ಪತ್ನಿ ಜತೆ ಜಗಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ
ಉತ್ತರ ಪ್ರದೇಶ ಮೂಲದ ವಕೀಲ ರಾಮ ಪ್ಯಾರೇರಾಮ ಮೃತ ವ್ಯಕ್ತಿ| ಬಾಗಲಕೋಟೆ ಜಿಲ್ಲೆಯ ಇಳಕಲ್ಲನಲ್ಲಿ ನಡೆದ ಘಟನೆ| ಪತ್ನಿಯ ಜತೆ ಆಗಾಗ ನಡೆಯುತ್ತಿದ್ದ ಜಗಳ| ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲನೆ ನಡೆಸಿದ ಪೊಲೀಸರು|
ಇಳಕಲ್ಲ(ಡಿ.23): ಪತ್ನಿ ಜತೆ ಜಗಳಮಾಡಿ ಬೇಸತ್ತ ಪತಿ ತಾನು ದುಡಿಯುವ ಕಾರ್ಖಾನೆಯ ಕಾರ್ಮಿಕರ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ಸಂಜೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ನಗರದಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ವಕೀಲ ರಾಮ ಪ್ಯಾರೇರಾಮ (25) ಮೃತ ವ್ಯಕ್ತಿ. ಇಲ್ಲಿನ ಪೂಜಾ ಗ್ರಾನೈಟ್ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೃತ ವ್ಯಕ್ತಿ ಆಗಾಗ ತನ್ನ ಪತ್ನಿಯ ಜತೆ ನಡೆಯುತ್ತಿದ್ದ ಜಗಳದಿಂದ ಬೇಸತ್ತು ಫ್ಯಾಕ್ಟರಿಯ ಕೋಣೆಯಲ್ಲಿ ವೈರ್ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಣಕಾಸು ವಿಚಾರಕ್ಕೆ ಜಗಳ:ಡೆತ್‌ನೋಟ್ ಬರೆದಿಟ್ಟು ಬಿಲ್ಡರ್ ಆತ್ಮಹತ್ಯೆ
ಈ ಕುರಿತು ಇಳಕಲ್ಲ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸೈ ಎಸ್.ಬಿ.ಪಾಟೀಲ ಪರಿಶೀಲಿಸಿ ತನಿಖೆ ನಡೆಸಿದ್ದಾರೆ. ಮೃತನ ದೇಹವನ್ನು ಉತ್ತರ ಪ್ರದೇಶ ರಾಜ್ಯದ ಚಂದೌಲಿ ಜಿಲ್ಲೆಯ ದರೌಲಿ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗಿದೆ.