ಧಾರವಾಡ(ಫೆ.15): ನಗ​ರದ ಡಿಪೋ ವೃತ್ತದ ಮನೆಯೊಂದರಲ್ಲಿ ನಡೆದ ಜಗಳದಲ್ಲಿ ಯುವಕನೋರ್ವ ಕೊಲೆಯಾದ ಘಟನೆ ಭಾನುವಾರ ಸಂಭ​ವಿ​ಸಿ​ದೆ.

ಆಕಾಶ ಕೋಟೂರ (26) ಕೊಲೆಯಾದ ಯುವಕ. ಯುವಕನ ಚಿಕ್ಕಪ್ಪ ಪ್ರಕಾಶ ಕೋಟೂರ ಎಂಬಾತ ಕೊಲೆ ಮಾಡಿದ್ದಾನೆ. ಆಕಾಶ ಆಗಾಗ ಮನೆಯಲ್ಲಿ ಮದ್ಯ ಸೇವನೆ ಮಾಡಿ ಬಂದು ಕಿರಿಕಿರಿ ಮಾಡುತ್ತಿದ್ದ. ಅದೇ ರೀತಿ ಭಾನುವಾರವೂ ಮದ್ಯ ಸೇವನೆ ಮಾಡಿ ಬಂದು ಮನೆ​ಯಲ್ಲಿ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಪ್ರಕಾಶ, ಆಕಾಶ ತಲೆಗೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಆಕಾಶ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬೈಕ್ ಹಿಂಬದಿ ಸೀಟಿನಲ್ಲೇ ಯಮರಾಜ... ಕೊಲೆ ಮಾಡಿಸಿದ ಗ್ರಾಪಂ ಜಿದ್ದು

ಘಟನೆ ಮಾಹಿತಿ ತಿಳಿದ ಡಿಸಿಪಿ ಕೆ. ರಾಮರಾಜನ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಸುದ್ದಿಗಾರೊಂದಿಗೆ ಮಾತನಾಡಿ, ಕುಟುಂಬದ ಜಗಳಕ್ಕಾಗಿ ಚಿಕ್ಕಪ್ಪ ಪ್ರಕಾಶ ಕೊಲೆ ಮಾಡಿ ನಾಪತ್ತೆಯಾಗಿದ್ದಾನೆ. ಪ್ರಕಾಶ ಅವರ ಶೋಧ ಕಾರ್ಯ ನಡೆದಿದೆ. ಕೊಲೆ ಹಿಂದೆ ಏನಾದರೂ ಬೇರೆ ಕಾರಣವಿದೆಯೇ ಎಂಬುದು ತನಿಖೆ ನಡೆಸಿದ ಬಳಿಕ ಪತ್ತೆ ಮಾಡಲಾಗುವುದು’ ಎಂದು ಹೇಳಿದರು. ಈ ಕುರಿತು ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.