Asianet Suvarna News Asianet Suvarna News

20 ಬಾರಿ ಚಾಕುವಿನಿಂದ ಇರಿದು ಗೆಳತಿ ಕೊಂದ ಆರೋಪಿ ಸಾಹಿಲ್ ಅರೆಸ್ಟ್, ಭೀಕರ ವಿಡಿಯೋ ವೈರಲ್!

16ರ ಬಾಲಕಿಗೆ 20 ಬಾರಿ ಚಾಕುವಿನಿಂದ ಇರಿದು, ಬಳಿಕ ಕಲ್ಲು ಎತ್ತಿಹಾಕಿ ಕೊಲೆಗೈದ ಆರೋಪಿ, ಗೆಳೆಯ ಸಾಹಿಲ್ ಅರೆಸ್ಟ್ ಆಗಿದ್ದಾನೆ. ದೆಹಲಿಯಿಂದ ಪರಾರಿಯಾದ ಸಾಹಿಲ್‌ನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ. ಆದರೆ ಈತನ ಕೃತ್ಯದ ಭಯಾನಕ ವಿಡಿಯೋ ವೈರಲ್ ಆಗಿದೆ.

Police arrest Accused Sahil who brutally murder 16 year old minor girl in Delhi ckm
Author
First Published May 29, 2023, 4:08 PM IST

ನವದೆಹಲಿ(ಮೇ.29): ಜಗಳವಾಡಿದ ಕಾರಣ 16ರ ಬಾಲಕಿ ಮೇಲೆ 20 ಬಾರಿ ಚಾಕುವಿನಿಂದ ಇರಿದು ಹಾಗೂ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹೈತ್ಯೆಗೈದ ಆರೋಪಿ, ಗೆಳೆಯ ಸಾಹಿಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯ  ಶಹಬಾದ್ ಡೈರಿ ಬಳಿ ನಡೆದ ಭೀಕರ ಹತ್ಯೆ ಬಳಿಕ ಸಾಹಿಲ್ ತಲೆಮರೆಸಿಕೊಂಡಿದ್ದ. ಒಂದೇ ದಿನದಲ್ಲಿ ಪೊಲೀಸರು ಸಾಹಿಲ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೆಹಲಿಯಿಂದ ತಲೆಮರೆಸಿಕೊಂಡ ಸಾಹಿಲ್‌ನನ್ನು ಉತ್ತರ ಪ್ರದೇಶದ ಬುಲಂದ್‌ಶಹರ್ ಬಳಿ ಬಂಧಿಸಲಾಗಿದೆ. 

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಸಾಹಿಲ್ ಹುಡುಕಾಟಕ್ಕೆ ತಂಡ ರಚಿಸಿ ತನಿಖೆ ಆರಂಭಿಸಿದ್ದರು. ಸಿಸಿಟಿವಿ ಸೇರಿದಂತೆ ಎಲ್ಲಾ ಮಾಹಿತಿ ಪರಿಶೀಲನೆ ನಡೆಸಲಾಗಿತ್ತು. ಸಾಹಿಲ್ ಕುಟುಂಬ, ಆತನ ಕೆಲಸ, ಗೆಳೆಯರ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದರು. ಹೀಗಾಗಿ ಪೊಲೀಸರು ಒಂದೇ ದಿನದಲ್ಲಿ ಆರೋಪಿಯನ್ನು ಬಂಧಿಸಿ ದೆಹಲಿಗೆ ಕರೆತಂದಿದ್ದಾರೆ.

ಗೆಳೆಯನಿಂದಲೇ ಹತ್ಯೆಯಾದ 16ರ ಬಾಲಕಿ, 20 ಬಾರಿ ಚಾಕು ಇರಿದು ಕಲ್ಲು ಎತ್ತಿಹಾಕಿ ಭೀಕರ ಕೊಲೆ!

ಬಂಧಿತ ಸಾಹಿಲ್ ಎಸಿ, ರೆಫ್ರಿರೇಜರೇಟರ್ ಮೆಕಾನಿಕ್ ಆಗಿದ್ದು, ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಲು ಇನ್ನಿಲ್ಲದ ಕಸರತ್ತು ಮಾಡಿದ್ದ. ಯುವತಿಯನ್ನು ಪ್ರತಿ ದಿನ ಹಿಂಬಾಲಿಸಿ ನಂಬರ್ ಪಡೆದುಕೊಂಡಿದ್ದ. ಆದರೆ ಸಾಹಿಲ್ ಕಾಟ ವಿಪರೀತವಾಗುತ್ತಿದ್ದಂತೆ ಆತನಿಂದ ದೂರವಾಗಲು ಬಯಸಿದ್ದಳು.ಇದೇ ವಿಚಾರಕ್ಕೆ ಹಲವು ಬಾರಿ ಮನಸ್ತಾಪಗಳಾಗಿದೆ. ಭಾನುವಾರ(ಮೇ.28) ಇಬ್ಬರು ಜಗಳವಾಡಿದ್ದಾರೆ. ಸಾಹಿಲ್ ವರ್ತನೆ ಅತಿಯಾಗುತ್ತಿರುವುದನ್ನು ಅರಿತ ಅಪ್ರಾಪ್ತೆ ಜಗಳವಾಡಿದ್ದಾಳೆ. ಇಷ್ಟೇ ಅಲ್ಲ ಮಾತು ಬಿಟ್ಟಿದ್ದಾಳೆ. ಇದರಿಂದ ಕೆರಳಿದ ಸಾಹಿಲ್, ಅಪ್ರಾಪ್ತೆಯನ್ನು ಹುಡುಕಿಕೊಂಡು ಆಕೆಯ ಮನೆಬಳಿ ಬಂದಿದ್ದಾನೆ. ಈ ವೇಳೆ ಆಕೆ ತನ್ನ ಗೆಳೆತಿಯ ಪುತ್ರನ ಹುಟ್ಟುಹಬ್ಬ ಆಚರಣೆಗೆ ತೆರಳಿರುವ ಮಾಹಿತಿಯನ್ನು ಕಲೆಹಾಕಿದ್ದಾನೆ. 

 

 

ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯತ್ತ ಬಂದ ಸಾಹಿಲ್ ಆಕೆಯನ್ನು ಹಿಡಿದೆಳೆದು 20 ಬಾರಿ ಚಾಕುವಿನಿಂದ ಇರಿದ್ದಾನೆ. ಈ ಘಟನೆ ನಡೆಯುತ್ತಿದ್ದ ವೇಳೆ ಹಲವರು ಇದೇ ರಸ್ತೆಯಲ್ಲಿ ಸಾಗಿದ್ದಾರೆ. ಆದರೆ ಯಾರೊಬ್ಬರು ಯುವತಿಯ ನೆರವಿಗೆ ಬಂದಿಲ್ಲ. ಇತ್ತ ಸಾಹಿಲ್ ದಾಳಿಯಿಂದ ನೆಲಕ್ಕುರುಳಿದ ಅಪ್ರಾಪ್ತೆ ಸಾವುಬದುಕಿನ ನಡುವೆ ನರಳಾಡಿದ್ದಾಳೆ. ಇತ್ತ ಈಕೆ ಇನ್ನೂ ಸತ್ತಿಲ್ಲ ಎಂದು ಪಕ್ಕದಲ್ಲೇ ಇದ್ದ ದೊಡ್ಡ ಕಲ್ಲೊಂದನ್ನು ಆಕೆಯ ತಲೆ ಮೇಲೆ ಎತ್ತಿಹಾಕಿದ್ದಾನೆ. ಬಳಿಕ ಅಲ್ಲಂದ ಪರಾರಿಯಾಗಿದ್ದಾನೆ. 

ಉದ್ಯೋಗ ಸಿಗದ 22ರ ಹರೆಯದ ಯುವತಿಯ ದುಡುಕಿನ ನಿರ್ಧಾರ, ಉಡುಪಿಯಲ್ಲಿ ನಡೆಯಿತು ಕರಾಳ ಘಟನೆ!

ಈ ಪ್ರಕರಣ ದೆಹಲಿಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಒಂದೆಡೆ ಮಹಿಳಾ ಆಯೋಗ ಪೊಲೀಸರಿಗೆ ನೋಟಿಸ್ ನೀಡಿದರೆ, ಇತ್ತ ದೆಹಲಿ ಆಮ್ ಆದ್ಮಿ ಸರ್ಕಾರ, ಪೊಲೀಸ್ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ದೆಹಲಿ ಜನತಗೆ ರಕ್ಷಣೆ ನೀಡುವ ಜವಾಬ್ದಾರಿ ಲೆಫ್ಟಿನೆಂಟ್ ಗವರ್ನರ್ ಜವಾಬ್ದಾರಿ. ಆದರೆ ಗವರ್ನರ್ ಮಾತ್ರ ಅರವಿಂದ್ ಕೇಜ್ರಿವಾಲ್ ಸರ್ಕಾರ ವಿರುದ್ಧ ಹರಿಹಾಯಲು ಸಮಯಕಳೆಯುತ್ತಿದ್ದಾರೆ ಎಂದು ಖುದ್ದು ಅರವಿಂದ್ ಕೇಜ್ರಿವಾಲ್ ಹಾಗೂ ಆಪ್ ಸಚಿವರು ಕೆಸರೆರಚಾಟ ಶುರುಮಾಡಿದ್ದರು. 

Follow Us:
Download App:
  • android
  • ios