Asianet Suvarna News Asianet Suvarna News

ಪೊಲೀಸರಿಂದಲೇ ಆರೋಪಿ ಕಿಡ್ನಾಪ್: ಲಕ್ಷ ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿ ತಗಲಾಕಿಕೊಂಡ ಪೊಲೀಸರು!

ಪೊಲೀಸರೇ ಆರೋಪಿಯನ್ನು ಅಪಹರಿಸಿ ಆತನಿಂದಲೇ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಸಿನಿಮೀಯ ಪ್ರಕರಣವೊಂದು ನಗರದಲ್ಲಿ ಬೆಳಕಿಗೆ ಬಂದಿದೆ.

Police Asked Bribe For Releaseing Accused Complaint against PSI and others At Bengaluru gvd
Author
First Published Mar 23, 2023, 7:02 AM IST

ಬೆಂಗಳೂರು (ಮಾ.23): ಪೊಲೀಸರೇ ಆರೋಪಿಯನ್ನು ಅಪಹರಿಸಿ ಆತನಿಂದಲೇ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಸಿನಿಮೀಯ ಪ್ರಕರಣವೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ಹೌದು! ಆರೋಪಿಯನ್ನೇ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟು ಇದೀಗ ಪೊಲೀಸರು ತಗಲಾಕಿಕೊಂಡಿದ್ದಾರೆ. ಪ್ರಕರಣ ಬೇದಿಸುವವರೆಗೂ ಬಾಗಲೂರು ಪೊಲೀಸರಿಗೆ, ಆರೋಪಿಗಳೇ ಪೊಲೀಸರೆಂದು ಗೊತ್ತಿರಲಿಲ್ಲ. ಕಳೆದ ಶನಿವಾರ ಹುಲಿ ಉಗುರು, ಚರ್ಮವನ್ನ ಮಾರಾಟ ಮಾಡುತ್ತಿದ್ದವನನ್ನ ಪೊಲೀಸರು ಕರೆದೊಯ್ದಿದ್ದು, ನಂತರ ಆತನ ಕಡೆಯವರಿಗೆ ಕರೆ ಮಾಡಿ 40 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. 

ಹೀಗಾಗಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಕಡೆಯವರಿಂದ ಕಿಡ್ನಾಪ್ ಪ್ರಕರಣ ದಾಖಲು ಮಾಡಿದ್ದು, ಅನಂತರ ಕಿಡ್ನಾಪ್ ಮಾಡಿದವರಿಗಾಗಿ ಬಾಗಲೂರು ಪೊಲೀಸರು ಹುಡುಕಾಡಿದ್ದರು. ಇನ್ನು ಕಿಡ್ನಾಪ್ ಮಾಡಿದ್ದವರು ಮಾರತಹಳ್ಳಿ ಠಾಣೆ ಪಿಎಸ್‌ಐ ರಂಗೇಶ್ ಮತ್ತು ಹೆಡ್ ಕಾನ್ಸ್ಟೇಬಲ್ ಹರೀಶ್. ಇವರು ಪ್ರಕರಣ ಸಂಬಂಧ ಆರೋಪಿಯನ್ನ ಕರೆದೊಯ್ದಿದ್ದು, ಆರೋಪಿ ತಲೆಗೆ ಗನ್ ಇಟ್ಟು ಹಣ ಕೊಡುವಂತೆ ಅವರ ಕಡೆಯವರಿಗೆ ರಂಗೇಶ್ ಕರೆ ಮಾಡಿಸಿದ್ದರು. 

ನನ್ನನ್ನು ಎಷ್ಟು ಸಾವಿರ ಅಂತರದಲ್ಲಿ ಗೆಲ್ಲಿಸಬೇಕೆಂದು ಜನರು ತೀರ್ಮಾನ ಮಾಡ್ತಾರೆ: ಶಾಸಕ ಪ್ರೀತಂಗೌಡ

ಸದ್ಯ ಕಿಡ್ನಾಪ್ ಮಾಡಿದವರು ಪೊಲೀಸ್ ಎಂದು ಕಮೀಷನರ್ ಪ್ರತಾಪ್ ರೆಡ್ಡಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಆರೋಪಿಗಳನ್ನ ಬಂಧಿಸುವಂತೆ ಕಮಿಷನರ್ ಪ್ರತಾಪ್ ರೆಡ್ಡಿ  ಸೂಚನೆ ಕೊಟ್ಟಿದ್ದರು. ನಿನ್ನೆ (ಬುಧವಾರ) ಹೆಡ್ ಕಾನ್ಸ್ಟೇಬಲ್ ಹರೀಶ್‌ನನ್ನ ಬಾಗಲೂರು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಪಿಎಸ್‌ಐ ರಂಗೇಶ್‌ಗಾಗಿ ತೀವ್ರ ಶೋಧ ನಡೆಸಲಾಗಿದೆ. ಪಿಎಸ್ಐ ರಂಗೇಶ್ ತಲೆಮರೆಸಿಕೊಳ್ಳಲು ಓರ್ವ ಎಸಿಪಿ ನೇರವಾಗಿದ್ದಾರಾ ಎಂಬ ಅನುಮಾನ ಮೂಡಿದ್ದು, ಬಾಗಲೂರು ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. 

ಕಾಮಗಾರಿ ಯಾವುದು ಮುಗಿದಿದೆ ಅದರ ಉದ್ಘಾಟನೆ ಮಾಡಿದ್ದೇವೆ: ರೇವಣ್ಣಗೆ ತಿರುಗೇಟು ನೀಡಿದ ಶಾಸಕ ಪ್ರೀತಂಗೌಡ

ಎಂ ಶಿವರಾಮಯ್ಯ ದೂರಿನ ಆಧಾರದ ಮೇಲೆ ಬಾಗಲೂರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ರಾಮಾಂಜನಿಯನ್ನು ಅಪಹರಿಸಿಕೊಂಡು ಹೋಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಶಬ್ಬೀರ್, ಜಾಕೀರ್, ಪೊಲೀಸರಾದ ರಂಗೇಶ್ ಪಿಎಸ್ಐ, ಹರೀಶ್ ಕೆ.ಎಲ್, ಮಹದೇವ ನಾಯಕ್, ಮಹೇಶ್‌ರವರ ಮೇಲೆ ದೂರು ದಾಖಲಾಗಿದ್ದು, ಎ-2 ಆರೋಪಿ ಹರೀಶ್, ಎ-3 ಆರೋಪಿ ಶಬ್ಬೀರ್ ಹಾಗೂ ಎ-4 ಆರೋಪಿ ಜಾಕೀರ್ ಬಂಧನವಾಗಿದ್ದು, ಉಳಿದ ಆರೋಪಿಗಳಿಗಾಗಿ ಬಾಗಲೂರು ಪೊಲೀಸರಿಂದ ಶೋಧ ಮುಂದುವರೆದಿದೆ.

Follow Us:
Download App:
  • android
  • ios