ಹುಬ್ಬಳ್ಳಿ(ಜ.21):  ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಒಬ್ಬ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಇಲ್ಲಿಯ ಗಿರಿಣಿಚಾಳದಲ್ಲಿ ಬುಧವಾರ ನಡೆದಿದೆ.

ಗಿರಣಿಚಾಳದ ನಿವಾಸಿ ರವಿ ಮುದ್ದಿನಕೇರಿ(35) ಹಲ್ಲೆಗೊಳಗಾಗಿ ಮೃತಪಟ್ಟ ವ್ಯಕ್ತಿ. ಮಂಗಳವಾರ ಕ್ಷುಲ್ಲಕ ಕಾರಣಕ್ಕೆ ಅದೇ ಪ್ರದೇಶದ ವಿಜಯ ಎಂಬಾತನ ಮಧ್ಯೆ ಜಗಳ ನಡೆದಿದೆ. ಈ ವೇಳೆ ವಿಜಯ್‌ ಮಾರಣಾಂತಿಕ ದಾಳಿ ನಡೆಸಿ ರವಿ ಎದೆಗೆ ಗುದ್ದಿಗುದ್ದಿ ಗಾಯಗೊಳಿಸಿದ್ದರು. 

ಬೆಳಗಾವಿ: ಆಸ್ತಿ ವಿವಾದಕ್ಕೆ ಏನೂ ಅರಿಯದ ನಾಲ್ಕು ವರ್ಷದ ಬಾಲಕ ಬಲಿ

ತಕ್ಷಣವೇ ಚಿಕಿತ್ಸೆಗೆ ಕಿಮ್ಸ್‌ಗೆ ದಾಖಲಿಸಲಾಗಿತ್ತು.ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಜಯನನ್ನು ಪಿಐ ರವಿಚಂದ್ರ ಬಡಫಕ್ಕೀರಪ್ಪನವರ ನೇತೃತ್ವದ ತಂಡ ಬಂಧಿಸಿದೆ.