ಬೆಂಗಳೂರು (ಮೇ 12) ಕೊರೋನಾ ಸಂಕಷ್ಟದ ಸಮಯದಲ್ಲಿ  ಹಳೆಯ ವಿಡಿಯೋ  ಒಂದಕ್ಕೆ ಅಶ್ಲೀಲ ಶಬ್ದಗಳನ್ನು ಬಳಸಿ ಧ್ವನಿ ನೀಡಿದ್ದ ಕಾಂಗ್ರೆಸ್ ನಾಯಕಿಯ ಬಂಧನವಾಗಿದೆ. ಕರ್ನಾಟಕ ಪೊಲೀಸರಿಗೆ ಛೀಮಾರಿ ಹಾಕುವ ರೀತಿ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದ ಕಾಂಗ್ರೆಸ್ ನಾಯಕಿ ಪದ್ಮಾ ಹರೀಶ್ ರನ್ನು ಅರೆಸ್ಟ್ ಮಾಡಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

ದಕ್ಷಿಣ ವಿಭಾದ ಸೈಬರ್ ಪೊಲೀಸರು ಪದ್ಮಾ ಹರೀಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ವೃದ್ಧ ವ್ಯಕ್ತಿಯೊಬ್ಬರಿಗೆ ನಾಲ್ವರು ಪೊಲೀಸರು ಬೀದಿಯಲ್ಲಿ ಲಾಠಿಯಿಂದ ಥಳಿಸುವ ವಿಡಿಯೋ ಹಿಂದೆ ವೈರಲ್ ಆಗಿತ್ತು. 2020 ಏಪ್ರಿಲ್‌ನಲ್ಲಿ ಲಾಕ್ ಡೌನ್ ಸಮಯದ ಮುಂಬೈ ವಿಡಿಯೋವನ್ನು ಬೆಂಗಳೂರಿನದ್ದು ಎಂದು ಬಿಂಬಿಸಿ ಕೈ ನಾಯಕಿ ಪೊಲೀಸರನ್ನು ನಿಂದಿಸಿದ್ದರು.

ಪ್ರತಿಭಟನೆಗೆ ಇಳಿದ ಕಾಂಗ್ರೆಸ್, ಗಾಂಧಿ ಪ್ರತಿಮೆ ಬಳಿ ಧರಣಿ

ಈ ಬಗ್ಗೆ ಟ್ವೀಟ್ ಮಾಡಿ ಅಸಲಿತನವನ್ನು ಮುಂದೆ ಇಟ್ಟಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸುಳ್ಳು ಸುದ್ದಿ ಹಬ್ಬಿಸುವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಲಿದ್ದೇವೆ ಎಂದಿದ್ದರು.

ಲಾಕ್ ಡೌನ್ ಸಂದರ್ಭ ನಿಯಮ ಮುರಿದ ಜನರ ಮೇಲೆ ಪೊಲೀಸರು ಅಲ್ಲಿಲ್ಲಿ ಲಘುವಾಗಿ ಲಾಠಿ ಬೀಸಿದ್ದು ಇದೆ. ಆದರೆ ಈ ವಿಡಿಯೋದಲ್ಲಿ ಇರುವ ರೀತಿ ಹೀನಾಯವಾಗಿ ನಡೆದುಕೊಂಡಿಲ್ಲ. ಪೊಲೀಸರ ಅವಹೇಳನ ಮಾಡಿದ ಕೈನಾಯಕಿ ಈಗ ವಿಚಾರಣೆ ಎದುರಿಸಲೇಬೇಕಾಗಿದೆ.