ಅಂಗಡಿಗೆ ಕೆಲವು ಸಮಯದಿಂದ ಗೋಮಾಂಸ ಸಾಗಿಸುತ್ತಿದ್ದ ರಶೀದ್‌| ಟೆಂಪೋದಲ್ಲಿ ಸುಮಾರು 200 ಕೆ.ಜಿ. ದನದ ಮಾಂಸ ಸಾಗಾಟ|  ಜನರು ಕಾರು ಹಾಗೂ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಫಳ್ನಿರ್‌ನಲ್ಲಿ ಅಡ್ಡಗಟ್ಟಿ ನಿಲ್ಲಿಸಿ ರಶೀದ್‌ ಹಲ್ಲೆ|

ಮಂಗಳೂರು(ಜೂ.22): ನಗರದ ಕುದ್ರೋಳಿ ಕಸಾಯಿಖಾನೆಯಿಂದ ಕಂಕನಾಡಿಯ ಮಾರುಕಟ್ಟೆಗೆ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಚಾಲಕನ ಮೇಲೆ ಹಲ್ಲೆ ಎಸಗಿದ ಘಟನೆ ಭಾನುವಾರ ಬೆಳಗ್ಗೆ ಫಳ್ನೀರ್‌ನಲ್ಲಿ ನಡೆದಿದ್ದು, ಈ ಸಂಬಂಧ 5 ಮಂದಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಕುದ್ರೋಳಿಯ ರಶೀದ್‌ (57) ಹಲ್ಲೆಗೊಳಗಾದ ವ್ಯಕ್ತಿ. ಸುರತ್ಕಲ್‌ನ ಹೊಸಬೆಟ್ಟು ನಿವಾಸಿ ದೀಕ್ಷಿತ್‌ ಕುಮಾರ್‌ (19), ಕುಚ್ಚಿಗುಡ್ಡೆಯ ರಾಜು ಪೂಜಾರಿ (19), ಮಂಗಳೂರಿನ ಅತ್ತಾವರದ ಸಂತೋಷ್‌ ಕುಮಾರ್‌ (31), ಬಾಲಚಂದ್ರ (28) ಹಾಗೂ ಉಳ್ಳಾಲದ ರಕ್ಷಿತ್‌ (22) ಬಂಧಿತ ಆರೋಪಿಗಳು.

ಮಂಗಳೂರು: ತೆಂಗಿನಕಾಯಿ ಬಿದ್ದು ಯುವಕ ಸಾವು

ಕುದ್ರೋಳಿ ಕಸಾಯಿಖಾನೆಯಲ್ಲಿ ಪಶು ವೈದ್ಯರ ಅಧಿಕೃತ ದೃಢೀಕರಣ ಪತ್ರ ಪಡೆದು ವಧಿಸುವ ಗೋವುಗಳ ಮಾಂಸವನ್ನು ರಶೀದ್‌, ಕಂಕನಾಡಿ ಮಾರುಕಟ್ಟೆಯಲ್ಲಿ ಬೀಫ್‌ ಸ್ಟಾಲ್‌ ಹೊಂದಿರುವ ಝಾಕಿರ್‌ ಅವರ ಅಂಗಡಿಗೆ ಕೆಲವು ಸಮಯದಿಂದ ಸಾಗಿಸುತ್ತಿದ್ದರು. ಭಾನುವಾರ ಬೆಳಗ್ಗೆ ತನ್ನ ಟೆಂಪೋದಲ್ಲಿ ಸುಮಾರು 200 ಕೆ.ಜಿ. ದನದ ಮಾಂಸವನ್ನು ಸಾಗಿಸುತ್ತಿದ್ದಾಗ ಕೆಲವು ಜನರು ಕಾರು ಹಾಗೂ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಫಳ್ನಿರ್‌ನಲ್ಲಿ ಅಡ್ಡಗಟ್ಟಿ ನಿಲ್ಲಿಸಿ ಹಲ್ಲೆ ನಡೆಸಿ ಬಳಿಕ ಮಾಂಸಕ್ಕೆ ಸೀಮೆ ಎಣ್ಣೆ ಸುರಿದಿದ್ದಾರೆ ಎಂದು ಆರೋಪಿಸಲಾಗಿದೆ.

ದನ​ಗಳ ಅಕ್ರಮ ಸಾಗಾ​ಟ

ಬಂಟ್ವಾಳದಲ್ಲಿ ಅಕ್ರಮವಾಗಿ ವಧೆ ಮಾಡುವ ಉದ್ದೇಶದಿಂದ ದನಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್‌.ಐ. ಪ್ರಸನ್ನ ನೇತೃತ್ವದ ತಂಡ ಜಾನುವಾರುಗಳ ಸಹಿತ ಲಕ್ಷಾಂತರ ರು. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಸರಪಾಡಿಯಲ್ಲಿ ರಾತ್ರಿ ನಡೆದಿದೆ. ಚಾಲಕ ಆರೋಪಿ ಮೊಹಮ್ಮದ್‌ ಹನೀಫ್‌ ಎಂಬಾತನನ್ನು ಬಂಧಿಸಿದ ಪೊಲೀಸರು, ಇಬ್ರಾಹಿಂ ಮತ್ತು ಬಾಲಕೃಷ್ಣ ಪೂಜಾರಿ ಮೇಲೆ ಗೋವಧೆ ಪ್ರತಿಬಂಧಕ ಕಾಯಿದೆ ಹಾಗೂ ಪ್ರಾಣಿ ಹಿಂಸೆ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾ​ರೆ. ಆರೋಪಿಗಳಿಂದ ಒಂದು ದನ, ಒಂದು ಹೋರಿ, ಒಂದು ಗಂಡು ಕರು ಹಾಗೂ ಒಂದು ಹೆಣ್ಣು ಕರು ಸಹಿತ 2 ಲಕ್ಷ ರು. ಮೌಲ್ಯದ ಪಿಕಪ್‌ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.