ಮನೆ ಮುಂದೆ ನಿಲ್ಲಿಸಿದ್ದ ಡಿಯೋ ಸ್ಕೂಟರ್‌ ಬೈಕ್‌ಗಳಿಂದ ರಾತ್ರೋರಾತ್ರಿ ಪೆಟ್ರೋಲ್ ಕಳುವು ಮಾಡುತ್ತಿರುವ ಗ್ಯಾಂಗ್ ಕೈಚಳಕ ಕಂಡು ಸ್ಥಳೀಯರು ಕಂಗಾಲಾಗಿದ್ದಾರೆ.

ನೆಲಮಂಗಲ (ಅ.28): ಮನೆ ಮುಂದೆ ನಿಲ್ಲಿಸಿದ್ದ ಡಿಯೋ ಸ್ಕೂಟರ್‌ ಬೈಕ್‌ಗಳಿಂದ ರಾತ್ರೋರಾತ್ರಿ ಪೆಟ್ರೋಲ್ ಕಳುವು ಮಾಡುತ್ತಿರುವ ಗ್ಯಾಂಗ್ ಕೈಚಳಕ ಕಂಡು ಸ್ಥಳೀಯರು ಕಂಗಾಲಾಗಿದ್ದಾರೆ.

ನೆಲಮಂಗಲದಲ್ಲಿ ರಾತ್ರಿಯಾದರೆ ಪೆಟ್ರೋಲ್ ಕಳ್ಳರ ಹಾವಳಿ ವಿಪರೀತವಾಗಿದೆ. ಮನೆಯೊಳಗೆ ಬೈಕ್ ಸ್ಕೂಟರ್ ನಿಲ್ಲಿಸಲು ಸ್ಥಳ ಇಲ್ಲದವರು ಮನೆಯ ಹೊರಗಡೆ ನಿಲ್ಲಿಸಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಖತರ್ನಾಕ್ ಗ್ಯಾಂಗ್ ಕತ್ತಲಾಗ್ತಿದ್ದಂತೆ ಬೈಕ್ ಮೇಲೆ ಬಂದು ಕ್ಷಣಮಾತ್ರದಲ್ಲಿ ಪೆಟ್ರೋಲ್ ಕದ್ದು ಎಸ್ಕೇಪ್ ಆಗುತ್ತಿದ್ದಾರೆ. ಇವರ ಕೈಚಳಕ ನೋಡಿದ್ರೆ ವೃತ್ತಿಪರ ಖದೀಮರಾಗಿದ್ದು, ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ದಸರಾ ಹಬ್ಬದಲ್ಲಿ ಮಾರಾಟಕ್ಕೆ ಸಂಗ್ರಹಿಸಿದ್ದ ಮೊಬೈಲ್‌, ಟಿವಿ ಕದ್ದೊಯ್ದ ಖದೀಮರು

ನೆಲಮಂಗಲ ನಗರದ ಸದಾಶಿವನಗರದಲ್ಲಿ ಮನೆಮುಂದೆ ನಿಲ್ಲಿಸಿದ್ದ ವೇಳೆ ಬೈಕ್ ಮೇಲೆ ಬಂದಿರುವ ಖದೀಮರು. ಪೆಟ್ರೋಲ್ ಪೈಪ್ ಕಿತ್ತು ಕದ್ದು ಪರಾರಿಯಾಗಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯಾಗಿದ್ದು ಪೆಟ್ರೋಲ್ ಕಳ್ಳತನ ಮಾಡುತ್ತಿರುವ ಸಿಸಿಟಿವಿ ದೃಶ್ಯ ವಾಟ್ಸಪ್ ಮೂಲಕ ವೈರಲ್ ಆದ ಬೆನ್ನಲ್ಲೇ ಸ್ಥಳೀಯರು ಬೈಕ್‌ಗಳನ್ನು ಹೊರಗಡೆ ನಿಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಮರ್ಸಿಡಿಸ್ ಬೆಂಜ್!

ಮರ್ಸಿಡಿಸ್ ಬೆಂಜ್ ಕಾರೊಂದು ವೇಗವಾಗಿ ಚಲಿಸಿ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಬೆಂಗಳೂರಿನ ಜೆಪಿ ನಗರದ 8ನೇ ಪೇಸ್‌ನಲ್ಲಿ ನಡೆದಿದೆ. ಈ ವೇಳೆ ಬೈಕ್‌ಗೂ ಡಿಕ್ಕಿಯಾಗಿರುವ ಡಿಕ್ಕಿಯಾದ ರಭಸಕ್ಕೆ ಕಾರಿನ ಮೇಲೆ ಬಂದು ಬಿದ್ದಿರುವ ಬೈಕ್ ಸವಾರ. ತೀವ್ರವಾಗಿ ಗಾಯಗೊಂಡಿದ್ದು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಲಾರದಿಂದ ಬೆಂಗಳೂರಿಗೆ ಬಂದು ಬೈಕ್‌ ಕದ್ದು ಪರಾರಿಯಾಗುತ್ತಿದ್ದ ಮೂವರು ಕಳ್ಳರು ಬಂಧನ

ಸ್ಥಳಕ್ಕೆ ಜಯನಗರ ಸಂಚಾರ ಪೊಲೀಸರು ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ.