ಕೋಳಿ ಎಂದು ಹೊಟೇಲ್‌ಗಳಿಗೆ ಪಾರಿವಾಳಗಳ ಮಾಂಸ ಪೂರೈಕೆ
ಮುಂಬೈನ ವ್ಯಕ್ತಿಯೊಬ್ಬ ಪರಿವಾಳಗಳನ್ನು ಕೊಂದು ಮಾಂಸ ಮಾಡಿ ಕೋಳಿ ಮಾಂಸ ಎಂದು ಹೇಳಿ ಮಹಾನಗರಿಯ ರೆಸ್ಟೋರೆಂಟ್‌ಗಳಿಗೆ ಮಾರಾಟ ಮಾಡಿದ ವಿಚಿತ್ರ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿ ಅಭಿಷೇಕ್ ಸಾವಂತ್ ಸೇರಿದಂತೆ 8 ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮುಂಬೈ: ಕೋಳಿ ಎಂದು ಮುಂಬೈನ ಪ್ರಮುಖ ಹೊಟೇಲ್‌ಗಳಿಗೆ ಪಾರಿವಾಳಗಳ ಮಾಂಸ ಮಾರಾಟ ಮಾಡುತ್ತಿದ್ದ 8 ಜನರನ್ನು ಪೊಲೀಸರನ್ನು ಬಂಧಿಸಿದ್ದಾರೆ. ಮುಂಬೈನ ವ್ಯಕ್ತಿಯೊಬ್ಬ ಪರಿವಾಳಗಳನ್ನು ಕೊಂದು ಮಾಂಸ ಮಾಡಿ ಕೋಳಿ ಮಾಂಸ ಎಂದು ಹೇಳಿ ಮಹಾನಗರಿಯ ರೆಸ್ಟೋರೆಂಟ್‌ಗಳಿಗೆ ಮಾರಾಟ ಮಾಡಿದ ವಿಚಿತ್ರ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿ ಅಭಿಷೇಕ್ ಸಾವಂತ್ ಸೇರಿದಂತೆ 8 ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಟುಂಗಾ ಪೂರ್ವದ (Matunga East) ಕಿಂಗ್ಸ್ ಸರ್ಕಲ್‌ನಲ್ಲಿರುವ (King's Circle ನರೋತಮ್ ನಿವಾಸ್ ಸಹಕಾರಿ ಹೌಸಿಂಗ್ ಸೊಸೈಟಿಯ ಹೌಸಿಂಗ್ ಕಮಿಟಿಯ (Narotam Nivas cooperative housing society) ಏಳು ಸದಸ್ಯರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಂಬೈ ಪೊಲೀಸರಿಗೆ (Mumbai police) ಬಂದ ದೂರಿನ ಪ್ರಕಾರ, ಆರೋಪಿ ಅಭಿಷೇಕ್ ಸಾವಂತ್ (Abhishek Sawant) ಈ ವರ್ಷದ ಮಾರ್ಚ್‌ನಲ್ಲಿ ಅಪಾರ್ಟ್‌ಮೆಂಟ್‌ನ ಟೆರೇಸ್‌ನಲ್ಲಿ ಪಂಜರಗಳನ್ನು ಮಾಡಿ ಪಾರಿವಾಳಗಳನ್ನು ಸಾಕಲು ಆರಂಭಿಸಿದ್ದರು. ನಂತರ ಆ ಪಕ್ಷಿಗಳು ಬೆಳೆದಾಗ ಅವುಗಳನ್ನು ಕೊಂದು ಹೌಸಿಂಗ್ ಸೊಸೈಟಿಯ (housing society) ಸ್ವಲ್ಪ ಕೆಳಗಿರುವ ಹೋಟೆಲ್ ಮತ್ತು ಬಿಯರ್ ಪಾರ್ಲರ್‌ಗೆ (beer parlour) ಕೋಳಿ ಮಾಂಸ ಎಂದು ಮಾರಾಟ ಮಾಡಿದ್ದರು ಎಂದು ತಿಳಿದು ಬಂದಿದೆ.
ಶ್ರೀರಾಮುಲು ಕಾರ್ಯಕ್ರಮದಲ್ಲಿ ನೂಕುನುಗ್ಗಲು: ನೆಲಕ್ಕೆ ಬಿದ್ದ ಮಾಂಸದ ತುಂಡಿಗಾಗಿ ಮುಗಿಬಿದ್ದ ಜನ..!
ಆದರೆ ಈ ಬಗ್ಗೆ ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ 71 ವರ್ಷದ ನಿವೃತ್ತ ಸೇನಾಧಿಕಾರಿ (retired army man) ಹರೇಶ್ ಗಗ್ಲಾನಿ (Harish Gaglani) ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 428 ಹಾಗೂ 447ರ ಅಡಿ ಪ್ರಾಣಿಗಳನ್ನು ಕೊಲ್ಲುವುದು, ಅಂಗವೈಕಲ್ಯಗೊಳಿಸುವುದು ಮುಂತಾದ ಕಿಡಿಗೇಡಿತನ ತೋರಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಆದರೆ ಘಟನೆಗೆ ಸಂಬಂಧಿಸಿದಂತೆ ಯಾರನ್ನು ಕೂಡ ಬಂಧಿಸಲಾಗಿಲ್ಲ. ಹಾಗೆಯೇ ಈ ಎಂಟು ಆರೋಪಿಗಳ ಪೈಕಿ ಓರ್ವ ರಾಜಕಾರಣಿಯ ಪುತ್ರನೂ ಸೇರಿದ್ದಾನೆ ಎಂದು ತಿಳಿದು ಬಂದಿದೆ.
ಚಿಕನ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟಾನ? ಹಾಗಿದ್ರೆ ಮಾರ್ಕೆಟ್‌ನಿಂದ ಖರೀದಿಸುವಾಗ ಈ ವಿಚಾರ ಗಮನಿಸಿ
ಆದರೆ ಹೌಸಿಂಗ್ ಸೊಸೈಟಿಯ ಸದಸ್ಯರು ನಿವೃತ್ತ ಸೇನಾಧಿಕಾರಿ ಹರೀಶ್ ಗಗ್ಲಾನಿ ಅವರ ಆರೋಪಗಳನ್ನು ನಿರಾಕರಿಸಿದ್ದಾರೆ. ನಿವೃತ್ತ ಸೇನಾಧಿಕಾರಿ ಅವರು ಹಲವು ದಿನಗಳಿಂದ ಇಂತಹ ಆಧಾರರಹಿತವಾದ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಇದುವರೆಗೆ ಅವರು 34 ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ ಏನೂ ಆಗಿಲ್ಲ. ತನಿಖೆ ನಡೆದು ಸತ್ಯ ಹೊರಬರಲಿ ಎಂದು ಹೌಸಿಂಗ್ ಸೊಸೈಟಿಯ ಸದಸ್ಯರೊಬ್ಬರು ಹೇಳಿದ್ದಾರೆ. ಅಲ್ಲದೇ ಹೊಟೇಲ್ ಮಾಲೀಕರು ಕೂಡ ಈ ಆರೋಪವನ್ನು ನಿರಾಕರಿಸಿದ್ದಾರೆ. ಆದರೆ, ಪಾರಿವಾಳದ ಪಂಜರದ ದೃಶ್ಯಗಳನ್ನು ಪೊಲೀಸರಿಗೆ ಸಲ್ಲಿಸಿರುವುದಾಗಿ ಗಗ್ಲಾನಿ ಹೇಳಿಕೊಂಡಿದ್ದಾರೆ.