Asianet Suvarna News Asianet Suvarna News

ಬಸನಗೌಡ ಪಾಟೀಲ್ ಯತ್ನಾಳ್‌ ಕೊಠಡಿಗೆ ಅವಹೇಳನಕಾರಿ ಪೋಸ್ಟರ್ ಅಂಟಿಸಿದವ ಸಿಕ್ಕ

*ಬಸನಗೌಡ ಪಾಟೀಲ್ ಯತ್ನಾಳ್‌ ಕೊಠಡಿಗೆ ಅವಹೇಳನ ಪೋಸ್ಟರ್ ಅಂಟಿಸಿದವ ಅರೆಸ್ಟ್
* ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ರು
* ಬೆಂಗಳೂರಿನ ಶಾಸಕರ ಭವನದಲ್ಲಿರುವ ಯತ್ನಾಳ್ ಕೊಠಡಿಗೆ ಅವಹೇನಕಾರಿ ಪೋಸ್ಟರ್ ಅಂಟಿಸಿದ್ದ

Police arrests Congress Worker Who Paste derogatory poster against vijayapura-bjp-mla yatnal rbj
Author
Bengaluru, First Published Aug 25, 2021, 3:29 PM IST
  • Facebook
  • Twitter
  • Whatsapp

ಬೆಂಗಳೂರು,(ಆ.25): ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಅವಹೇಳನಕಾರಿ ಪೋಸ್ಟರ್ ಅಂಟಿಸಿದ್ದವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಹೌದು..ಯತ್ನಾಳ್ ಅವರ ಬೆಂಗಳೂರಿನ ಶಾಸಕರ ಭವನದ ಕೊಠಡಿಯ ಬಾಗಿಲಿಗೆ ಅವಾಚ್ಯವಾಗಿ ನಿಂದಿಸಿದ ಪೋಸ್ಟರ್ ಅಂಟಿಸಿದ್ದ  ಚೆಲುವರಾಜು ಎನ್ನುವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಕಾಂಗ್ರೆಸ್​ ಕಾರ್ಯಕರ್ತ ಎಂದು ತಿಳಿದುಬಂದಿದೆ. 

ಯತ್ನಾಳ್ ವಿರುದ್ದ ಅವಹೇಳನಕಾರಿ ಪೋಸ್ಟ್, ಶಾಸಕರ ಕೊಠಡಿಗೆ ಅಂಟಿಸಿದ ಬಿತ್ತಿಪತ್ರ

ಶಾಸಕ ಯತ್ನಾಳ್, ಗಾಂಧಿ ಕುಟುಂಬದವರ ವಿರುದ್ಧ ಅವಹೇಳನಕಾರಿ ಮಾತನಾಡುತ್ತಿದ್ದಾರೆ ಎಂಬ ಹಿನ್ನಲೆಯಲ್ಲಿ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ಕಾರ್ಯಕರ್ತ ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದರು. 

ನೀನು ಬಿನ್ ಲಾಡೆನ್ ಗೆ ಹುಟ್ಟಿದವ ಗಾ.....ಎಂದು ಶಾಸಕರ ಭವನದಲ್ಲಿರುವ ಯತ್ನಾಳ್ ಕೊಠಡಿ ಬಾಗಿಲಿಗೆ ಹಾಗೂ ಗೋಡೆಗೆ ಭಿತ್ತಿಪತ್ರ ಅಂಟಿಸಿದ್ದ.

ಅಫ್ಘಾನಿಸ್ತಾನ ವಿಚಾರದಲ್ಲಿ ಮೌನ ವಹಿಸಿರುವ ಬುದ್ದಿಜೀವಿಗಳು, ಚಿತ್ರನಟರಾದ ಅಮಿರ್‌ಖಾನ್, ಶಾರುಖಾನ್‌, ಸಲ್ಮಾನಖಾನ್, ರಾಹುಲ್ ಗಾಂಧಿ ಮತ್ತು ಸ್ವಾಮೀಜಿಗಳ ವಿರುದ್ಧ ಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹರಿಹಾಯ್ದಿದ್ದರು. ಈ ಹಿನ್ನೆಲೆಯಲ್ಲಿ ಅವಹೇಳನಕಾರಿ  ಪೋಸ್ಟರ್ ಅಂಟಿಸಿದ್ದಾನೆ.

Follow Us:
Download App:
  • android
  • ios