Asianet Suvarna News Asianet Suvarna News

ಕೋಲಾರದಿಂದ ಬೆಂಗಳೂರಿಗೆ ಬಂದು ಬೈಕ್‌ ಕದ್ದು ಪರಾರಿಯಾಗುತ್ತಿದ್ದ ಮೂವರು ಕಳ್ಳರು ಬಂಧನ

ಕೋಲಾರದಿಂದ ರಾತ್ರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರಿಗೆ ಬಂದು ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

Maryade hatye A father killed his daughter who ran away with her lover bengaluru rav
Author
First Published Oct 23, 2023, 4:36 AM IST

ಬೆಂಗಳೂರು (ಅ.23) :  ಕೋಲಾರದಿಂದ ರಾತ್ರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರಿಗೆ ಬಂದು ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೋಲಾರದ ಜಿಲ್ಲೆ ಮುಳಬಾಗಿಲು ತಾಲೂಕಿನ ನವಕ್ಕಲ್‌ ಬಂಡೆ ನಿವಾಸಿ ಮಹಮ್ಮದ್‌ ಆಸೀಫ್‌ (27), ಮಹಮ್ಮದ್‌ ವಾಸೀಂ (22) ಹಾಗೂ ಸೈಯದ್‌ ಆಸೀಫ್‌ (25) ಬಂಧಿತರು. ಆರೋಪಿಗಳಿಂದ ₹22.30 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 31 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಕದ್ದ ಬೈಕ್‌ ಹಳ್ಳಿಗಳಲ್ಲಿ ಮಾರಾಟ

ಆರೋಪಿಗಳು ಕದ್ದ ದ್ವಿಚಕ್ರ ವಾಹನಗಳನ್ನು ಮುಳಬಾಗಿಲು ಸುತ್ತಮುತ್ತಲ ಹಳ್ಳಿಗಳಲ್ಲಿ 5, 10, 15 ಸಾವಿರ ರುಪಾಯಿಗೆ ಮಾರಾಟ ಮಾಡುತ್ತಿದ್ದರು. ಮಾರಾಟಕ್ಕೂ ಮುನ್ನ ದ್ವಿಚಕ್ರ ವಾಹನಗಳ ನೋಂದಣಿ ಫಲಕ ಹಾಗೂ ಚಾಸಿ ಸಂಖ್ಯೆ ಬದಲಿಸುತ್ತಿದ್ದರು. ಕಡಿಮೆ ಬೆಲೆಗೆ ದ್ವಿಚಕ್ರ ವಾಹನಗಳು ಸಿಗುತ್ತಿದ್ದರಿಂದ ಹಳ್ಳಿ ಜನರು ದಾಖಲೆ ಕೇಳದೇ ದ್ವಿಚಕ್ರ ವಾಹನ ಖರೀದಿಸುತ್ತಿದ್ದರು.

ತುಮಕೂರಿನಲ್ಲಿ ರೌಡಿಶೀಟರ್ ಪೊಲಾರ್ಡ್‌ ಬರ್ಬರ ಹತ್ಯೆ

31 ಪ್ರಕರಣ ಪತ್ತೆ

ಆರೋಪಿಗಳ ಬಂಧನದಿಂದ ಕಾಟನ್‌ಪೇಟೆ ಠಾಣೆಯ ಆರು, ಕಲಾಸಿಪಾಳ್ಯ, ಸಿ.ಟಿ.ಮಾರ್ಕೆಟ್‌, ಚಾಮರಾಜಪೇಟೆ ಠಾಣೆಗಳ ತಲಾ ಎರಡು, ಹೆಬ್ಬಾಳ, ಹಲಸೂರು, ಕೋಲಾರ ಟೌನ್‌, ಶ್ರೀನಿವಾಸಪುರ ಠಾಣೆಗಳ ವ್ಯಾಪ್ತಿಯಲ್ಲಿ ಕಳವುವಾಗಿದ್ದ ಒಟ್ಟು 31 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮರ್ಯಾದೆಗೇಡು ಹತ್ಯೆ

ಪ್ರಿಯಕರನ ಜತೆಗೆ ಮಗಳು ಓಡಿ ಹೋಗಿದ್ದರಿಂದ ಊರಲ್ಲಿ ತನ್ನ ಮರ್ಯಾದೆ ಹೋಯಿತು ಎಂದು ತಂದೆಯೇ ಮಗಳನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿರುವ ಅಮಾನುಷ ಘಟನೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಮೈಸೂರಿನ ಎಚ್‌.ಡಿ.ಕೋಟೆ ಮೂಲದ ಪಲ್ಲವಿ(17) ಕೊಲೆಯಾದ ದುರ್ದೈವಿ. ಆಕೆಯ ತಂದೆ ಗಣೇಶ್‌(50) ಬಂಧಿತ. ಪರಪ್ಪನ ಅಗ್ರಹಾರ ಸಮೀಪದ ನಾಗನಾಥಪುರದ ಡಾಕ್ಟರ್ಸ್‌ ಲೇಔಟ್‌ನಲ್ಲಿ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. 

ಮಗಳು ಲವ್‌ ಮಾಡಿ ಓಡಿಹೋಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ತಂದೆ

ಮನೆ ಸಮೀಪದ ಕಾಲೇಜಿನಲ್ಲಿ ಪಲ್ಲವಿ ಪ್ರಥಮ ಪಿಯುಸಿ ಓದುತ್ತಿದ್ದಾಗ ಮನೋಜ್‌ ಎಂಬ ಯುವಕನ ಪರಿಚಯವಾಗಿ ಪ್ರೀತಿಸುತ್ತಿದ್ದಳು. ಅದಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದಾಗ ಓಡಿಹೋಗಿದ್ದಳು. ನಂತರ ಅವಳನ್ನು ತಂದೆ ಪತ್ತೆಹಚ್ಚಿ ಕರೆದುಕೊಂಡು ಬಂದಿದ್ದ. ಮತ್ತೆ ಆಕೆ ಓಡಿಹೋಗಲು ಯತ್ನಿಸಿದಾಗ ಕೊಲೆಗೈದಿದ್ದಾನೆ.

Follow Us:
Download App:
  • android
  • ios