ಊಟ ಸೇರ್ತಿಲ್ಲ‌ ಅಂತಾ ದರ್ಶನ್‌ ನಿನ್ನೆ ಮಧ್ಯಾಹ್ನ ಜ್ಯೂಸ್ ಕುಡಿದು ಚಾಕಲೇಟ್ ತಿಂದಿದ್ದರಂತೆ. ಸಂಜೆ ಕೂಡ ಊಟ ಬೇಡ ಅಂತ ಮಜ್ಜಿಗೆ ಕುಡಿದು ದರ್ಶನ್ ಮಲಗಿದ್ದಾರೆ. ಇನ್ನು ಅರೆಸ್ಟ್ ಆದಾಗಿನಿಂದ ದರ್ಶನ್ ಬಹಳ ಟೆನ್ಷನ್‌ನಲ್ಲಿದ್ದಾರೆ. ಟೆನ್ಷನ್‌ನಲ್ಲಿ ಪೊಲೀಸ್ರ ಬಳಿ ಸಿಗರೇಟ್‌ಗೆ ಮಾತ್ರ ಬೇಡಿಕೆ ಇಟ್ಟಿದ್ದಾರೆ.  

ಬೆಂಗಳೂರು(ಜೂ.12): ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ಸಿಗರೇಟ್ ಬೇಡಿಕೆಗೆ ಪೊಲೀಸರು ಕ್ಯಾರೆ ಎಂದಿಲ್ಲ. ಹೌದು, ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿ ದರ್ಶನ್ ಸಿಗರೇಟ್ ಕೇಳಿದ್ದಾರೆ. ಸಿಗರೇಟ್ ನೀಡಲು ಸಾಧ್ಯವಿಲ್ಲ ಅಂತ ದರ್ಶನ್ ಬೇಡಿಕೆಯನ್ನ ಪೊಲೀಸರು ನಿರಾಕರಿಸಿದ್ದಾರೆ.

ಇನ್ನು ದರ್ಶನ್ ನಿನ್ನೆ(ಮಂಗಳವಾರ)ಯಿಂದ ಜ್ಯೂಸ್ ಮತ್ತು ಮಜ್ಜಿಗೆಯನ್ನ ಮಾತ್ರ ಕುಡಿದಿದ್ದಾರೆ. ಪೊಲೀಸ್ ಠಾಣೆಯಲ್ಲಿ ನಿನ್ನೆ ಮಧ್ಯಾಹ್ನದಿಂದ ಊಟ ಮಾಡಿಲ್ಲ, ದರ್ಶನ್ ನಿನ್ನೆ ಬೆಳಿಗ್ಗೆ ಇಡ್ಲಿ ತಿಂದಿದ್ದರಂತೆ. 

ಮರ್ಮಾಂಗದ ಫೋಟೋ ಕಳುಹಿಸಿದ್ದ ರೇಣುಕಾಸ್ವಾಮಿ: ದರ್ಶನ್‌ ಸಿಟ್ಟಿಗೇಳಲು ಇದೇ ಕಾರಣವಂತೆ!

ಊಟ ಸೇರ್ತಿಲ್ಲ‌ ಅಂತಾ ನಿನ್ನೆ ಮಧ್ಯಾಹ್ನ ಜ್ಯೂಸ್ ಕುಡಿದು ಚಾಕಲೇಟ್ ತಿಂದಿದ್ದರಂತೆ. ಸಂಜೆ ಕೂಡ ಊಟ ಬೇಡ ಅಂತ ಮಜ್ಜಿಗೆ ಕುಡಿದು ದರ್ಶನ್ ಮಲಗಿದ್ದಾರೆ. ಇನ್ನು ಅರೆಸ್ಟ್ ಆದಾಗಿನಿಂದ ದರ್ಶನ್ ಬಹಳ ಟೆನ್ಷನ್‌ನಲ್ಲಿದ್ದಾರೆ. ಟೆನ್ಷನ್‌ನಲ್ಲಿ ಪೊಲೀಸ್ರ ಬಳಿ ಸಿಗರೇಟ್‌ಗೆ ಮಾತ್ರ ಬೇಡಿಕೆ ಇಟ್ಟಿದ್ದಾರೆ. ಸ್ಟೇಷನ್‌ ನಲ್ಲಿ ಇದಕ್ಕೆಲ್ಲ ಅವಕಾಶ ಇಲ್ಲ ಅಂತ ಪೊಲೀಸ್ರು ಖಡಕ್ ಆಗೆ ದರ್ಶನ್‌ಗೆ ಎಚ್ಚರಿಕೆ ನೀಡಿದ್ದಾರೆ.