ಹಣಕಾಸು ವಿಚಾರಕ್ಕೆ ಜಗಳ:ಡೆತ್‌ನೋಟ್ ಬರೆದಿಟ್ಟು ಬಿಲ್ಡರ್ ಆತ್ಮಹತ್ಯೆ
ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಪಾಲುದಾರ ಅಡ್ಡಿ| ಜಗಳ, ಕಿರುಕುಳ| ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣು| ಬೆಂಗಳೂರಿನ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ|
ಬೆಂಗಳೂರು(ಡಿ.12): ಹಣಕಾಸಿನ ವಿಚಾರದಲ್ಲಿ ನಡೆದ ಜಗಳದಿಂದ ನೊಂದು ಬಿಲ್ಡರ್‌ವೊಬ್ಬರು ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಟಿಎಂ ಲೇಔಟ್‌ನ ನಿವಾಸಿ ವಿವೇಕ್ (50) ಆತ್ಮಹತ್ಯೆ ಮಾಡಿಕೊಂಡವರು.
ವಿವೇಕ್ ಅವರು ಪಾಲುದಾರರ ಜತೆ ಸೇರಿ ಅಪಾರ್ಟ್‌ಮೆಂಟ್ ನಿರ್ಮಿಸಿ ಮಾರಾಟ ಮಾಡುತ್ತಿದ್ದರು. ಪಾಲುದಾರನ ಜತೆಗೆ ಹಣಕಾಸಿನ ವಿಚಾರದಲ್ಲಿ ಜಗಳವಾಗಿತ್ತು. ಇದರಿಂದ ವಿವೇಕ್ ಬೇಸರಗೊಂಡಿದ್ದರು. ಅಪಾರ್ಟ್‌ಮೆಂಟ್ ನಿರ್ಮಿಸುತ್ತಿದ್ದ ಸ್ಥಳಕ್ಕೆ ಪಾಲುದಾರರ ಕಡೆಯವರು ಬಂದು ವಸ್ತುಗಳಿಗೆ ಹಾನಿ ಮಾಡಿದ್ದರು. ಇದರಿಂದ ನೊಂದ ವಿವೇಕ್, ಗುರುವಾರ ಡೆತ್‌ನೋಟ್ ಬರೆದು ಮನೆಯಲ್ಲೇ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅಂಕೋಲಾ: ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ
ವಿವೇಕ್, ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ್ ಬಳಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯ ಸಹೋದರ ಸಂಬಂಧಿಯಾಗಿದ್ದಾರೆ. ಮತ್ತೊಬ್ಬ ಬಿಲ್ಡರ್ ರಹೀಮ್ ಎಂಬಾತನ ಕಿರುಕುಳಕ್ಕೆ ಬೇಸತ್ತಿದ್ದರು ಎಂಬ ಅರೋಪ ಕೇಳಿ ಬಂದಿದೆ. ಜಾಯಿಂಟ್ ವೆಂಚರ್ಸ್ ಮೂಲಕ ಮೃತ ವಿವೇಕ್ ಹಾಗೂ ರಹೀಮ್ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡುತ್ತಿದ್ದರು. ಅಂತಿಮ ಹಂತದಲ್ಲಿದ್ದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ರಹೀಮ್ ಅಡ್ಡಿಪಡಿಸುತ್ತಿದ್ದ. ದೊಡ್ಡ ಮೊತ್ತದ ಹಣವನ್ನು ವಿವೇಕ್‌ಗೆ ರಹೀಮ್ ಕೊಡುವ ಬಗ್ಗೆ ಒಪ್ಪಂದವಾಗಿತ್ತು. ಹೀಗಿದ್ದರೂ ಹಣ ನೀಡದೆ ಕಿರುಕುಳ ನೀಡುತ್ತಿದ್ದ. ಗುರುವಾರ ಬೆಳಗ್ಗೆ ರಹೀಮ್ ಕಡೆಯವರು ಕಟ್ಟಡದ ಬಳಿ ಹೋಗಿ ದಾಂಧಲೆ ನಡೆಸಿದ್ದರು ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.