal) ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಸಂಜಯನಗರ ಠಾಣೆಯಲ್ಲಿ ರೌಡಿಶೀಟರ್‌ ಪಟ್ಟಿ ತೆರೆಯಲಾಗಿತ್ತು. ಈ ಹಿಂದೆ ಕೆಲ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಬಂದ ಬಳಿಕವೂ ದುಷ್ಕೃತ್ಯಗಳಲ್ಲಿ ತೊಡಗಿದ್ದ. ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.