ಕಾಳುಮೆಣಸಿಗೆ ಫುಲ್ ಡಿಮ್ಯಾಂಡ್ , ಕಳ್ಳರ ಕಾಟ ವಿಪರೀತ!
* ಕಾಳುಮೆಣಸಿಗೆ ಹೆಚ್ಚಿದ ಬೇಡಿಕೆ,:ಬೆಳೆಗಾರರಿಗೆ ಎದುರಾಯ್ತು ಕಳ್ಳರ ಕಾಟ
* ಮಲೆನಾಡಿನಲ್ಲಿ ಹೆಚ್ಚಾಗುತ್ತಿದೆ ಕಾಳು ಮೆಣಸು ಕಳ್ಳತನದ ಪ್ರಕರಣಗಳು
* ಮಲೆನಾಡಿನಲ್ಲಿ ಮೆಣಸಿ ಚೀಲದೊಂದಿಗೆ ಕಳ್ಳರು ಎಸ್ಕೇಪ್
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು, (ಏ.14) : ಮಲೆನಾಡಿನಾದ್ಯಂತ ಎರಡನೇ ಪ್ರಮುಖ ಬೆಳೆಯಾಗುವ ಕಾಳುಮೆಣಸಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಂಡುಬಂದಿದೆ. ಕಳೆದ ಬಾರಿ ಕೆಜಿಯೊಂದಕ್ಕೆ 250ರಿಂದ 300ರೂ.ಗಳಿಗೆ ಮಾರಾಟವಾಗುತ್ತಿದ್ದ, ಕಾಳುಮೆಣಸು ಈ ಬಾರಿ 450 ರಿಂದ 550ರೂ. ಗಳಿಗೆ ಬಿಕರಿಯಾಗುತ್ತಿದೆ. ಇದು ಕಳೆದ ಕೆಲವು ವರ್ಷಗಳಿಂದ ನಾನಾ ಸಮಸ್ಯೆಗಳಿಂದ ಬೇಸತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಕಾಳುಮೆಣಸು ಬೆಳೆಗಾರರಲ್ಲಿ ಹರ್ಷ ತಂದಿದೆ.ಅದ್ರೆ ಬೆಲೆ ಹೆಚ್ಚಾಗಿರುವ ಪರಿಣಾಮ ಮಲೆನಾಡಿನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಲು ಆರಂಭಿಸಿದ್ದಾರೆ. ಮಲೆನಾಡಿನಲ್ಲಿ ಮೆಣಸಿ ಚೀಲದೊಂದಿಗೆ ಕಳ್ಳರು ಎಸ್ಕೇಪ್ ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ.
ಬೆಳೆಗಾರರಿಗೆ ಎದುರಾಯ್ತು ಕಳ್ಳರ ಕಾಟ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಾಫಿಯನ್ನು ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತಿದ್ದು, ಕಾಳುಮೆಣಸು ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಸಾಮಾನ್ಯವಾಗಿ ಕಾಫಿತೋಟದ ನಡುವಿನಲ್ಲಿ ಬೆಳೆಯಲಾಗುವ ಈ ಕಾಳು ಮೆಣಸು ಕಡಿಮೆ ಶ್ರಮದಲ್ಲಿ ಹೆಚ್ಚು ಆದಾಯಗಳಿಸಬಹುದಾಗಿದೆ. ಆದರೆ ಈ ಬೆಳೆ ಮಾತ್ರ ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯ ಬೆಳೆಗಾರರಿಗೆ ಲಾಭವನ್ನು ತಂದಿರಲಿಲ್ಲ. ಇದೀಗ ಏಕಾಏಕಿಯಾಗಿ ಹೆಚ್ಚಿನ ಬೆಲೆಗೆ ಕಾಳು ಮೆಣಸು ಮಾರಾಟವಾಗುತ್ತಿರುವುದು ಮಾರಾಟಗಾರರಲ್ಲಿ ಸಂತಸಮೂಡಿಸಿದೆ. ಕಾಳುಮೆಣಸು ಇದೀಗ ಏಕಾಏಕಿಯಾಗಿ 500ರಿಂದ 550 ರೂ. ಗಳಿಗೆ ಮಾರಾಟವಾಗುತ್ತಿದೆ.ಇದು ಬೆಳೆಗಾರರಲ್ಲಿ ಸಂತಸದ ಜೊತೆಗೆ ಆತಂಕವೂ ಎದುರಾಗಿದೆ. ಏಕೆಂದ್ರೆ ಕಾಳು ಮೆಣಸಿಗೆ ಕಳ್ಳೆರ ಕಾಟ ಜಾಸ್ತಿ ಆಗಿದೆ. ಕಾಳುಮೆಣಸಿಗೆ ಹೆಚ್ಚಿದ ಬೇಡಿಕೆ ಹಿನ್ನಲೆಯಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು ಮೆಣಸಿ ಚೀಲದೊಂದಿಗೆ ಕಳ್ಳರು ಎಸ್ಕೇಪ್ ಆಗುತ್ತಿದ್ದಾರೆ. ಅದರಲ್ಲೂ ಮೂಡಿಗೆರೆ, ಬಾಳೆಹೊನ್ನೂರು, ಜಯಪುರ, ಕೊಪ್ಪ ಭಾಗಳಲ್ಲಿ ಮೆಣಸಿನ ಮೂಟೆಗಳನ್ನೇ ಕಳ್ಳರು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದಾರೆ. ಮನೆ ಸೇರಿದಂತೆ ಕಣದಲ್ಲಿ ಇರುವ ಮೆಣಸಿನ ಮೂಟೆಗಳನ್ನು ಕಳ್ಳತನವಾಗಿರುವ ಬಗ್ಗೆ ಮಾಲೀಕರು ಪೋಲಿಸ್ ಠಾಣೆಗೆ ದೂರು ನೀಡುತ್ತಿದ್ದಾರೆ.
ಕಟ್ಟಿದ ಮೂಗು, ಮೊಡವೆಗೂ ಮದ್ದು ಕಾಳು ಮೆಣಸು
ನಾಲ್ವರ ಬಂಧನ
ಜಿಲ್ಲೆಯ ಮೂಡಿಗೆರೆ ಸಮೀಪವಿರುವ ಹಾಂದಿಯ ಬಾಳೆಹಳ್ಳಿ ಭಾಗೀರಥಿ ಎಸ್ಟೇಟ್‌ನಲ್ಲಿ ಕಟಾವು ಮಾಡಿ ಕಣದಲ್ಲಿ ಒಣಗಲು ಹರಡಿದ್ದ ಕಾಳುಮೆಣಸು ಸೋಮವಾರ ಕಳ್ಳತನವಾಗಿತ್ತು.ಈ ಸಂಬಂಧ ಎಸ್ಟೇಟ್ ಮಾಲೀಕ ಗಣೇಶ್ ಅಲಿಯಾಸ್ ರತನ್ ಅಲ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರನ್ವಯ ಕಾರ್ಯಚಾರಣೆಗೆ ಇಳಿದು ಪೊಲೀಸ್ರು ತನಿಖಾ ತಂಡವೊಂದು ರಚನೆ ಮಾಡಿತ್ತು. ಆ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಮೆಣಸು ಕಳ್ಳತನ ಮಾಡಿದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಹೊಸಪೇಟೆ ಗ್ರಾಮದ ನಿಜಲಿಂಗಪ್ಪ ಅಲಿಯಾಸ್ ತಮ್ಮಣ್ಣಿ ವೆಂಕಟೇಶ್, ಸುನಿಲ್, ಅಭಿ ಬಂಧಿತರಾಗಿದ್ದಾರೆ. ಬಂಧಿತ ಆರೋಪಿಗಳಿಂದ 1.50 ಲಕ್ಷ ಮೌಲ್ಯದ 2.38 ಕ್ವಿಂಟಲ್ ಮೆಣಸನ್ನು ವಶಪಡಿಸಿಕೊಳ್ಳಲಾಗಿದೆ.ಬಂಧಿರನ್ನುನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಈ ಕಾರ್ಯಾಚರಣೆಯು ಆಲ್ದೂರು ವಿಭಾಗ ಇನ್‌ಸ್ಪೆಕ್ಟರ್ ಸತ್ಯನಾರಯಣ್ ಮಾರ್ಗದರ್ಶನಲ್ಲಿಪಿಎಸ್ ಐ ಶಿವರುದ್ರಮ್ಮ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಾರೆ ಮಲೆನಾಡಿನಲ್ಲಿ ಕಾಫಿ, ಮೆಣಸು ಕಳ್ಳತನದಲ್ಲಿ ಪ್ರಕರಣಗಳು ಜಾಸ್ತಿ ಆಗುತ್ತಿದೆ.ಮಾರುಕಟ್ಟೆಯಲ್ಲಿ ಅಧಿಕ ಧಾರಣೆ ಬಂದಿರುವುದು ಇದೀಗ ಕಳ್ಳತನ ಹಾದಿಯನ್ನು ಕೆಲವರು ಹಿಡಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಇನ್ನಷ್ಟು ಕಾರ್ಯಪ್ರವೃತ್ತರಾಗಿರುವ ಅವಶ್ಯಕತೆ ಇದೆ.