* ಶಾಸಕ ಯತ್ನಾಳ್ ವಿರುದ್ದ ಅವಹೇಳನಕಾರಿ ಪೋಸ್ಟ್.* ಬಿಲ್ ಲಾಡೆನ್ ಗೆ ಹೋಲಿಸಿ ಪೋಸ್ಟರ್ ಹಾಕಿದ ಕಿಡಿಗೇಡಿಗಳು.* ಶಾಸಕರ ಭವನದ ಯತ್ನಾಳ್ ಕೊಠಡಿ ಗೆ ಭಿತ್ತಿಪತ್ರ ಅಟ್ಟಿಸಿರೋ ಕಿಡಿಗೇಡಿಗಳು.

ಬೆಂಗಳೂರು/ವಿಜಯಪುರ, (ಆ.24): ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಅವಹೇಳನಕಾರಿ ಪೋಸ್ಟರ್ ಲಗತ್ತಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೀನು ಬಿನ್ ಲಾಡೆನ್ ಗೆ ಹುಟ್ಟಿದವ ಗಾ......ಎಂದು ಪೋಸ್ಟ್ ಮಾಡಿದ್ದು, ಅದನ್ನು ಶಾಸಕರ ಭವನದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕೊಠಡಿ ಬಾಗಿಲಿಗೆ ಕಿಡಿಗೇಡಿಗಳು ಬಿತ್ತಿಪತ್ರ ಅಂಟಿಸಿದ್ದಾರೆ.

ಮತ್ತೆ ಗುಡುಗಿದ ಯತ್ನಾಳ್: ಅಫ್ಘಾನಿಸ್ತಾನ ವಿಚಾರದಲ್ಲಿ ಮೌನ ವಹಿಸಿದವರ ವಿರುದ್ಧ ವಾಗ್ದಾಳಿ

ಯಾರು ಇಲ್ಲದ ವೇಳೆ ಶಾಸಕರ ಭವನ 5ನೇ ಬ್ಲ್ಯಾಕ್ ನ ಕೊಠಡಿ 2001 ಕೊಠಡಿ ಬಾಗಿಲು, ಗೋಡೆ ಮೇಲೆ ನೀನು ಬಿನ್ ಲಾಡೆನ್ ಗೆ ಹುಟ್ಟಿದವ ಗಾ.......ಎನ್ನುವ ಭಿತ್ತಿ ಪತ್ರವನ್ನು ಅಂಟಿಸಿದ್ದು, ಶಾಸಕರ ಭವನಕ್ಕೆ ಹೋಗಿ ಈ ಕಿತಾಪತಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಅಫ್ಘಾನಿಸ್ತಾನ ವಿಚಾರದಲ್ಲಿ ಮೌನ ವಹಿಸಿರುವ ಬುದ್ದಿಜೀವಿಗಳು, ಚಿತ್ರನಟರಾದ ಅಮಿರ್‌ಖಾನ್, ಶಾರುಖಾನ್‌, ಸಲ್ಮಾನಖಾನ್, ರಾಹುಲ್ ಗಾಂಧಿ ಮತ್ತು ಸ್ವಾಮೀಜಿಗಳ ವಿರುದ್ಧ ಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹರಿಹಾಯ್ದಿದ್ದರು.

ಅಫ್ಘಾನಿಸ್ತಾನ ವಿಚಾರದಲ್ಲಿ ಮಾತನಾಡದ ಬುದ್ಧಿ ಜೀವಿಗಳು ತಾಲಿಬಾನ್‌ಗೆ ಹುಟ್ಟಿದ್ದಾರೆ. ಬುದ್ಧಿ ಜೀವಿಗಳು ಲದ್ದಿ ತಿಂದಿದ್ದಾರೆ. ಬುದ್ಧಿ ಜೀವಿಗಳು ತಾಲಿಬಾನಿ ಸಂತಾನ ಎಂದು ಯತ್ನಾಳ ತೀವ್ರ ವಾಗ್ದಾಳಿ ನಡೆಸಿದ್ದರು. ಈ ಸಿಟ್ಟಿಗೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.